ಮಂಗಳವಾರ, ಸೆಪ್ಟೆಂಬರ್ 24, 2013

ಬಾಲಸುಬ್ರಹ್ಮಣ್ಯ ನ ಹಬ್ಬ

ಬಾಲಸುಬ್ರಹ್ಮಣ್ಯ ನ ಹಬ್ಬ 

ಆಡಿ ಕೃತ್ತಿಕೆ ನಾಳೆ ,ಇಂದು ಭರಣಿ ಕಾವಡಿ 
ಬಾಲಸುಬ್ರಹ್ಮಣ್ಯ ನ ನೆನೆಯಿರಿ 
ಕಾವಡಿಯನ್ನು ಹೊತ್ತು ದೇಗುಲದತ್ತ 
ಹೆಜ್ಜೆ ಹಾಕುವಾಗ ಹರಕೆ ಹೊತ್ತವರು
ಆತ್ಮೀಯರು ಏಕ ದನಿಯಲ್ಲಿ
'''ಹರೋಹರ' ''ಎಂದು ಕೂಗುವರು
ಬಾಲಸುಬ್ರಹ್ಮಣ್ಯನ ನೆನೆವರಿಂದು
ಬೇಡಿಕೆ ಈಡೇರಿಸುವ ಕಾಮಧೇನು-
ಕಲ್ಪವೃಕ್ಷ ವವನು ಮುರುಗ
ಭಕ್ತರು ಕಾವಡಿಯನ್ನು ಹೊತ್ತು ತಂದು
ಹರಕೆ ತೀರಿಸಿ ಧನ್ಯರಾಗುವರು
ಮೊದಲನೇ ದಿನ ಭರಣಿ ಕಾವಡಿ.
ಎರಡನೇ ದಿನ ಆಡಿ ಕೃತ್ತಿಕೆ.
ಕಾವಡಿಗಳಲ್ಲಿ ನವಿಲು ಕಾವಡಿ, ಜೇನು ಕಾವಡಿ,
ಹಾಲು ಕಾವಡಿ, ಪುಷ್ಪ ಕಾವಡಿ ಸೇರಿ
ಹಲವು ಬಗೆಯ ಕಾವಡಿಗಳನ್ನು ತಂದು,
ಹರಕೆ ತೀರಿಸಿ ಬಾಲಸುಬ್ರಹ್ಮಣ್ಯ ಸ್ವಾಮಿಯಲ್ಲಿ
ಮೊರೆ ಇಡುವರು ''ಅಪ್ಪಾ ಮುರುಗಾ'' ಎನುವರು
ಬಾಲಸುಬ್ರಹ್ಮಣ್ಯ ಮಹಾ ಹೃದಯಸ್ಥ ಸ್ವಾಮಿ
ಭಕ್ತರು ಒಂದು ದಂಡದ ಎರಡೂ ಬದಿಗೆ
ಬುಟ್ಟಿಯನ್ನು ಕಟ್ಟಿ, ಒಂದರಲ್ಲಿ ಪೂಜೆ ಸಾಮಗ್ರಿ,
ಇನ್ನೊಂದರಲ್ಲಿ ಹೂಗಳನ್ನಿಟ್ಟು ಹೊತ್ತು ತರುತ್ತಾರೆ.
ಕೆಲವೊಮ್ಮೆ ,................. ಇಲ್ಲಿ ದೇಗುಲದಲ್ಲಿ
ನಾಲಗೆ, ಕೆನ್ನೆಗೆ, ಚೂಪಾದ ಶೂಲದಿಂದ ಚುಚ್ಚಿ
ಬೆನ್ನಿಗೆ ಕೊಂಡಿಯ ಮೂಲಕ ಹಗ್ಗಕಟ್ಟಿ ತೇರನ್ನು
ಮನೆ ಬಾಗಿಲಿನಿಂದ ದೇಗುಲದ ವರೆಗೆ ಎಳೆದು ತರುವರು
ಬಾಲ ಸುಬ್ರಮಣ್ಯನ ಭಕ್ತರು

ನಕ್ಷತ್ರಗಳು

ನಿನಗೆ ರಜೆಯೆಂದರೆ ಮನೆ ಹೊರಗೆ ನಿಂತು ಮಳೆ ನೋಡುವ ಕುಶಿಯ ಹಾಗಿದೆಯಾ ?
ತಂಪು ಗಾಳಿಗೆ ಕೆನ್ನೆಯೊಡ್ಡಿ ಸುಖಿಸುವ ಹಾಗಿದೆಯಾ ?
ಅರಳಿದ ಹೂಗಳಿಗೆ ತುಟಿ ತಾಗಿಸಿ ಮೆಲ್ಲನೆ ಬಿಸಿ ಸೋಕಿಸದೇ ನಗುವಂತಿತ್ತೇ ?
ನೆಲದಲ್ಲಿ ಮಲಗಿ ಪುಸ್ತಕವೊಂದ ನೋಡುತ್ತಾ ಪ್ರಿಯವಾದ ಸಾಲುಗಳ ಮತ್ತೆ ಮತ್ತೇ ಓದುವ೦ತಿತ್ತೇ ?
ಏನು ಮಾಡುವಿ ನೀನು ನಕ್ಷತ್ರಗಳು ನಿನ್ನ ಮನೆ ತುಂಬಿ ಕೊಂಡರೆ ?...
ನಿನ್ನ ಸಮ ಸೂರ್ಯ ಚಂದ್ರ ಚಿಣ್ಣರೂ ನಿನ್ನಂತೆ ಕನಸುಗಾರರಾದರೆ ?
ಎದೆ ಬಿಡಿಸಿ ತಣ್ಣೀರ ಹಾಕಿಸಿ ಕೊಳ್ಳಬಲ್ಲೆಯಾ ಮಳೆಯ ಸೊಗಸಿನೆದುರು ?
ರಜೆಗೆ ನಾನಿತ್ತ ಹೊಸತನದ ನವಿರ ಹೊರಳಿಸಿ ಕೊಡಬಲ್ಲೆಯಾ ಹೆಸರ ?
ಕಳೆದು ಬಿಡುವೆಯಾ ದಿನವ ನಲ್ಲೆಯೆದುರಿನಲ್ಲಿ ?ಹೂ ತೋಳಿನಲ್ಲಿ .....ಉಸಿರ

ಐಕ್ಯ

ಐಕ್ಯ 

ನನ್ನೊಳಗಿದ್ದ ಸರ್ಪ ಇಳಿದು ತೇಜಸ್ಸಿಗೆ ಎದೆ ಕೊಟ್ಟ ಮೇಲೆ 
ನೇರಳೇ ಬೆಳಕ ಬಿಟ್ಟು ಹುಡುಕಿಸಿದೆ ...ಸಿಗುತ್ತಿಲ್ಲ ... 
ಸುತ್ತಿಕೊಂಡ ಸರ್ಪ ತಳಿಕೆ ಸಡಿಲಿಸಿ ಪೊರೆ ಹರಿ ಒಮ್ಮೆ 
ನಿನ್ನ ಮೂಲಾಧಾರದಲಿ ವಿಸ್ತರಿಸಿತ್ತೋ...ಎಂದು ನೋಡುತ್ತೇನೆ ....

ತವಕ

ನಿನ್ನ ವಿಪ್ಲವದ
ಸಪ್ಪಳ ಕೇಳಿ 
ಧಾವಿಸಿ
ಅಪ್ಪುವ ತವಕ ....

ಕಣ್ಣೀರ ಧಾರೆ

ಕಂದನ ನೆನೆದಾಗಲೆಲ್ಲಾ
ಉಕ್ಕುವ ಎದೆ ಹಾಲಿನಂತೆ, 
ನಿನ್ನ ನೆನೆದಾಗಲೆಲ್ಲಾ
ಕಂಗಳಲಿ ಕಣ್ಣೀರ ಧಾರೆ

ಕಂಪನ

ನೀ ತುಟಿಯಿಟ್ಟಲ್ಲಿ ಹೊತ್ತು ತಪ್ಪಿ 
ಕೆನ್ನೆಯಿಳಿಜಾರಲಿ ಮುತ್ತನೊತ್ತಿ 
ಮೆಲ್ಲನಿಳಿದು ತೊಡೆಯನೊರಗಿಕೊoಡೆ ,
ನಿನ್ನ ಕೂದಲಲಿ ಬೆರಳಿಟ್ಟು ಆ ಕಂಪನದಿ 
ನಡುಗಿ ನಿನ್ನಪ್ಪಿಕೊಂಡೆ .....

ನನ್ನವನು

ನನ್ನವನು 

ಸದಾ ಹೂ ತೋಳಿನ ಮೇಲೆ ಹೊತ್ತು 
ಕಷ್ಟಗಳ ನನಗೆ ಹೊರೆಸದವನು 
ಕಣ್ಣೀರ ತುಟಿಗಳಲೇ ಹೀರಿ 
ಸಿಹಿ ಮುತ್ತಲೇ ಸಿಂಗರಿಸುವನು ..ನನ್ನವನು 
ಎದೆಯ ಸಾರ್ವಬೌಮ ಸುಂದರ ನಗುವವನು
ನಾನೇನ ಕೊಡದಿದ್ದರೂ ನನ್ನೊಳಗೇ
ರಾಜ್ಯಭಾರದ ವಿಸ್ತಾರ ಕ್ಷಣವೂ ಬಿಡದೇ ಹರಡುವನು
ನನ್ನೆದೆಯನಾಳಿ ನಾಳೆಗೂ ನಿಂತವನು ..ನನ್ನವನು
ನಾನೆಂದರೆ ಪ್ರಾಣವೆಂದು ಕಣ್ಣಲ್ಲೇ ಹೇಳುವನು
ಕೈ ಹಿಡಿಯದೆಯೂ ಉಸಿರ ಕೊಡುವನು
ಸಮಯ ಸಾದಕನಲ್ಲ ಬಾದಕನಲ್ಲ
ಹೂಮನದ ಸಿರಿಯವನು .... ನನ್ನವನು

ಕಲ್ಪನೆ

ಕಲ್ಪನೆ 

ನೀವು ಭೀಮನಂತೆಯೋ ... ಭುಜದುದ್ದ ಎಳೆದು ಉಸಿರುಗಟ್ಟಿಸುವವರೋ ?
ಅರ್ಜುನನಂತೆ ಮೆಲ್ಲ ಮೆಲ್ಲನೆ ಸೋಕಿ ಮೈಮರೆಸುವ ಮಾತಿನವರೋ ?
ಹೆಣ್ಣಿನ ಕುತೂಹಲಕ್ಕೆ ಕೊನೆಯಿರದ್ದಕ್ಕೆ ಧರ್ಮರಾಯನಂತೆ ಮುನಿಸೋ ?
ಮೊದಲು ಕೊನೆ ಹೇಳದ್ದಕ್ಕೆ ನಕುಲ ಸಹದೇವರoತೆ ಕಸಿವಿಸಿಯೋ ?
ಸರ್ವತೆಯೂ ನಿನ್ನಲ್ಲಿ ಕರಗಿ ಪುರುಷ ಸಿಂಹವೆನಿಸುವುದು ಮನದಲ್ಲಿ ... ಅಹುದೇ?

