ಭಾನುವಾರ, ಜೂನ್ 30, 2013

ರವಿ ಬೆಳೆಗೆರೆಯವರ ''ಮಾಂಡೋವಿ '',ಭಾವನ ಪ್ರಕಾಶನ -ಇದನ್ನು ನಾನೋದಿದ್ದು ಎರಡು ವರ್ಷದ ಕೆಳಗೆ ,ಚಲಂ ಮತ್ತು ಮಾಂಡೋವಿಯ ಪ್ರೇಮಪ್ರಕರಣ ,ಚಲಂನ ಹಪಹಪಿಕೆ ಪುನಹ ಓದುವಂತೆ ಮಾಡಿತು ,ಇದೇನ ಪ್ರೀತಿ ?ಇದೇ ಪ್ರೀತಿ ಅನ್ನುವ ಮಾಂಡೋವಿ,ಚಿಕ್ಕಂದಿನಲ್ಲಿ ಶುರುವಾದ ಪ್ರೀತಿಯ ಪ್ರವಾಹ ಕೊನೆಯಾದಾಗ ಮುಪ್ಪಾವರಿಸಿ ,ಪಕ್ವಗೊಂಡ ಹೃದಯಗಳೆರಡು ಒಂದಾಗುವ ಕ್ರಿಯೆ ಲೇಖಕನ ಬರಹದ ಪ್ರೌಢ ಗೆಲುವು . ಡಾ . ಚೆನ್ನಬಸವರೊಂದಿಗಿನ ಮಾಂಡೋವಿಯ ಒಡನಾಟ ,ಅವರ ನಿಲುವು ಬದುಕಿನ ಕುತೂಹಲಗಳ ಸಾಕ್ಷಿ . ಓದಿರೊಮ್ಮೆ ,ನಕ್ಕಾರೂ ನಗಿ ,ಚಲಂನ ಚಟುವಟಿಕೆಗಳನ್ನು ನೋಡಿ . ಒಳ್ಳೆಯ ಪುಸ್ತಕ . ಪ್ರೀತಿ ಗ್ರೇಟ್ ಗೆಳೆಯರೇ ...... ..... . ...
ನಿನ್ನೊಳಗೆ ಹೊರಟೆ ನೋಡಲೆಂದು
 ಅವಾಗಿನ ಹಾಗೆಯೇ ಇರುವೆಯಾ ಎಂದು 
ನಿನ್ನೊಳಗಿನ ಅವನು ಹೇಳಿದ ,
ನೀನಲ್ಲ ಅವಳು ಇಪ್ಪತ್ತು ವರ್ಷದ ಹಿಂದಿದ್ದವಳು 

