ಶನಿವಾರ, ಜೂನ್ 22, 2013

ಮಳೆಗೊಂದು ಆಹ್ವಾನ 
ಶ್ರಾವಣಕೆ ಕಾಯಲಾರೆ ನನ್ನೆದೆ ಹಬ್ಬವಿಂದು ಬಂದು ಬಿಡು ರಂಗೋಲಿಯ ಸಪ್ತ ವರ್ಣದ ಮೇಲೆ ಹೆಜ್ಜೆಯಿರಿಸಿ ,ಪ್ರಿಯಹೃದಯವೇ ಆಷಾಡ ,ಅಮಾವಾಸ್ಯೆ ರಾಹುಕಾಲಗಳ ಮೀರಿ ನರ್ತಿಸುವ ಹೂ ಮನಕ್ಕೆ ಏನುತ್ತರಿಸಲಿ ?ನಿನ್ನ ಬರುವಿಗಾಗಿ ಸ್ತಭ್ದವಾದ ಸಂಜೆಗೆಂಪಿನ ಆಕಾಶ ,ರಾತ್ರಿಗೆ ಅಡ್ಡ ನಿಂತು ,ನಿದ್ದೆಗೆ ಹೊಡೆತ ಕೊಟ್ಟು ಕಾಲವಾಗಿದೆ ,ದುಂಬಿ ಕಂಗಳ ಮುತ್ತ ಹನಿ ತುಟಿಗಿಳಿದು ಉಪ್ಪಾಗಿಸುವುದು ಸಹ್ಯವೇ ? ಅಂದು ಧೂಳಿನ ತೆರೆಯಲಿ ನಿನ್ನ ಕೈ ಬೀಸುವಿಕೆ ನೋಡಿದಾಗ ,ಪುನಹ ಕರೆದರೋ ಎಂಬ ಬ್ರಮೆಗೆ ಮತ್ತೆ ಬಂದಿದ್ದೆ ,ದೇಹವಿರಿಸಿ ಉಸಿರ ಮಾತ್ರ ಹೊತ್ತು ದೇಹಾತೀತ ನೀಲದಲ್ಲಿ ,ಅಲ್ಲಿ ನೀನು ಆಗಸದಲ್ಲಿ ಮೋಡದ ಮರೆಯಲಿ ,ಮಹಾವಿಷ್ಣುವಿನoತೆ ಕಮಲದ ಹಾಸಿಗೆಯಲ್ಲಿ ಪವಡಿಸಿದ್ದನ್ನ ನೋಡಿದೆ ,ಕಾಲಿನತ್ತ ನೋಡಲಿಲ್ಲ ,ಲಕ್ಷ್ಮಿಯಿದ್ದಳೋ ಎಂಬ ಅಹಿತ , ಇರಲಿ ನನ್ನೂಹೆಗಳು ,ಧಾವಿಸು ನನ್ನರಮನೆಗೆ ,ಸದ್ಭಾವಗಳ ಪುಷ್ಪವ ಚೆಲ್ಲಿ ,ಹಾಲಿನ ಗಿಂಡಿಯಲ್ಲಿ ಸಕ್ಕರೆ ,ಪಚ್ಹ ಕರ್ಪೂರವ ಬೆರೆಸಿ ,ಧೂಪ ಹಚ್ಹಿ ,ಗಂಧ ಲೇಪವನಿತ್ತು ,ಹೂ ಹಾರದ ತೋಳಿನಲಂಕಾರ ಸಿದ್ದಪಡಿಸಿರುವೆ ಸ್ಪರ್ಶ ಹಿತಕೆ ,ನೀ ಬರುವವರೆಗೂ ಉಸಿರಾಡಲಾರೆ ,ಕೆನ್ನೆ ಮೇಲೊoದು ಹನಿ ,ನೆನೆಯುವಷ್ಟು ಸುಜಲ ಧಾರೆ ಇದ್ದರಾಯಿತು ನೋಡು ,ಸ್ವರ್ಗ ಸಮ ನಿನ್ನ ದರ್ಶನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