ನಿನ್ನೊಳಗೆ

ನಿನ್ನೊಳಗೆ

ಇಲ್ಲವಾದವರಿಗೂ ಸೆಳೆತಗಳಿರುತ್ತದೆಂದು
ನಿನ್ನೊಳಗೆ ಹೋದ ನಂತರ ಗೊತ್ತಾಯಿತು ,
ಈಗ ನಾನು ನಿನ್ನೊಳಗಿನ ಕೋಣೆ ಜೋಡಿಸುವುದರಲ್ಲಿ 
ಸತತ ಮಗ್ನೆ , ಇಲ್ಲಿ ಎತ್ತಿಟ್ಟಷ್ಟೂ ಹೂ ಮಳೆ

ಮನನ

ಮನನ 

ಅವನಿಗೆ ಅರ್ಥವಾಗುವರೆಗೂ ಹೋಗುತ್ತಿರುತ್ತೇನೆ 
ಎಂದು ನಡೆದುಕೊಂಡು ಸಾಗರ ತಟದಲ್ಲಿ ,
ಕೋಟಿ ಮೈಲು ನಡೆದದ್ದೂ ಕ್ಷಣದಂತಿದೆ ...........

ಹೂವಾಡಗಿತ್ತಿ

ಹೂವಾಡಗಿತ್ತಿ 

ಕಣ್ಣರಳಿಸಿದ ಪ್ರಿಯನ ಹೆಜ್ಜೆ ಹಿಂಬಾಲಿಸಿದೆ 
ನಸುನಕ್ಕ ಮಗುವಿನ ಕೈಯಲ್ಲಿ ಗುಲಾಬಿಯಿತ್ತು 
ಅವಳ ಗೆಜ್ಜೆಗೆ ಸೋಲದವರಾರು 
ಬರದ ದಿನವಿಲ್ಲ ಕಣ್ಣ ತoಪಾಗಿಸಲಿಕ್ಕೆ....

ಕೂಗುವಳು ಹೂವ ಕಟ್ಟಿ ತಂದು
ನೆನೆದಂತೆ ಬಣ್ಣಗಳ ಪೋಣಿಸಿಟ್ಟು...
ಅವಳ ಕೈರಸಿಕತೆಯ ಸಿದ್ಧ್ಹಿ ,
ಹೂಮಾಲೆಯ ಚೆಲುವಿಕೆಯೆ ಸಾಕ್ಷಿ

ತಲೆಯ ಮೇಲಿನ ಬುಟ್ಟಿ ,ಬಳಕುವ ಸೊಂಟ
ಅವಳು ಹಿಂದೆಸೆವ ಹಾವಿನ ಜಡೆ ಮಾರುದ್ದ ...
ನಕ್ಕರವಳು ಬೀದಿಗೇ ಹಬ್ಬ.. ದಿನಾ ಬರುವವಳು
ಮತ್ತೆ ಮುತ್ತಿನ ಹಲ್ಲು ತೆರೆದು ಕರೆವಳು ...

ದೇವ ಕಾಯುವ ಅವಳ ಸೃಷ್ಟಿ ಮಾಲೆಯ ಸೊಬಗಿಗೆ
ಬೆರೆಸಿ ತರುವಳು ಒಲವ ಅದರೊಳಗೆ , ನಾ ನೋಡುವಲ್ಲಿ
ಇರಲಿಲ್ಲ ಹೂವೊಳಗೆ ಹೃದಯ ,ಬೆರೆತುಕೊಂಡೆ ಘಮದೊಳಗೆ
ಹೂವ ಪ್ರತಿದಳದಲ್ಲೂ ಹೂವಾಡಗಿತ್ತಿಯ ಪ್ರೀತಿ ...

ನನಗೆ

ನನಗೆ 

ನೀ ನಡೆದ ನೀರ ಹೆಜ್ಜೆಗೆ ಹೆಜ್ಜೆ ಬೆರೆಸಿ 
ತೇಲಿ ಹೋಗುವೆ ನಾನು .... 
ಬೆರಳಲ್ಲಿದ್ದ ಬೆವರ ಹನಿ ಬಿಸಿಯ 
ಒತ್ತಿ ತಂಪ ಇಡಿಯಾಗಿಟ್ಟೆ ...ನೀನು

ನಡೆದ ದಾರಿಯ ಒರೆಸುತಾ ಬಂದು
ಚಿತ್ರಗಳ ಅಂಟಿಸಿದ್ದು ...
ನಡೆದಲ್ಲಿ ಮರಳ ಚೆಲ್ಲಿ ಕಕ್ಕಾಬಿಕ್ಕಿ
ತಡವರಿಸಿದ್ದು ಒಮ್ಮೆ ....

ಅಸ್ಪಷ್ಟವಲ್ಲ ಬೆರಳಚ್ಚು ಇಡೀ ಬಿಂಬ
ಹಾ ಮನ ತುಂಬಾ ..
ಬಿದ್ದಾಗ ಎದ್ದಿದ್ದರೂ ಬಿದ್ದಿರುವ
ಹಠ ,ಒಲವು ,ದಿಟ್ಟ ನಗು ಎಲ್ಲಾ .... ನನಗಿಷ್ಟ

ಉಯ್ಯಾಲೆ

ಉಯ್ಯಾಲೆ 

ಆಲದ ಬಿಳಲುಗಳಲಿ ಜೀಕಿ ಬಾಲ್ಯದಲಿ ಆಡಿದ್ದುಂಟು 
ಹುಡುಗರಾಗಿದ್ದಾಗ ಅಲ್ಲಲ್ಲಿ ಜೀಕುವ ಆಟದ ಹುಚ್ಚಿತ್ತು 
ಯೌವನದ ಕನಸಲ್ಲಿ ಮನದನ್ನನೊಡನೆ ಹೂ ಜೋಕಾಲಿ 
ಬದುಕ ಜೋಕಾಲಿ ನಲಿಯುವಲ್ಲಿ ಅಲ್ಲೇ ನಿಲ್ಲಲಿಲ್ಲ

ಪಯಣಿಸುವಾಗ ಕಾಣುತ್ತಿದ್ದೆ ಕಾಂಕ್ರೀಟು ಕಟ್ಟಡಗಳಲ್ಲಿ
ಕಲಸಗಾರರು ನೇತಾಡಿಕೊಂಡು, ಜೀವ ಜೋತಾಡಿಸಿಕೊಂಡು
ಉಯ್ಯಲೆಯಾಡುವುದನ್ನ .. ಬೇಕಿತ್ತೇ ಇದು ಅವರಿಗೆ
ಸಂತೋಷ ಎಲ್ಲಿತ್ತು ಹಿಡಿ ಅನ್ನದ ಉಯ್ಯಾಲೆ ಬಾಳಿಗೆ ?

ದಾರಿ ಬದಿ ಬೋರ್ಡುಗಳ ಎತ್ತೆತ್ತರದಲಿ ಬರೆಯುತ್ತ
ತತ್ತರದ ಬಾಲ್ಯ.. ಜೀಕುವ ಹಗ್ಗದ ಪ್ರಾಣ ಭಯವ ತೊರೆದು
ಉಯ್ಯಾಲೆಯಾಡುವುದನ್ನ ಕಂಡು ಮರುಗಿದ್ದೇನೆ
ನಿಲಿಸಲಾರೆವೀ ವ್ಯವಸ್ತೆಯನ್ನ ... ಜೀವನದುಯ್ಯಾಲೆಯನ್ನ

ಹೂ ಉಯ್ಯಾಲೆ ಕಟ್ಟಿ ನವ ದಂಪತಿಗಳ ತೂಗುವುದ ಕಂಡಿದ್ದೇನೆ
ಗಿರಿಜಾ ಕಲ್ಯಾಣದಲಿ ,ವೆಂಕಟೇಶ್ವರನ ದಂಪತೀ ಉತ್ಸವ ಮೂರ್ತಿಗಳ
ಸುಂದರ ,ಮನ ಮೋಹಕ ಉಯ್ಯಾಲೆಯ ನೋಡಿ ಪರವಶಳಾಗಿದ್ದೀನೆ ,
ಬದುಕಿನ ಧನ್ಯತೆಗಳ ಉಯ್ಯಾಲೆ ಉತ್ಸವದಲಿ ಪುಲಕಿತಳಾಗಿದ್ದೀನೆ

ಜೀವ ಭಯದಲಿ ಕೃತಕ ಉಸಿರಾಟದ ಉಪಕರಣದಲಿ ಜೀವ ಉಯ್ಯಾಲೆ ತೂಗಿ
ದೇಹದ ಒಳಗೂ ಹೊರಗೂ ಉಸಿರು ಕಟ್ಟಿ ಕೊಂಡದ್ದನ್ನ ನೋಡಿ ನಡುಗಿದ್ದೇನೆ
ಆಗಾಗ ಎದೆ ಬಸಿದು ಕಲಿತದ್ದೆಲ್ಲ ಸೇವೆಯೊಳಗೆ ಕರಗಿಸಿ ಅಲ್ಲಿಂದ ಇಳಿಸಿ ಕೊಂಡಿದ್ದೇನೆ
ಜೀವಗಳ ವೈವಿಧ್ಯ ಬದುಕ ಏರಿಳಿತ ಒಮ್ಮೊಮ್ಮೆ ನೋವು ..ಕೆಲವೊಮ್ಮೆ ನಲಿವು ... ಉಯ್ಯಾಲೆ

ನನ್ನ ಕೂಸು ನೀನು

ನಿನ್ನನ್ನ ಗರ್ಭದಲಿ ಈಗಷ್ಟೇ ಹೊತ್ತುಕೊಂಡಿದ್ದೇನೆ 
ಪೂರ್ಣ ರೂಪವಾದಾಗಲೂ ಹೆರಲಾರೆ ಬಿಡು 
ಜನ್ಮಕ್ಕೂ ನನ್ನ ಕೂಸು ನೀನು .... 