ಶುಕ್ರವಾರ, ಜೂನ್ 28, 2013

ನಿನ್ನ ಮೇಲಿನ ಕೋಪವೆಲ್ಲ ಕರಗಿ ,
ಪ್ರಿಯವೆದೆಯ ಸಂತೈಸುವಾಗ ,
ಕಣ್ಣೀರು ಹರಿದು ನಿನ್ನ ತೋಯಿಸಿ 
ಭಾವಗಳು ತಂಪಾದಾಗ 
ನಿನ್ನ ಪ್ರೀತಿಸಲಾರoಬಿಸಿದೆನೋ
ಎನ್ನುವನುಮಾನ 
ಮನವೇಕೆ ಹೀಗೆ ವಿಚಿತ್ರದ ಚಿತ್ರಣ
ಪ್ರೊ .ಕೆ.ಎಮ್ .ಸೀತಾರಾಮಯ್ಯನವರ ,ಗ್ರೀಕ್ ಮಹಾಕವಿ ಹೋಮರನ ಒಡಿಸ್ಸಿ (ಯೂಲಿಸಿಸ್ಸನ ಸಾಹಸಗಳು ) ಪುಸ್ತಕ ಸುಂದರ ಗ್ರೀಕ್ ಕಥೆ ಗ್ರೀಕ್ ಮಹಾ ವೀರರ ಸಾಹಸ ,ಟ್ರೂಜನ್ಮಹಾಯುದ್ಧದಾನಂತರದ ಮಹಾಗಾಥೆ ,ಸುಂದರಿ ಹೆಲನ್ನಳ ಅಪಹರಣದಿಂದ ನಡೆದ ಯುದ್ಧ, ಈ ಮಹಾಕಾವ್ಯದ ಸಮಾಜ ಜೀವನ ವೀರರ ಬಗ್ಗೆ ಬಹಳವಾಗಿ ಬಣ್ಣಿಸುತ್ತದೆ .ಒಡಿಸ್ಯೂಸನ ಮರುಯಾನ ,ಅವನ ಸಾಹಸ ಮನಗೆಲ್ಲುತ್ತದೆ ,ದೇವತೆಗಳ ಮನೋನಿರ್ಣಯ 
ತಂತ್ರಗಳು ಸುಂದರವಾಗಿ ಚಿತ್ರಿತವಾಗಿದೆ . ಗ್ರೀಕ್ ಮಹಾಕವಿ ಹೋಮರನ ಒಡಿಸ್ಸಿ ಮಹಾಕಾವ್ಯದ ಸರಳಾನುವಾದ ಈ ಪುಸ್ತಕ. ಹಿಡಿದ ನಿಮಿಷದಿಂದ ಬಿಡದ ಪುಸ್ತಕ ಅಮೂಲ್ಯ ಅನುಭವಗಳ ಬ್ರಮೆ ಹುಟ್ಟಿಸುತ್ತದೆ . . ಇದು ಓದಲೇ ಬೇಕಾದ ಪುಸ್ತಕ. 
ಹೋಮರ್ ಮಹಾ ಕವಿಯ ''ಟ್ರೂಜನ್ ಮಹಾಯುದ್ಧ'' ಮತ್ತು ''ಈನಿಯಡ್ '' ಕೃತಿಗಳನ್ನಿನ್ನೂ ಓದಲಾಗಿಲ್ಲ
''ಗ್ರಾಮದೇವತೆಗಳು '' ಡಾ .ಸಿದ್ದಲಿಂಗಯ್ಯ ನವರ ಪುಸ್ತಕ ,ಮೂಲಭಾರತಿ ಪ್ರಕಾಶನ, ಬೆಂಗಳೂರು ,ಗ್ರಾಮೀಣ ಜೀವನದ ಭಾಗವೇ ಆಗಿರುವ ಗ್ರಾಮದೇವತೆಗಳ ವಿಶೇಷದ ಸಮಗ್ರ ಚಿತ್ರಣವಿದು .ಇದೇ ಗ್ರಾಮದ ಐಕ್ಯತೆ ಸಾಮರಸ್ಯದ ಜೀವಾಳ ಈ ಗ್ರಾಮದೇವತೆಯಾಗಿದ್ದಳೆ,ಹೆಚ್ಚಿನ
ದೇವರುಗಳು ಹೆಣ್ಣು ದೇವತೆಗಳು ,ಬ್ರಹ್ಮ ,ವಿಷ್ಣು ,ಮಹೇಶ್ವರ ,ಇವೆಲ್ಲರ ಆರಾಧನೆಯ ಇದ್ದಾಗಲೂ, ಗ್ರಾಮದೇವತೆಗಳ ಶಕ್ತಿ- ಜನರ ನಂಬಿಕೆಯು ಊರ ಹಬ್ಬಗಳಲ್ಲಿ ಕಾಣಿಸುತ್ತದೆ .ಲೇಖಕರ ಅಧ್ಯಯನ ,ಗ್ರಾಮದೇವತೆಗಳ ವಿವರವಾದ ಪ್ರಸ್ತಾವನೆ ,ಸಂಸ್ಕೃತಿಯ ವೈಭವವನ್ನ ಕಣ್ಣು ಮುಂದಿಟ್ಟಿದೆ

