ಭಾನುವಾರ, ಜೂನ್ 23, 2013

ಕೂದಲೆಳೆಯಲ್ಲಿ ಮೊಗವಿರಿಸಿದ ನಲ್ಲ ನಿದ್ರಿಸಿದ್ದು ನೂರು ರಾತ್ರಿ 
ದಿನಗಳೆಚ್ಚರ ತಪ್ಪಿ ದಿನ ತಪ್ಪಿದ್ದು ನನ್ನ ಧರಿತ್ರಿ ,
ಅವನಾಸೆ ಅತಿ ಮುದ್ದಿನಲ್ಲಿ ಪ್ರತಿದಿನದ ನಕ್ಷತ್ರಮಾಲೆ ಜಾರಿ ಕೊರಳೊಳಗೆ 
ಹುಣ್ಣಿಮೆ ಚಂದಿರ ಉದಯಿಸಿದ ಬಾನಂಗಳದೊಳಗೆ . 
……………………………………………………………………………….

ಬದುಕಿನ್ನೂ ಸಾಗಬೇಕಿದೆ ಅರವತ್ತರ ನಂತರ ,
ನಿತ್ಯದ ಬವಣೆಗೆ ಉತ್ತರ ಕೊಡುವ ಸಿಟ್ಟಿದು ನಿರಂತರ
ಸಾಗಲು ಬಾಳು ಯಾರು ಮಾಡಿದ್ದು ಮನೆಗೆ ಸೇರುವ ದಿನ ?
ಹಸಿದವರಿಗೆ ಆಯಸ್ಸು ಹೆಚ್ಚು ಬಲವಿರುವಷ್ಟು ದುಡಿವ ಮನ .
…………………………………………………………………………………………………………………………….
ಕೆನ್ನೆಯಲೇಕೆ ಕೆಂಪ ಬರೆದೆ ಪ್ರಿಯನೇ ನಿನ್ನ ತೋಳುಗಳಲ್ಲ್ಲಿಪಸರಿಸಬೇಕಿತ್ತು
ಕೊರಳನಪ್ಪಿ ನಿದ್ರಿಸುವ ಕೈಯುದ್ದಕ್ಕೂ ಇನ್ನಷ್ಟು ಒಲವ ತುಂಬಬೇಕಿತ್ತು
ಕಂಪಿಸುವ ಕಣ್ಣ ತೆರೆದು ನಿನ್ನ ನೋಡಿದಷ್ಟೂ ಹಿತ ಹೃದಯದೊಳಗೆ
ರಾತ್ರಿ ಯಾಗಲಿ ಯುಗದಷ್ಟು ದೀರ್ಘ ಎನ್ನುವಾಸೆ ಮನಸಿಗೆ .
…………………………………………………………………………………………………………………………………
ಎಚ್ಚರ ತಪ್ಪಿದ್ದೇನೆ ನಿನ್ನ ಹೂವರ್ಷದ ಸುಗಂಧದ ಮಳೆಗೆ
ಪ್ರಿಯನುಡಿಗೆ ,ಆಲಿಂಗನಕೆ ,ಬೆಳಕು ಕತ್ತಲೆಯಾಟ ಮನಕೆ
ಇರಲಿ ಬಿಡು ನನ್ನುಸಿರು ನೀ ಸೃಷ್ಟಿಸಿದ ಸ್ವರ್ಗದಲ್ಲಿ ,
ಬಯಸಿ ತೆರೆದ ನನ್ನೊಲವ ಕಡಲ ಉಕ್ಕುವಬ್ಬರದಲ್ಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