ನೀ ಗೆಳೆಯ ,ನೀ ಮಗು ,ನೀ ಅತ್ಮವಾದಲ್ಲಿ ಮರೆ 
ನಾನಿರದ ನೆರಳ ನೀ ನಡೆಯಲಾರೆ ನಿನ್ನ ಹಿಂದೋ
ಅಲ್ಲವೇ ಮುಂದೋ ,ಈ ಗತಿಯ ಸ್ಥಿತಿ ನಿನ್ನ ನಾಳೆ

ಮೊಳಕೆಯೂಡೆದಾಗ ಅಸೆ ಅನುಭವಿಸಿದ್ದಿತ್ತು
ಮತ್ತೆ ಚಿಗುರ ಮುದ್ದಿಸಿ ಕಚ್ಚಿ ನೋಯಿಸಿದ್ದಾಯಿತು
ಈಗ ಚಲನೆ ನಾ ಸರಿದಾಡಿದಾಗೆಲ್ಲ

ಮಂಗಳವಾರ, ಸೆಪ್ಟೆಂಬರ್ 3, 2013

ಉಯ್ಯಾಲೆ

ಆಲದ ಬಿಳಲುಗಳಲಿ ಜೀಕಿ ಬಾಲ್ಯದಲಿ ಆಡಿದ್ದುಂಟು
ಹುಡುಗರಾಗಿದ್ದಾಗ ಅಲ್ಲಲ್ಲಿ ಜೀಕುವ ಆಟದ ಹುಚ್ಚಿತ್ತು
ಯೌವನದ ಕನಸಲ್ಲಿ ಮನದನ್ನನೊಡನೆ ಹೂ ಜೋಕಾಲಿ
ಬದುಕ ಜೋಕಾಲಿ ನಲಿಯುವಲ್ಲಿ ಅಲ್ಲೇ ನಿಲ್ಲಲಿಲ್ಲ

ಪಯಣಿಸುವಾಗ ಕಾಣುತ್ತಿದ್ದೆ ಕಾಂಕ್ರೀಟು ಕಟ್ಟಡಗಳಲ್ಲಿ
ಕಲಸಗಾರರು ನೇತಾಡಿಕೊಂಡು, ಜೀವ ಜೋತಾಡಿಸಿಕೊಂಡು
ಉಯ್ಯಲೆಯಾಡುವುದನ್ನ .. ಬೇಕಿತ್ತೇ ಇದು ಅವರಿಗೆ
ಸಂತೋಷ ಎಲ್ಲಿತ್ತು ಹಿಡಿ ಅನ್ನದ ಉಯ್ಯಾಲೆ ಬಾಳಿಗೆ ?

ದಾರಿ ಬದಿ ಬೋರ್ಡುಗಳ ಎತ್ತೆತ್ತರದಲಿ ಬರೆಯುತ್ತ
ತತ್ತರದ ಬಾಲ್ಯ..  ಜೀಕುವ ಹಗ್ಗದ ಪ್ರಾಣ ಭಯವ ತೊರೆದು
ಉಯ್ಯಾಲೆಯಾಡುವುದನ್ನ ಕಂಡು ಮರುಗಿದ್ದೇನೆ
ನಿಲಿಸಲಾರೆವೀ ವ್ಯವಸ್ತೆಯನ್ನ ... ಜೀವನದುಯ್ಯಾಲೆಯನ್ನ

ಹೂ ಉಯ್ಯಾಲೆ ಕಟ್ಟಿ ನವ ದಂಪತಿಗಳ ತೂಗುವುದ ಕಂಡಿದ್ದೇನೆ
ಗಿರಿಜಾ ಕಲ್ಯಾಣದಲಿ ,ವೆಂಕಟೇಶ್ವರನ  ದಂಪತೀ ಉತ್ಸವ ಮೂರ್ತಿಗಳ
ಸುಂದರ ,ಮನ ಮೋಹಕ ಉಯ್ಯಾಲೆಯ ನೋಡಿ ಪರವಶಳಾಗಿದ್ದೀನೆ ,
ಬದುಕಿನ ಧನ್ಯತೆಗಳ ಉಯ್ಯಾಲೆ ಉತ್ಸವದಲಿ ಪುಲಕಿತಳಾಗಿದ್ದೀನೆ

ಜೀವ ಭಯದಲಿ ಕೃತಕ ಉಸಿರಾಟದ ಉಪಕರಣದಲಿ ಜೀವ ಉಯ್ಯಾಲೆ ತೂಗಿ
ದೇಹದ ಒಳಗೂ ಹೊರಗೂ ಉಸಿರು ಕಟ್ಟಿ ಕೊಂಡದ್ದನ್ನ ನೋಡಿ ನಡುಗಿದ್ದೇನೆ
ಆಗಾಗ ಎದೆ ಬಸಿದು ಕಲಿತದ್ದೆಲ್ಲ ಸೇವೆಯೊಳಗೆ ಕರಗಿಸಿ ಅಲ್ಲಿಂದ ಇಳಿಸಿ ಕೊಂಡಿದ್ದೇನೆ
ಜೀವಗಳ ವೈವಿಧ್ಯ ಬದುಕ  ಏರಿಳಿತ ಒಮ್ಮೊಮ್ಮೆ ನೋವು ..ಕೆಲವೊಮ್ಮೆ ನಲಿವು ... ಉಯ್ಯಾಲೆ 

ಹೂವಾಡಗಿತ್ತಿ



ಕಣ್ಣರಳಿಸಿದ ಪ್ರಿಯನ ಹೆಜ್ಜೆ ಹಿಂಬಾಲಿಸಿದೆ
ನಸುನಕ್ಕ ಮಗುವಿನ ಕೈಯಲ್ಲಿ ಗುಲಾಬಿಯಿತ್ತು
ಅವಳ ಗೆಜ್ಜೆಗೆ ಸೋಲದವರಾರು
ಬರದ ದಿನವಿಲ್ಲ ಕಣ್ಣ ತoಪಾಗಿಸಲಿಕ್ಕೆ....

ಕೂಗುವಳು ಹೂವ ಕಟ್ಟಿ ತಂದು
ನೆನೆದಂತೆ ಬಣ್ಣಗಳ ಪೋಣಿಸಿಟ್ಟು...
ಅವಳ ಕೈರಸಿಕತೆಯ ಸಿದ್ಧ್ಹಿ ,
ಹೂಮಾಲೆಯ ಚೆಲುವಿಕೆಯೆ ಸಾಕ್ಷಿ

ತಲೆಯ ಮೇಲಿನ ಬುಟ್ಟಿ ,ಬಳಕುವ ಸೊಂಟ
ಅವಳು ಹಿಂದೆಸೆವ ಹಾವಿನ ಜಡೆ ಮಾರುದ್ದ ...
ನಕ್ಕರವಳು ಬೀದಿಗೇ ಹಬ್ಬ..  ದಿನಾ ಬರುವವಳು
ಮತ್ತೆ ಮುತ್ತಿನ ಹಲ್ಲು ತೆರೆದು ಕರೆವಳು ...

ದೇವ ಕಾಯುವ ಅವಳ ಸೃಷ್ಟಿ ಮಾಲೆಯ ಸೊಬಗಿಗೆ
ಬೆರೆಸಿ ತರುವಳು ಒಲವ ಅದರೊಳಗೆ , ನಾ ನೋಡುವಲ್ಲಿ
ಇರಲಿಲ್ಲ ಹೂವೊಳಗೆ ಹೃದಯ ,ಬೆರೆತುಕೊಂಡೆ ಘಮದೊಳಗೆ
ಹೂವ ಪ್ರತಿದಳದಲ್ಲೂ ಹೂವಾಡಗಿತ್ತಿಯ ಪ್ರೀತಿ ...

ರಜೆ

ನಿನಗೆ ರಜೆಯೆಂದರೆ ಮನೆ ಹೊರಗೆ ನಿಂತು ಮಳೆ ನೋಡುವ ಕುಶಿಯ ಹಾಗಿದೆಯಾ ?
ತಂಪು ಗಾಳಿಗೆ ಕೆನ್ನೆಯೊಡ್ಡಿ ಸುಖಿಸುವ ಹಾಗಿದೆಯಾ ?
ಅರಳಿದ ಹೂಗಳಿಗೆ ತುಟಿ ತಾಗಿಸಿ ಮೆಲ್ಲನೆ ಬಿಸಿ ಸೋಕಿಸದೇ ನಗುವಂತಿತ್ತೇ ?
ನೆಲದಲ್ಲಿ ಮಲಗಿ ಪುಸ್ತಕವೊಂದ ನೋಡುತ್ತಾ ಪ್ರಿಯವಾದ ಸಾಲುಗಳ ಮತ್ತೆ ಮತ್ತೇ ಓದುವ೦ತಿತ್ತೇ ?
ಏನು ಮಾಡುವಿ ನೀನು ನಕ್ಷತ್ರಗಳು ನಿನ್ನ ಮನೆ ತುಂಬಿ ಕೊಂಡರೆ ?
ನಿನ್ನ ಸಮ ಸೂರ್ಯ ಚಂದ್ರ ಚಿಣ್ಣರೂ ನಿನ್ನಂತೆ ಕನಸುಗಾರರಾದರೆ ?
ಎದೆ ಬಿಡಿಸಿ ತಣ್ಣೀರ ಹಾಕಿಸಿ ಕೊಳ್ಳಬಲ್ಲೆಯಾ ಮಳೆಯ ಸೊಗಸಿನೆದುರು ?
ರಜೆಗೆ ನಾನಿತ್ತ ಹೊಸತನದ ನವಿರ ಹೊರಳಿಸಿ ಕೊಡಬಲ್ಲೆಯಾ ಹೆಸರ ?
ಕಳೆದು ಬಿಡುವೆಯಾ ದಿನವ ನಲ್ಲೆಯೆದುರಿನಲ್ಲಿ ?ಹೂ ತೋಳಿನಲ್ಲಿ .....ಉಸಿರ

ಐಕ್ಯ


ನನ್ನೊಳಗಿದ್ದ ಸರ್ಪ ಇಳಿದು ತೇಜಸ್ಸಿಗೆ ಎದೆ ಕೊಟ್ಟ ಮೇಲೆ
ನೇರಳೇ ಬೆಳಕ ಬಿಟ್ಟು ಹುಡುಕಿಸಿದೆ ...ಸಿಗುತ್ತಿಲ್ಲ ...
ಸುತ್ತಿಕೊಂಡ ಸರ್ಪ ತಳಿಕೆ ಸಡಿಲಿಸಿ ಪೊರೆ ಹರಿ ಒಮ್ಮೆ
ನಿನ್ನ ಮೂಲಾಧಾರದಲಿ ವಿಸ್ತರಿಸಿತ್ತೋ...ಎಂದು ನೋಡುತ್ತೇನೆ ....