ಬುಧವಾರ, ಜೂನ್ 26, 2013

ರವಿ ಬೆಳೆಗೆರೆಯವರ 'ಹೇಳಿ ಹೋಗು ಕಾರಣ'ದ ಪ್ರಾರ್ಥನಾಳ ಪಾತ್ರ ,ಹಿಮವಂತನ ದೃಡ ತೆ ಹಿಂದಿನ ಸೇಡು ,ಕರಗುವಿಕೆ ,ಮತ್ತೆ ಮತ್ತೆ ಅದೇ ಪಾತ್ರಗಳ ಬದುಕು ಸುತ್ತ ನಿoತಿದೆಯೋ ಎಂಬ ಬ್ರಮೆ ಹುಟ್ಟಿಸುತ್ತದೆ . ಪ್ರಾರ್ಥನಾಳ ಪಾತ್ರವನ್ನು ರವಿಬೆಳೆಗೆರೆಯವರು ಪ್ರಶ್ನೆಯಾಗಿ ಸೃಷ್ಟಿಸಿದ್ದಾರೆ . ಒಳ್ಳೆಯ ಪುಸ್ತಕ.ಪುನ: ಓದಿಸಿಕೊಳ್ಳುವಂತದು .
ರವಿಬೆಳೆಗೆರೆಯವರ ''ಕವಿರಾಜಮಾರ್ಗವಲ್ಲ ಇದು ಕಾಮರಾಜಮಾರ್ಗ ''ಪುಸ್ತಕ ನಾನು ಇತ್ತೀಚಿಗೆ ಓದಿದ್ದು ,ನೆಮ್ಮದಿ ನಿದ್ದೆ ಎರಡನ್ನು ಕೆಡಿಸಿ ತಲೆ ಬಿಸಿ ಕೊಟ್ಟ ಪುಸ್ತಕ .ಕಾಮಾತಿರೇಕದಲ್ಲಿ ಮುಳುಗೆದ್ದ ರಾಜಕಾರಣವನ್ನ ಬಿಂಬಿಸುವ ಯಾವುದೋ ನೈಜರೂಪಗಳಿಗೆ ಹತ್ತಿರವಾದ ಬರಹವಿದು .ಸಂಕೋಚದಲ್ಲಿ ಹತ್ತು ಸಲ ಮುಚ್ಚಿಟ್ಟು ಓದಿಸಿಕೊಂಡರೂ ,ಕ್ರಿಯಾಶೀಲತೆಯನ್ನು ಉಳಿಸಿಕೊಂಡ ಈ ರಾಜಕೀಯ ಪಲ್ಲಟದ ಕಾದಂಬರಿ ಅದರದೇ ಆದ ವಿಶಿಷ್ಟತೆ ಹೊಂದಿದೆ .ಸಾಕು ತಂದೆಯ ಕಾಮವಿಕಾರಕ್ಕೊಳಗಾದ ಆದರ್ಶದ ಹುಡುಗಿ ಶುಭಾ ಪುನಃ ಲೈಂಗಿಕ ಶೋಷಣೆಯಲ್ಲಿ ಸಿಲುಕಿ ಅದೇ ಜೀವನದಿಂದ ಅಧಿಕಾರಕ್ಕೆ ಬರುವುದು ನಮ್ಮ ವ್ಯವಸ್ಥೆಯ ವಿಕಾರ . ಮೋಹಕ್ಕಾಗಿ ನರ್ಸಿನ ಹಿಂದೆ ಬಿದ್ದು ಸರ್ವನಾಶವಾದ ರಾಜಕಾರಣಿ ,ರಾಜಕಾರಣದ ಜನರ ಹಿಂದೆ ಬಿದ್ದ ಬೆಂಬಲಿಗರು ,ಹಲವು ಖಾಸಗಿ ಬದುಕಿನ ಅನೈತಿಕ ಎಳೆಗಳು ಎದೆ ಕುಗ್ಗಿಸಿ ಹೀಗಾಗಬಾರದು ಎಂಬ ರೋಷ ತರುತ್ತದೆ . ಪ್ರಶ್ನೆಯಾಗುವ ದೇಶದ ರಾಜಕಾರಣ ಹೊಲಸಲ್ಲಿ ಹೊರಳಿ ನರಳುತ್ತದೆ . 
ಎದೆಯ ಒಳಗನ್ನು ಬಗೆದು ನಿಜವಾಗಿ ನಮ್ಮದೆಯ ಸಂಸ್ಕಾರವನ್ನ ಚೂರಿಯಲ್ಲಿ ಇರಿದು ಪ್ರಶ್ನಿಸುವ ಲೇಖಕ ,ಸಮಾಜದ ಕಳೆ ಕೊಳೆಗಳ ನಾರುವಿಕೆ ದಾಟಿ ಬಾಳುವ ಸನ್ನಡತೆಗೆ ಪ್ರಶ್ನೆ ಹಾಕುತ್ತಾನೆ .ಬರವಣಿಗೆಯ ಸೊಗಸು ,ಚಾತುರ್ಯ ,ಕಥಾವಸ್ತುವಿಗೆ ದೊರೆತಿರುವ ಸಾಮರ್ಥ್ಯ ,ಹಿಡಿತ ಓದುಗನಲ್ಲಿ ಪುಸ್ತಕ ಕೆಳಗಿಡಲಾಗದ ಕುತೂಹಲ ಓದುವಾತುರ ಸೃಷ್ಟಿಸುತ್ತದೆ . 