ವಿಪ್ಲವ

ನಿನ್ನ ವಿಪ್ಲವದ
ಸಪ್ಪಳ ಕೇಳಿ
ಧಾವಿಸಿ
ಅಪ್ಪುವ ತವಕ ....

ನಿನ್ನ ನೆನೆದಾಗ

ಕಂದನ ನೆನೆದಾಗಲೆಲ್ಲಾ
ಉಕ್ಕುವ ಎದೆ ಹಾಲಿನಂತೆ,
ನಿನ್ನ ನೆನೆದಾಗಲೆಲ್ಲಾ
ಕಂಗಳಲಿ ಕಣ್ಣೀರ ಧಾರೆ

ಕಂಪನ

ನೀ ತುಟಿಯಿಟ್ಟಲ್ಲಿ ಹೊತ್ತು ತಪ್ಪಿ
ಕೆನ್ನೆಯಿಳಿಜಾರಲಿ ಮುತ್ತನೊತ್ತಿ
ಮೆಲ್ಲನಿಳಿದು ತೊಡೆಯನೊರಗಿಕೊoಡೆ ,
ನಿನ್ನ ಕೂದಲಲಿ ಬೆರಳಿಟ್ಟು ಆ ಕಂಪನದಿ
ನಡುಗಿ ನಿನ್ನಪ್ಪಿಕೊಂಡೆ ..

ನನ್ನವನು

ನನ್ನವನು
ಸದಾ ಹೂ ತೋಳಿನ ಮೇಲೆ ಹೊತ್ತು
ಕಷ್ಟಗಳ ನನಗೆ ಹೊರೆಸದವನು
ಕಣ್ಣೀರ ತುಟಿಗಳಲೇ ಹೀರಿ
ಸಿಹಿ ಮುತ್ತಲೇ ಸಿಂಗರಿಸುವನು ..ನನ್ನವನು 
ಎದೆಯ ಸಾರ್ವಬೌಮ ಸುಂದರ ನಗುವವನು
ನಾನೇನ ಕೊಡದಿದ್ದರೂ ನನ್ನೊಳಗೇ
ರಾಜ್ಯಭಾರದ ವಿಸ್ತಾರ ಕ್ಷಣವೂ ಬಿಡದೇ ಹರಡುವನು
ನನ್ನೆದೆಯನಾಳಿ ನಾಳೆಗೂ ನಿಂತವನು ..ನನ್ನವನು
ನಾನೆಂದರೆ ಪ್ರಾಣವೆಂದು ಕಣ್ಣಲ್ಲೇ ಹೇಳುವನು
ಕೈ ಹಿಡಿಯದೆಯೂ ಉಸಿರ ಕೊಡುವನು
ಸಮಯ ಸಾದಕನಲ್ಲ ಬಾದಕನಲ್ಲ
ಹೂಮನದ ಸಿರಿಯವನು .... ನನ್ನವನು

ಕಲ್ಪನೆ



ನೀವು ಭೀಮನಂತೆಯೋ ... ಭುಜದುದ್ದ ಎಳೆದು ಉಸಿರುಗಟ್ಟಿಸುವವರೋ ?
ಅರ್ಜುನನಂತೆ ಮೆಲ್ಲ ಮೆಲ್ಲನೆ ಸೋಕಿ ಮೈಮರೆಸುವ ಮಾತಿನವರೋ ?
ಹೆಣ್ಣಿನ ಕುತೂಹಲಕ್ಕೆ ಕೊನೆಯಿರದ್ದಕ್ಕೆ ಧರ್ಮರಾಯನಂತೆ ಮುನಿಸೋ ?
ಮೊದಲು ಕೊನೆ ಹೇಳದ್ದಕ್ಕೆ ನಕುಲ ಸಹದೇವರoತೆ ಕಸಿವಿಸಿಯೋ ?
ಸರ್ವತೆಯೂ ನಿನ್ನಲ್ಲಿ ಕರಗಿ ಪುರುಷ ಸಿಂಹವೆನಿಸುವುದು ಮನದಲ್ಲಿ ... ಅಹುದೇ?

ಭಾನುವಾರ, ಸೆಪ್ಟೆಂಬರ್ 1, 2013

ಸ್ವ ಕಾಯ

ಸ್ವ ಕಾಯ

ಆತ್ಮವೇ ದೇಹ ಬಿಟ್ಟು ನಿಂತಾಗ ನೀನು ಉಸಿರಾಡುತ್ತಿದ್ದೆಯಲ್ಲ ನೀನಾರು ?
ಅತ್ಮಗೆಳೆಯರ ಕಂಡೆಯಾ ದೇಹ ಬಿಟ್ಟಾಗ ?ಅಥವಾ ದೇಹದಲ್ಲಿದ್ದಾಗ .. 
ಬೆಳಕಾಗಿದ್ದೆಯೋ,ಗಾಳಿಯಾಗಿದ್ದೆಯೋ ,ಏನೂ ಅಲ್ಲವಾಗಿದ್ದೆಯೋ ಹೇಳು 
ಧ್ಯಾನ ದಲಿ ಭಾಗವಹಿಸಿದ್ದೆಯಾ ದೇಹದಲ್ಲಿದ್ದಾಗ ?ನಾನಲ್ಲ ಎಂದು ನಿ೦ತೆಯೋ ?

ಮೂರನೇ ಕಣ್ಣೊಳಗೆ ,ಮಧ್ಯೆ ನೀಲ ಮಣಿ ಕೇಂದ್ರ ,ನೋಡಿದಾಗ ಕಂಡ ಪ್ರಪಾತದಲ್ಲಿದ್ದೀಯಾ ?
ಕರೆದಾಗ ಮಾತ್ರ ಮೈಯೊಳಗೆ ಧಾವಿಸಿ ,ಪರವೂ -ಸ್ವ -ಕಾಯ ಪ್ರವೇಶ ಆನಂದವೆನ್ನುತ್ತಿಯಾ ?
ಮೇಲೇರುವ ಸರ್ಪಜೋಡಿ ಕುಂಡಲಿನಿ ನೃತ್ಯಕ್ಕೂ ನಿನಗೂ ದೇಹಕ್ಕಿಲ್ಲದ ಆತ್ಮದ ಸಂಬಂಧವೇ ,ಬೇಕೇ ?
ಇಲ್ಲಿ ಬಾ ಕುಳಿತುಕೋ ಎದುರಿಗೆ ,ದೇಹ ಬಿಟ್ಟು ನಿನಗಿರುವ ಸುಖ -ದುಖ ಮಾತಾಡುವ -ಸ್ವ ಕಾಯದಲ್ಲಿ .

ನಿನ್ನಾತ್ಮ ನನ್ನ ದೇಹದಲಿ .. ನಿನ್ನ ದೇಹದೊಳಗೆನ್ನ ಆತ್ಮ

ಪರಕಾಯ ಪ್ರವೇಶದಲಿ ಈ ದೇಹಗಳೆರಡರ ಬಿಟ್ಟು
ಕಾಯೋ ಎಂದೊಪ್ಪಿಸಿ,ಅತ್ಮಾವಲೋಕನ ಮಾಡು ಆಗುತ್ತದೆಯೇ? 
ಸಿದ್ದ ಆತ್ಮಗಳೆರಡು ದೇಹವೊಂದರಲ್ಲಿ ಮಾತಿಗಿಳಿಯಬಹುದಾದರೆ,
ಇರೋಣ ಬಿಡು ಜಾಗೆ ಮಾಡಿಕೊಂಡು 
ಪ್ರೀತಿಸಿದ್ದೇನು ಯಾವ ನನ್ನನ್ನು ? ನಾನ್ಯಾರು ?
ದೇಹವೇ ?ಮನಸೇ? ಆತ್ಮವೇ ?ಉಸಿರೇ? ಬಡಿತವೇ ?
ನಿನ್ನೊಳಗೆ ಜಾಗ ಕೊಟ್ಟರೆ ,ಈ ದೇಹದ ಕೊಳೆಯುವಿಕೆ ಮುನ್ನ
ಧಾವಿಸಬೇಕಾದ್ದು ಎಷ್ಟು ದಿನ ಮುನ್ನ ?ಒಹ್ .. ದೇಹ ನನ್ನ ..
ಅತ್ಮವಿರದೇ ನೀನಿರಲಾರೆಯಾದರೆ "ನಾನು ಆತ್ಮ ",ನೀನೂ
ಪೂರ್ವ ಜನ್ಮ ಕರ್ಮ ಫಲಗಳ ಆತ್ಮ ಭೋಗವೆನ್ನುತ್ತಾರೆ
ನಿನ್ನ ದೇಹವನುಭವಿಸಿತೇ ಆ ಸುಖ ಕಷ್ಟಗಳನ್ನ ,ಅಥವಾ ಅತ್ಮವೋ
ಮುಕ್ತಿಗೋಡಿದೆಯೆಂದರೆ ಮಾತಾಡಿದಾಗ ಬರುವಾತ್ಮ ಪಾಪಿಯೇ
ದೇಹದಲಿ ಮರುಜನ್ಮವೆತ್ತಿದವರೆಲ್ಲಾ ಪಾಪಾತ್ಹ್ಮಗಳೇ ?
ಎನೋ ತಿಳಿಯೇ .. ಪರಕಾಯ ಪ್ರವೇಶ ..ಸರ್ಪಗಳ ದೇಹದಲಿ
ಋಷಿಗಳಿಗಂತೆ .. ನಮಗಲ್ಲ ಬಿಡು .. ,ಈ ಅದ್ಬುತ ಕ್ರಿಯೆಯಲ್ಲಿ
ಬಾನಲ್ಲೊoದಷ್ಟು ತಿರುಗಾಡಿ ಬರೋಣವಂತೆ
ಅಲ್ಲಿವರೆಗೆ ಬಿಸಿ ಕಾಪಾಡುವ ಈ ದೇಹದ್ದೇ ಸದಾ ಚಿಂತೆ .
ಕೆಲವೊಮ್ಮೆ ದೇಹಗಳ ಬದಲಾಯಿಸ ಬಹುದೇ ?
ನಿನ್ನಾತ್ಮ ನನ್ನ ದೇಹದಲಿ .. ನಿನ್ನ ದೇಹದೊಳಗೆನ್ನ ಆತ್ಮ
ಹುಂ .. ಎನ್ನುವನೇ ಕಾಣದ ಕರ್ತನು ?ನಿಲ್ಲಿಸಿಬಿಟ್ಟರೆ ಉಸಿರನು ?

ಈಗ ತಳಮಳ

ನಿನಗಿಷ್ಟವಿಲ್ಲಾ ಅoದಾಗಲಿoದ 
ನಿನ್ನೆದೆ ಬಾಗಿಲಲ್ಲಿ ಮೆಟ್ಟಿಲಿದೆಯಲ್ಲ 
ಅಲ್ಲೇ ಕುಳಿತಿದ್ದೇನೆ 
ವರುಷಗಳಿ೦ದ ಒಳಗಿನ ಬೆಚ್ಹನೆ 
ಅಪ್ಪುಗೆ ಅಭ್ಯಾಸವಾಗಿ 
ಈಗ ತಳಮಳ

ಬಾಲಸುಬ್ರಹ್ಮಣ್ಯ ನ ಹಬ್ಬ

ಬಾಲಸುಬ್ರಹ್ಮಣ್ಯ ನ ಹಬ್ಬ 
ಆಡಿ ಕೃತ್ತಿಕೆ ನಾಳೆ ,ಇಂದು ಭರಣಿ ಕಾವಡಿ 
ಬಾಲಸುಬ್ರಹ್ಮಣ್ಯ ನ ನೆನೆಯಿರಿ 
ಕಾವಡಿಯನ್ನು ಹೊತ್ತು ದೇಗುಲದತ್ತ 
ಹೆಜ್ಜೆ ಹಾಕುವಾಗ ಹರಕೆ ಹೊತ್ತವರು
ಆತ್ಮೀಯರು ಏಕ ದನಿಯಲ್ಲಿ
'''ಹರೋಹರ' ''ಎಂದು ಕೂಗುವರು
ಬಾಲಸುಬ್ರಹ್ಮಣ್ಯನ ನೆನೆವರಿಂದು
ಬೇಡಿಕೆ ಈಡೇರಿಸುವ ಕಾಮಧೇನು-
ಕಲ್ಪವೃಕ್ಷ ವವನು ಮುರುಗ
ಭಕ್ತರು ಕಾವಡಿಯನ್ನು ಹೊತ್ತು ತಂದು
ಹರಕೆ ತೀರಿಸಿ ಧನ್ಯರಾಗುವರು
ಮೊದಲನೇ ದಿನ ಭರಣಿ ಕಾವಡಿ.
ಎರಡನೇ ದಿನ ಆಡಿ ಕೃತ್ತಿಕೆ.
ಕಾವಡಿಗಳಲ್ಲಿ ನವಿಲು ಕಾವಡಿ, ಜೇನು ಕಾವಡಿ,
ಹಾಲು ಕಾವಡಿ, ಪುಷ್ಪ ಕಾವಡಿ ಸೇರಿ
ಹಲವು ಬಗೆಯ ಕಾವಡಿಗಳನ್ನು ತಂದು,
ಹರಕೆ ತೀರಿಸಿ ಬಾಲಸುಬ್ರಹ್ಮಣ್ಯ ಸ್ವಾಮಿಯಲ್ಲಿ
ಮೊರೆ ಇಡುವರು ''ಅಪ್ಪಾ ಮುರುಗಾ'' ಎನುವರು
ಬಾಲಸುಬ್ರಹ್ಮಣ್ಯ ಮಹಾ ಹೃದಯಸ್ಥ ಸ್ವಾಮಿ
ಭಕ್ತರು ಒಂದು ದಂಡದ ಎರಡೂ ಬದಿಗೆ
ಬುಟ್ಟಿಯನ್ನು ಕಟ್ಟಿ, ಒಂದರಲ್ಲಿ ಪೂಜೆ ಸಾಮಗ್ರಿ,
ಇನ್ನೊಂದರಲ್ಲಿ ಹೂಗಳನ್ನಿಟ್ಟು ಹೊತ್ತು ತರುತ್ತಾರೆ.
ಕೆಲವೊಮ್ಮೆ ,................. ಇಲ್ಲಿ ದೇಗುಲದಲ್ಲಿ
ನಾಲಗೆ, ಕೆನ್ನೆಗೆ, ಚೂಪಾದ ಶೂಲದಿಂದ ಚುಚ್ಚಿ
ಬೆನ್ನಿಗೆ ಕೊಂಡಿಯ ಮೂಲಕ ಹಗ್ಗಕಟ್ಟಿ ತೇರನ್ನು
ಮನೆ ಬಾಗಿಲಿನಿಂದ ದೇಗುಲದ ವರೆಗೆ ಎಳೆದು ತರುವರು
ಬಾಲ ಸುಬ್ರಮಣ್ಯನ ಭಕ್ತರು

ನಲ್ಲ

ಮೀಯಲು ಬಿಡು ಎಣ್ಣೆ ಸ್ನಾನದಾಸೆಯಲಿ
ಬಂದ ಪ್ರಿಯನೆಡೆಗೆ ಬಿಸಿ ಎಣ್ಣೆಯ ಬೆರಳ
ಅದ್ದಿಸಿ ಮುದ್ದಿಸಿ ಬೆನ್ನ ಲೇಪಿಸಿದೆ ಮೀಯುವ 
ಮುನ್ನ ಬಳಸಿ ಹಚ್ಛಿದೆ ಕೈ ಕಾಲುಗಳಿಗೆ 
ಮೆಲ್ಲನೊತ್ತುತ ಮೀಯಲಿ ಎಂದು ,
ಬಿಸಿ ನೀರು ಕೆನ್ನೆಗಿಳಿದು ತುಟಿ ಮೀಯಿಸಿ
ಗದ್ದಕ್ಕಿಳಿದಾಗ ಮತ್ತೆ ಮುದ್ದಿಸಿ ಮೀಯಿಸುವೆ
ಎಣ್ಣೆನೀರ ನಡುವೆ ಸ್ನಾನದಲೇ
ಮಲು ಹಬೆಯಾದನವನು

ಎಣ್ಣೆನೀರು

ಎಣ್ಣೆನೀರು 

ಸಣ್ಣ ಉರಿಯಲಿ ಬೆಚ್ಚಗಾಗಿಸಿದ ಎಣ್ಣೆಯೊಳಗೆ ಬೆರಳದ್ದಿ ನೆತ್ತಿಯಲಿಟ್ಟೆ 
ಕೈ ಕಾಲ್ಗಳ ಒರಟ ಲೇಪದೊಳಗದ್ದಿ ,ಸರಿಸಿ ಬೆನ್ನ ಮೆದುವ ,
ಎಣ್ಣೆಯಿಳಿದು ಹಿತದ ಒತ್ತುವಿಕೆಯಲಿ ಸ್ನಾನ ಅಲ್ಲಿರಲಿ ದೂರ .. 
ಎಣ್ಣೆಯಾರಿ ಗಂಟೆಗಳುರುಳಿ ಬೆರಳೊತ್ತಲಿ ಮೈ ಮರೆತು
ಹಿತದ ನಿದ್ದೆಯ ಮತ್ತಾವರಿಸಿ ಕೆಂಪುಗಟ್ಟಿದೆ ಮೆದು ಮೈ

ನಿದ್ರೆಗಣ್ಣಲಿ ನೀರುಮನೆ ಕಡೆಗೆ ,ಸುಳಿಗೂದಲಲಿ ಸುರಿವ
ಬಿಸಿ ಬಿಸಿ ನೀರಧಾರೆ ಧಾರಾಕಾರ ಸುರಿಸುರಿದು
ನೀರೊಳಗಿನ ಹಬೆಯಾಟ ಉಸಿರ ತುಂಬಿ ಮತ್ತವಾಗಿಸಿ
ಹೂ ಆವಿಯೂ ಕೆನ್ನೆ ಕೆಂಪೂ ಮೈ ಧಾಸವಾಳದ ನವಿರೂ
ಸುಗಂಧ ಪುಡಿ ಸೋಪುಗಳೆಡೆಗೆ ಸಿಕ್ಕಿನೀರಾಯ್ತು .. ಹಿತ

ಮತ್ತೆ ... ಸುಸ್ತಿನ ನಿದ್ದೆ

''ಭಿಕ್ಷೆ ಅಷ್ಟೊಳ್ಳೆ ಆದಾಯದ ಕಾಯಕವೇ ?''

ಒಂದು ಅನುಭವ ''ಭಿಕ್ಷೆ ಅಷ್ಟೊಳ್ಳೆ ಆದಾಯದ ಕಾಯಕವೇ ?''
ನಾನು ಆಗಷ್ಟೇ ಇಂಗ್ಲೆಡ್ ನಿoದ ಕಾಲಿನ ವಿಶೇಷ ತಜ್ಞಳಾಗಿ ಬಂದ ಹೊಸದು ,ಭಾರತದಲ್ಲಿ ಕಾಲ್ಲಿಲ್ಲದವರಿಗೆ ಕಾಲು ಹಾಕಿಸುವ ಅತಿ ಹುಮ್ಮಸ್ಸು ,ಡಯಾಬಿಟಿಸ್ ನಿಂದ ಯಾರೂ ಕಾಲು ಕಳೆದು ಕೊಳ್ಳಬಾರದು ಎನ್ನುವ ತುಡಿತ ಗ಼ೆಳತಿಯೊಬ್ಬಳನ್ನು ಕಾಣಲು ಸಿಟಿಗೆ ಹೋದೆ ,ಎದ್ರೂ ಕಾಲಿಲ್ಲದ ತರುಣ ಭಿಕ್ಷುಕ ,ಮನ ಕರಗಿ ಅವನೆದುರು ಕೂತು ಪುಟ್ಟ ಭಾಷಣ ಮಾಡಿ ಮನವೊಲಿಸಿ ಆಟೋದಲ್ಲಿ ಜೈನ ಆಸ್ಪತ್ರೆಗೆ ಕರೆದುಕೊಂಡು ಹೋದೆ ,ನಮ್ಮ ಉಚಿತ ಕಾಲು ಹಾಕುವ ಕಡೆ ಕುಳ್ಳಿರಿಸಿ .ಊಟ ಕೊಟ್ಟು ,ಅಳತೆ ನಂತರ ,ವಾರ ಕಳೆದು ನಮ್ಮ ಕಾಲು ರಕ್ಷಕ ಪಡೆಯ ಸಹಾಯದಿಂದ ಪುನಹಾ ಕರೆಸಿ ,ಕಾಲು ಹಾಕಿಸಿ ,ನಡೆಯುವ ತರಬೇತಿ ಕೊಟ್ಟು ಕಳಿಸುವಾಗ ಧನ್ಯ ಭಾವ ... ಗುರುತಿನವರ ಅಂಗಡಿಯಲ್ಲಿ ಮೂಟೆಗಳಿಗೆ ಸೀಲ್ ಹಾಕುವ ಕೆಲಸ ಕೊಡಲೂ ಒಪ್ಪಿಸಿಯಾಯಿತು ... .ನನ್ನ ಬೇರೆ ಕೆಲಸ ,ಯೋಜನೆಗಳಲ್ಲಿ ಅವನ ಪರಿವೇ ಇರಲಿಲ್ಲ , ಒಂದೂವರೆ ವರ್ಷದ ನಂತರ ನಮ್ಮ ಉಚಿತ ಕಾಲಿನ ಘಟಕದವರು ಸಿಕ್ಕಿ ನಿಮ್ಮ ಕಡೆಯವನು ಪುನಹಾ ಭಿಕ್ಷೆಗೆ ಕೂತನಲ್ಲ ಅಂದಾಗ ,ಕೋಪದಿಂದ ,ಕಳವಳದಿಂದ ಅದೇ ಜಾಗ ಹುಡುಕಿ ಧಾವಿಸಿದೆ ,ಇನ್ನಷ್ಟು ಹುರುಪಿನಿಂದ ಭಿಕ್ಷೆ ಬೇಡುತ್ತಿದ್ದ ಅವನು ,ನನ್ನತ್ತ ನಿರ್ಲಕ್ಷ್ಯದಿಂದ ನೋಡಿದ ,ಗುರುತು ಮರೆತಿರಬಹುದೆಂದು ನೆನಪಿಸಿ ಕಾಲೆಲ್ಲಿ ಎಂದೆ ? ಹೋಗಮ್ಮ ಹೋಗು ,ನಿನ್ನ ಕಾಲೇನೂ ನಂಗೆ ಬೇಡ ,ಆ ಕೆಲಸದಲ್ಲಿ ನಂಗೆ ಇರೂಕಾಗಲ್ಲ ,ಭಿಕ್ಷೆ ಬೇಡಿದ್ರೆ ಎಲ್ಲಾರ್ ಜೀವ್ನ ನಡ್ಯುತ್ತೆ ಅಂದ ..ಎಷ್ಟು ಓಲಿಸಿದರೂ ಬರಲೊಲ್ಲ .. ಕೋಪದಲ್ಲಿ ವಾಪಸ್ಸು ಬಂದವಳಿಗೆ ಅಳು ,ನಿಸ್ಸಹಾಯಕತೆ .. ಮುoದೆಂದೂ ಭಿಕ್ಷುಕರ ಮನವೊಲಿಸಿಲ್ಲ .. ತಾನಾಗಿಯೇ ಬಂದವರಿಗೆ ಉಚಿತ ಕಾಲಿಲ್ಲದೇ ಹೋಗಲು ಬಿಟ್ಟಿಲ್ಲ . ''ಭಿಕ್ಷೆ ಅಷ್ಟೊಳ್ಳೆ ಆದಾಯದ ಕಾಯಕವೇ ?''

ಕಾಡದಿರು ಒಲವೇ

ಕಾಡದಿರು ಒಲವೇ 
ಕಂಗಳಿದು ಹನಿಗಣ್ಣಾಗಿ ಕಾಯುವಾಗ ,
ಒಣಗಿ ಕಣ್ಣಿದು ನಿಮೀಲಿತವಾಗಿ 
ತೇಲಿ ಹೋಗುತಿದೆ ಅರೆಪ್ರಜ್ಞೆಯೆಡೆಗೆ 
ತುತ್ತಿಡುವ ಕ್ಷಣದಲೂ ಉಸಿರ 
ಹಿಡಿದಿರಿಸಿರುವೆ ,ನೀರ ಹನಿಸದೇ
ಬಾಯಾರಿಕೆಗಳಿಗೆ ,ತುಂತುರಿಗೆ
ತಾಳ್ಮೆ ತಪ್ಪಿತು ನಿಲ್ಲಿಸಿದೆ ನನ್ನ ಬಾಗಿಲ ಹೊರಗೆ
ನೆನೆಯುತಿರುವೀ ಮಳೆಯ ತಪ್ಪಿಸಿ
ಕರೆದುಕೊಳ್ಳುವೆಯಾ ಒಳಗೆ ?

ಆಷಾಢ ಮಾಸ

ಆಷಾಢ ಮಾಸ

ಆಷಾಢ ಮಾಸದಲಿ ತೆರೆವ ಭಕ್ತಿ ಕಥೆಗಳ ಹಾಸು 
ಬಾಗಿಲಲಿ ದೀಪವಾಗಿ ಬೆಳಗಿ ದೀಪವಾಗಿ ದೇವೀ ತತ್ವವಾಗಿದೆ 

ಸಂಜೆಯಾದರೆ ಬಾಗಿಲೆರದೂ ಕಡೆ ಕಾಂತಿ ಸೂಸುವ
ತುಳಸಿಯೆದುರಿನ ರಂಗೋಲಿಗೆ ಬೆಳಕ ತರುವ ಆಷಾಢ ದೀಪ

ಚಳಿ ಗಾಳಿಯ ಹೊಯ್ದಾಟದಲಿ ಅಲುಗಾಡುತ್ತಾ ದೇದೇಪ್ಯಮಾನವಾಗಿ ವಿರಾಜಿಸಿ
ಮನೆಯೊಳಗಿನ ಜೀವಗಳಿಗೆ ಸಾದಾರೋಗ್ಯ ತುಂಬುವ ಶುಭ ಸಂಕೇತದ ದೀಪ

ಪ್ರಕೃತಿಯಲ್ಲಿ ಲೀನವಾದ ಆತ್ಮಗಳಿಗೆ ಸ್ವರ್ಗದೆಡೆಗೆ ದಾರಿ ತೋರುವ
ದೇವ ನಿರ್ಮಿತ ಕಾಂತಿಯ ಪ್ರಕಾಶಿಸುತ ಬೆಳಗುವುದು ಮನೆ, ಮನದ ಬಾಗಿಲ ದೀಪ

ಮನೆ ಮಕ್ಕಳ ಪುಟ್ಟ ಪಾದದ ಬಾಲಲಕ್ಷ್ಮಿಯ ಕಿರು ಗೆಜ್ಜೆ ದನಿಯಲಿ ಸೆರಗ ಹೊದ್ದು ನಡೆವಾಗ
ಮುಂಬರುವ ಶ್ರಾವಣದ ಕನಸ ದೈವಿಕತೆಯಲ್ಲಿ ಮೆರೆಸುವುದು ಆಷಾಡ ದೀಪ

ಸುಬ್ರಮಣ್ಯ ಹರೋಹರಗಳ ,ಲಕ್ಷ್ಮೀ ಪೂಜೆಗಳ ವೈಭವದಿ ಧೂಪವಾಗಿಸಿ ಅಲಂಕರಿಸಿಕೊಂಡು
ಸುಗಂಧದ ಆನಂದ ಸೂಸಿ ಭೀಮನಮಾವಾಸ್ಯೆಯವರೆಗೂ ದಿನ ಬೆಳಗಲಿ ಬಾಗಿಲಲಿ ದೀಪ

ಪ್ರಥಮ ಏಕಾದಶಿ ವ್ರತ ಆರಾಧನೆಯ ಆಷಾಢದ ಶುಕ್ರವಾರಗಳ ಲಕ್ಷ್ಮಿ ಪೂಜೆಯ
ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿ,ಅನುಸೂಯಾದೇವಿ ಶಿವ ವ್ರತ ಮಾಡಿ ಬೆಳಗಿಸಿದ ಭೂ ದೀಪ

ಅಮರನಾಥದ ಹಿಮಲಿಂಗ ಧರ್ಶನದ ಮಾಸ ಗಂಗೆ ಭೂಮಿಗೆ ಉತ್ತರಾಭಿಮುಖವಾದ ಆಷಾಢ ಮಾಸ
ಸ್ವರ್ಗವೇ ಭುವಿಗಿಳಿದಲ್ಲಿ ಹಚ್ಚಿರಿ ಮನೆ ಮನೆಯಲ್ಲಿ ಹೊಸಿಲ ಬದಿಗೆ, ಮುಗುಳ್ ನಗೆಯಲಿ ,ಆಷಾಢ ದೀಪ

ನಿನ್ನ ಪರವಶತೆ

ನಿನ್ನ ಪರವಶತೆಯೊಳಗೆ ನನ್ನ
ಆವಾಹಿಸಿಕೊಂಡ ಮೇಲೆ 
ಕೂದಲೊಳಗೆ ತುಟಿಯಿಟ್ಟು 
ಬಿಸಿಯುತ್ತರ ಕೊಡುವಾಸೆ .. 

ನೀ ತುಟಿ ಕಚ್ಚಿ ಕೂತು ಬಿಂಕ
ತೋರುವಾಗ ಅತ್ತಿತ್ತ ಸರಿಯದೇ
ಎದೆಯಳಗೆ ಕೈ ಇಟ್ಟು ನನ್ನ
ಚಿತ್ರ ಸ್ಪಷ್ಟವೇ ಎಂದೊಮ್ಮೆ ಇಣುಕುವಾಸೆ

ನೀ ಉಸಿರಾಡಿದ ಗಾಳಿಗೆ ಇಲ್ಲಿವರೆಗೂ
ಕಳಿಸು ಎಂದೊಮ್ಮೆ ಕೇಳುವಾಸೆ
ಅದರೊಳಗೆ ನನ್ನ ಹೆಸರಿತ್ತೇ
ಎಂದು ಉಸಿರನೊಮ್ಮೆ ಕೇಳುವಾಸೆ

ನನ್ನ ತಪ್ಪೇ

ನಾನು ಹೂವಿನಂತಿರಬಹುದೆಂದು
ಸವಿ ಮಾತನಾಡಿದ ನಿನಗೆ ,
ನಾನು ಗಟ್ಟಿ ಕಲ್ಲೆಂದು ಗೊತ್ತಾದಾಗ 
ಒರಟು ಬಿಗಿಗೆ ಉಸಿರಾಡದಾದದ್ದು 
ನನ್ನ ತಪ್ಪೇ 

ಹನಿ

ನಿ
ನಾನೊಂದು ಸಲ ತುಂಬಾ ಹುಷಾರಿಲ್ಲದೇ ಮಲಗಿದ್ದೆ ,ಅದರ ಮುನ್ನ ಧೀರ್ಘ ಪ್ರಯಾಣ ಮುಗಿಸಿ ವಾಪಾಸಾಗಿದ್ದೆ ,ನನ್ನ ಮಗುವಿಗಾಗ ೪ ವರ್ಷ ,ಅವಳು ಶಾಲೆಯಿಂದ ಬರುವಾಗ ಇನ್ನೂ ನಿದ್ರಿಸುತ್ತಿದ್ದೆ ,ಹುಷಾರಿಲ್ಲದ ಮಂಪರಿಗೆ ಅವಳು ಕೋಣೆಯೊಳಗೆ ಬಂದದ್ದು ಗೊತ್ತಾದರೂ ಕಣ್ತೆರೆಯಲಾಗಲಿಲ್ಲ ಹತ್ತಿರ ಬಂದು ನಿಂತ ಮಗು ಹೆದರಿತ್ತೆಂದು ಕಾಣುತ್ತದೆ ,ಅಥವಾ ಅದೇನು ಭಾವವೂ ತಿಳಿಯೆ .... ಮೆಲ್ಲನೆ ಮೂಗಿನ ಮುಂದೆ ಬೆರಳಿಟ್ಟು ಉಸಿರಾಡುತ್ತಿದ್ದೇನಾ ನೋಡಿದಳು ,ನಂತರ ಎದೆ ಹತ್ತಿರ ಕಿವಿ ತಂದು ಕ್ಷಣ ಮಾತ್ರ ನಿಂತು ಹೊರಗೆ ಹೊರಟು ಹೋದಳು ..... ದಿಗ್ಬ್ರಮೆಗೊಂಡ ಮನಸ್ಸು ಕೇಳಿತು ..ನನ್ನ ಕಾಯಿಲೆ ಮಗುವಿಗೆ ಸಾವಿನ ಭಯ ತಂದಿರಬಹುದೇ ? ಅವಳ ಭಯ ,ಕೊರಗಿಗೆ ನಾನೇ ಕಾರಣಳೇ ?...... ಕಣ್ಣಲ್ಲಿ ಹನಿ ಹನಿ ನೀರುರುಳಿತು ಎದೆ ತುಂಬಿ ಭಾರವಾಗಿ ,ಮನದಲ್ಲೇ ಕ್ಷಮೆ ಕೇಳಿದೆ ,ಮನಸಲ್ಲೇ ನಾನೆಂದೂ ನಿನ್ನೆದುರು ಹೀಗೆ ಕಾಣಿಸಿಕೊಳ್ಳಲಾರೆ ಎಂದು ,ತರತರದ ಆಲೋಚನೆಗಳು ಹಾದು ಹೋದವು ... ಅದೇ ಕೊನೆ .... ನಾನೆಂದೂ ನಗುವ ,ಶಕ್ತಿ ಪೂರ್ಣ ಅಮ್ಮ ,ಏನೇ ಬರಲಿ ನೋಡೋಣ ಸರಿ ಹೋಗುತ್ತೆ ಬಿಡು ಎಂದು ಕೈ ಹಿಡಿದು ಗಟ್ಟಿ ನಾನು ಎನ್ನುವ ಭಾವನೆ ಬೆಳಸಿದೆ ಅವಳಲ್ಲಿ ... ಈವರೆಗೆ ನನ್ನ ಕಣ್ಣಲ್ಲೊಂದು ಹನಿಯನ್ನೂ ಅವಳು ನೋಡಲಿಲ್ಲ .......... ನಾನು ಹುಷಾರಿಲ್ಲದಾಗ ನೋವು ... ಸಹಿಸೆ ಎಂದಿಲ್ಲ .........

ಮದ್ದಿದೆಯೇ

ಕುಡಿದಾಗ ಏಕೆ ಒಂದಷ್ಟು 
ಜಾಸ್ತಿ ಮುದ್ದು ಮಾಡುವರು ?
ಅದರಲ್ಲೇನು ಮುದ್ದಿನ 
ಮದ್ದಿದೆಯೇ

ಅಡಿಗೆ

ಟೋಮೆಟೋ ಈರುಳ್ಳಿ ಸಾಂಬಾರ್ ಪುಡಿ ರುಬ್ಬಿದ 

ಧಾಭಾ ಮಸಾಲೆಗೆ ಬೆರಳಿಟ್ಟು ' ವಾಹ್ ' ವಾಹ್ 

ಎನ್ನುವ ಚಿಣ್ಣರ ನೋಡಿ ,ಅಡಿಗೆ ಮನೆಯ ಎಲ್ಲಾ 

ರುಚಿ ಖಾದ್ಯಗಳು ,ಈ ಬಾಂಡಲಿ ಎದುರು ತಲೆ ತಗ್ಗಿಸಿ ನಿಂತವು

ಬಿಸಿ ನೀರಲ್ಲಿ ಹೊರಳಿದ ಹಿಟ್ಟು ಮೆದು ಆಲೂ ಚಪಾತಿಯಾದಾಗ

ಅನ್ನದ ಕುಕ್ಕರ್ ನಿಟ್ಟುಸಿರಿಟ್ಟಿತು ...

ಇಬ್ಬನಿ



ದಾಸವಾಳದ ಮೇಲೆ ಮಲಗಿ ಸೂರ್ಯ ರಶ್ಮಿಯ ಪ್ರೀತಿಗೆ 
ಕಾಮನಬಿಲ್ಲ ಬರೆಯುತ್ತಿದ್ದೆ ,
ಗೆಳೆತಿ ನನ್ನನ್ನ ಕೊಂಡೊಯ್ದು ಮೂರ್ತಿಗೇರಿಸಿಧಳು 
ಶಿರದಿಂದಿಳಿದು ಪಾದವ ಮುಟ್ಟಿ ಧನ್ಯವಾದೆ ,
ಪಾದದ ಮೇಲಿರಿಸಿದ ತುಳಸೀ ದಳ ಸೇರಿ ......
ಪ್ರಸಾದದ ಮೇಲೆ ಕರಗಿ ,
ಗೆಳತಿಯ ತುಟಿಗೆ ತಂಪನೆರೆದೆ ,
ಮತ್ತದೇ ಇಬ್ಬನಿಯಾಗುವ ಅಸೆ ನನಗೆ ...

ನನ್ನoತಲ್ಲ ನೀನು

ನಿಲ್ಲದ ತಂಗಾಳಿಯ ಹಾಗೆ 
ಬೆಳಕು ಕತ್ತಲಿಗೂ 
ಕಣ್ಣ ಹೊoದಿಸಿ ಕೊಂಡು
ನೋವ ತೆರದಿಡದ 
ನೀನೇ ಧನ್ಯ .ನನ್ನoತಲ್ಲ ನೀನು 
ಸುಳಿವೆ ......... ಸುಳಿವಿರದ ಹಾಗೆ

ಕಾಯುತ್ತಿರುವೆ

ಕಳೆದು ಹೋಗಿದ್ದಾನೆ ನನ್ನ ಮುದ್ದು ಗೆಳೆಯ
ಹುಡುಕಿ ತನ್ನಿ ಈ ಜಂಗುಳಿಯಿoದ 
ಅವನಿಗೋ ಅವಸರದ ನಡಿಗೆಯಲಿ 
ದೂರಸವಿಸುವ ತವಕ ,ಓಡುವ ಅತ್ತಿತ್ತ ,
ಮಿಂಚುಕಂಗಳಲಿ ಜಗದ ಎಲ್ಲ ಬೆರಗ 
ನೋಡಿ ಯೋಚಿಸುತ ಕುಳಿತು ಬಿಡುವ ,
ಪ್ರತಿ ಎಲೆ ಹೂ ಚಿಗುರೂ ,ಬಾನೂ ಬೆರಗ
ತರುವುದು ಅವನಿಗೆ, ಕೂಸವನು ,ಮೃದು ಹೃದಯದವನು .

ಸ್ವಲ್ಪ ಪ್ರೀತಿಗೆ ಹೊರೆ ಹೊರೆ ಒಲುಮೆ ತುಂಬಿ
ಚಿತ್ರಗಳ ಸಹಜದೆ ಬರೆದು ಇಷ್ಟೇ ಅನ್ನುವನು ,
ಆದರೆ ಮೇಘ ರಾಜನಂತೆ ಸುರಿಯುವನು
ಒಮ್ಮೆಗೇ ನಿಂತು ಬಿಡುವನು ಬಿಸಿಲ ಕಾಯಿಸಿ ,
ಮರೆಯಲಿ ಮೋಡಗಳ ಮಾಯೆ ಬರಲು ಗದರಿಸುವನು,
ನನಗೆ ಅಡ್ಡ ಬರುವುದಕ್ಕೆ .. ತೆರೆದಿಡುವನು
ಎದೆ ಬಾಗಿಲ ಒಳಗೂ ಹೊರಗೂ ನಾ ಅಡ್ಡಾಡುವುದಕ್ಕೆ ..
ಹುಡುಕಿ ಬೇಗ ಕಳೆದು ಹೋದಾನು

ಕಾಯುತ್ತಿರುವೆ

''ಹಿಮಾಲಯ ಗುರುವಿನ ಗರಡಿಯಲ್ಲಿ ''

ಗೌರಿ ಗಂಗಾಧರ್ ನನಗೊಂದು ಪುಸ್ತಕವನ್ನು ಪ್ರೀತಿಯಿಂದ ಕುಂಕುಮ ಹಚ್ಚಿ ಕೊಟ್ಟರು. ''ಹಿಮಾಲಯ ಗುರುವಿನ ಗರಡಿಯಲ್ಲಿ ''

ಅತ್ಯಂತ ಅಮೂಲ್ಯವಾದ ಈ ಪುಸ್ತಕ ನನ್ನದೇ ಬದುಕಿನ ಹಲವು ಅನುಭವಗಳಂತೆ ಕಂಡಿತು . ವಿಸ್ಮಯವೆಂದರೆ ಆ ಪುಸ್ತಕದಲ್ಲಿ ಗೌರಿಯವರೂ ,ಗಂಗಾಧರ್ ಅವರೂ ಇದ್ದರು ,ಆಧ್ಯಾತ್ಮ ದ ದೀಪ ಹಚ್ಚಿ ಕುಳಿತು ನನ್ನೊoದಿಗೇ ಬೆಳಕಿನ ಸಾರ್ಥಕತೆ ಕಂಡದ್ದ್ದು ಸಿಹಿ ಅನುಭವ . ಜೀವನದ ಅತ್ಯಂತ ಪ್ರಮುಖ ತಿರುವಿನಲ್ಲಿ ಭೇಟಿಯಾದ ಈ ಜೀವಿಗಳ ಕಾರುಣ್ಯ ಬದುಕಿನ ಸಿದ್ದಿ . 

ಬನ್ನಿ , ಪುಸ್ತಕ ಹೇಗಿತ್ತು ಎಂದು ನೋಡುವ ಒಮ್ಮೆ ''ಹಿಮಾಲಯ ಗುರುವಿನ ಗರಡಿಯಲ್ಲಿ '',ಹೆಸರೇ ಹೇಳುವಂತೆ ಗುರುವನ್ನರಸಿ ಒಂದು ಪಯಣದ ಕಥೆ ,ಸಾಧನೆಗಳು ಸಾವಿರಾರು ,ಪ್ರತಿ ಪುಟದಲ್ಲೂ ಅನುಭವದ ವಾತ್ಸಲ್ಯಭರಿತ ಪಾಠ ಜೀವನದಲ್ಲಿ ಬೇಕಾ ದನ್ನು ಬಿಟ್ಟು ಬೇಡದರ ಎದೆಗೆ ತುಡಿವ ಜೀವನವನ್ನ ,ಮಮಕಾರಗಳ ಸಹ್ಯತೆಯನ್ನ ತಿಳಿಸುತ್ತಾ ,ಆ ಲೋಕಕ್ಕೆ ಕರೆದುಕೊಳ್ಳುವ ಮಹಾಗಾಥೆ ,ಆಧ್ಯಾತ್ಮ ಉನ್ನತ ಸ್ತರದಲ್ಲಿ ನಮ್ಮ ಎತ್ತರ ಮೀರಿ ಪುನಃ ಸಾಧಾರಣಕ್ಕಿಳಿದು ಹಿಮಾಲಯದ ಶೃಂಗಗಳ ಅಗಾಧತೆಯೂ ರಹಸ್ಯದ ಬಿಡಿಸಲಾಗದ ಒಗಟುಗಳನ್ನು ಮಹಾಗುರುಗಳ ರೂಪದಲ್ಲಿಡುತ್ತಾರೆ .

ಯುವಕನೊಬ್ಬ ಕಡಲ ಧಕ್ಷಿಣದಿಂದ ಪಯಣಿಸಿ ,ಗೆದ್ದು ಬೆಳಕಿನ ಜೀವನ ಪಡೆದು ,ಹಲವು ಜೀವಗಳಿಗೆ ಹೊಸ ದಶೆ ತೋರಿಸಿದ ಅದ್ಭುತ ಬರಹ .

ಹೃದಯಪೂರ್ವಕ ವಂದನೆಗಳು ನಿಮ್ಮ ಪ್ರೀತಿಗಾಗಿ ,......... .... ... ಗೌರಿ ಮತ್ತು ಗಂಗಾಧರ್

ಬಾಳಗೆಳೆಯನೊಡನೆ ಸಂವಾದ


ನಿನ್ನ ಕಣ್ಣೊಳಗೆ ನಡೆದು ಮೂವತ್ತು ವರ್ಷಗಳ ಸಹಚರ್ಯ 
ತಲೆಯೆತ್ತಿ ನಿಲ್ಲುವವರೆಗೂ ಏರಿಳಿತಗಳಲ್ಲಿ ಹೊದ್ದಿಸಿಕೊಂಡಿದ್ದೇನೆ 
ಹದಿನಾಲ್ಕರ ಮುಗ್ಧತೆಯಲ್ಲಿ ನಗುವ ಗೆಳೆಯ ಗೆಳತಿಯರಾಗಿ ,
ಬಾಳದಾರಿ ಹಸೆ ಬರೆದಾಗ ಸಂಗಾತಿಗಳಾಗಿ ಇಪ್ಪತ್ತು ವಸoತ

ಬೇಕಾದಾಗಲೆಲ್ಲಾ ರಚ್ಚೆ ಹಿಡಿದು ಸಾಧನೆಗಳ ಓದಿನಿಂದ
ಏರುವಷ್ಟು ಏರಿಸಿ ಬೇಕಾದನ್ನೆಲ್ಲ ಕೈ ಹಿಡಿಸಿ ದೇಶ ದೇಶ ಸುತ್ತಿಸಿ
ಮೆಲ್ಲನೆ ನಗೆಯಲ್ಲಿ ನೀನು ವಿರಮಿಸುವಾಗ ನನಗೊಂದು ಪ್ರಶ್ನೆ
ನನಗೆ ಬೇಕೆಸಿದ್ದು ನಿನಗೆ ಎಂದಾದರೂ ನೋವು ಕೊಟ್ಟಿತ್ತೇ ?

ಒಮ್ಮೆ ಎದೆಗೆಟ್ಟಾಗ ಅಧ್ಯಾತ್ಮದ ದಾರಿಯಲಿ ಜೊತೆಗೆ ನಡೆದೆ
ಸ್ವರ್ಗವದು ಬದುಕ ಮೀರಿದ ಸತ್ಯ ,''ರೇಕಿ ''ಯ ಒಟ್ಟಿಗೆ ಕಲಿಯುವಾಗ,
ನಿದ್ರಿಸದೆ ಮಗುವ ತೊಡೆಯಲಿ ರಾತ್ರಿಯಿಡೀ ನನಗೆಚ್ಹರವಾಗದಂತೆ ಕಾದದ್ದಿತ್ತು
ಕಣ್ಣಲಿ ಬಂದ ಹನಿ ಕೆನ್ನೆಗೆoದೂ ಇಳಿಯಗೊಡಲ್ಲಿಲ್ಲ ನೀನು,ಅಪೂರ್ವ ನೀನಲ್ಲವೇನು ?

ಆಗಾಗ ನಿಂತು ತಿರುಗಿ ನೋಡಿದ್ದೇನೆ ತಂದೆಯಿರದೇ ನೀ ತಂದೆಯಾಗಿ
ಅಣ್ಣನಿರದೇ ನೀ ಅಣ್ಣನಾಗಿ ,ಗೆಳತಿಯರಿರದೇ ನೀ ಗೆಳತಿಯಾಗಿ
ಧಾವಿಸಿದ್ದೀಯ ಸದಾ ವಾತ್ಸಲ್ಯ ದ ಮಹಾಪೂರವಾಗಿ ಎಲ್ಲವ ಸ್ವೀಕರಿಸಿ
ಏನು ಹೇಳು ?ನಾನು ನಿನ್ನ ಬಾಳಗೆಳತಿಯಾಗಿ ಸಂಪೂರ್ಣಳೇ

ತಿದ್ದಿ ಬಿಡು , ಮನ ನೋಯಿಸಿದ್ದರೆ ಕ್ಷಮಿಸಿಬಿಡು ,ನೋಯದಿರು ನಿನ್ನೊಳಗೆ
ಮಾತು ಹೆಚ್ಚ್ಹಾಗಿ ಹುಡುಗಾಟ ಇನ್ನೂ ಹೋಗಿಲ್ಲ ನಲವತ್ತು ಕಳೆದರೂ ,
ಅಡಿಗೆ ಮನೆಯ ಅಕ್ಕಿ ಡಬ್ಬಿಯಲ್ಲೂ ನಿನ್ನನ್ನೇ ನೆನೆದು ನಗುವ ಪ್ರೇಮ ಉಕ್ಕಿ
ಬಳಸಿ ಹೇಳುವೆ ,ಇರುವ ಹೇಗೆ ಬದುಕಿರುವವರೆಗೂ ,ನಿನ್ನಿಚ್ಚೆಯ ನನಸಿನೊಳಗೆ

ಗೆಳೆಯನಿಗಾಗಿ



ಬೆಳಕಿರುವ ಕಡೆ ಹೋಗೋಣ ಬಾ 
ಮಾತಾಡಬಹುದು ನನ್ನ ನಿನ್ನ ಸ್ನೇಹದ ಮಾತು 
ನಕ್ಷತ್ರದ ಚುಕ್ಕಿಗಳ ನನ್ನ ಮಡಿಲಿಗೆ ನೀ ತುಂಬಿದ 
ಸವಿ ದಿನಗಳ ಶರಧಿಗಳ ಅಬ್ಬರದ ಸಂಗಮದ ಮಾತು
ಬೇಡವಾದರೆ ಹಾರಿಸುವ ಗಾಳಿಪಟ ಮಕ್ಕಳ ಹಾಗೆ ,
ನವಿಲ ನರ್ತನದಿ ಮನಗಳು ಹುಚ್ಛೆದ್ದು ನಕ್ಕ ಕಡೆಗೆ
ನೀ ನಡೆಯುವ ಕಡೆ ನದಿಯಿದ್ದರೆ ಕಾಲಿಟ್ಟು ಕೂರುವ
ಬೆಟ್ಟವಿದ್ದರೆ ಹತ್ತಿಳಿಯುವ ಬಾ ಉಲ್ಲಾಸ ಬರಲಿ
ಹೇಳು ಗೆಳೆಯ ನಿನಗಾಗಿ ಏನು ಮಾಡಲಿ ?
ಹಾ ... ಕೈ ಹಿಡಿದಿರುತ್ತೇನೆ ಚೂರೂ ನೋವದ ಹಾಗೆ .

ದುಗುಡ

ತಿಳಿಗೊಳದಿ ನೀಗಲಾರದ ಬವಣೆ ಕೆಸರ ಬೆರಸಿ 
ರಾಡಿಯೆಬ್ಬಿಸಿದ ಭಾರದ ಈ ಎದೆಯ ಅಟ್ಟಿ ಬಿಡು 
ದಟ್ಟ ಕಾನನದೊಳಗೆ ,ನಿಟ್ಟುಸಿರ ಮನದಲಿ 
ಅಲೆಯಲಿ ಬಿಡು, ಅನ್ನಾಹಾರವಿರದೆ ಕತ್ತಲೆಯೊಳಗೆ

ನಲ್ಲ

ಲಸ್ಸಿಯ ರಸಿಕ ಹುಳಿ -ಸಿಹಿ 
ರುಚಿಯಲಿ ಬೆರೆತ 
ಕೆನೆಯ ಸವಿ ನೀವು ,
ಮತ್ತೆ ಕುಡಿವಾಸೆ.... 
ಬೆಳಗಿಂದ ಸಂಜೆವರೆಗೆ ,
ಮತ್ತೆ ಬೆಳಗಿನವರೆಗೆ