ರವಿ ಬೆಳೆಗೆರೆ 
ಭಾವನಾ ಪ್ರಕಾಶನ

ಮಂಗಳವಾರ, ಜೂನ್ 25, 2013

ರವಿಬೆಳಗೆರೆಯವರ ''ಅಮ್ಮ ಸಿಕ್ಕಿದ್ಲು ''ಭಾವನಾ ಪ್ರಕಾಶನದ ಅಪರೂಪದ ಅಮ್ಮನನ್ನು ನೆನೆವ ಕುಡುಕ ಮಗನ ಹಂಬಲಿಕೆಯ ಕಥೆ ,ಕುಡಿತದ ವ್ಯಸನಕ್ಕೆ ಸಿಕ್ಕ ನಾಯಕ ತಾಯಿಯೊಂದಿಗಿನ ಒಂದು ದಿನಕ್ಕಾಗಿ ಹಂಬಲಿಸುವುದು ಹೃದಯಪೂರ್ಣ ,ಅಮ್ಮ ಕಳೆದ ಒಂದು ದಿನದ ಸಾಂಗತ್ಯ ಅವನ ಜೀವನದ ಅಮೂಲ್ಯ ದಿನ, ಅಮ್ಮ ಸಿಗಬೇಕೆ ಮತ್ತೆ ?ಅವಳು ಸಾಕಿದ ಆದರ್ಶದ ಜೀವನವನ್ನ ಕುಡಿತದಲ್ಲಿ ಮುಳುಗಿಸಿ ಏಳಲಾರದ ಅತೀ ಬುದ್ದಿವಂತ ,ಭಾವುಕ ಮಗ ಹೀಗೆ .....,ಸ್ಲಂ ನಲ್ಲಿ ಮನೆಮಾಡಬೇಕಾದಾಗಲೂ ,ನೌಕರಿ ,ಗೌರವ ,ನೆಲದ ಪಾಲಾದಾಗಲೂ ಮನಸ್ಸಿನ ಗೊಂದಲಕ್ಕೆ ಸಿಗದೇ ಕುಡಿದು ನಿರಾಳವಾಗುವ ವ್ಯಕ್ತಿತ್ವ ,ಇದೇನಾ ಅಮ್ಮ ರೂಪಿಸ ಹೊರಟ ವ್ಯಕ್ತಿತ್ವ ?ಯಾಕೆ ಹೀಗಾಯಿತು ಎನ್ನುವ ತಳಮಳ ಓದುಗನಲ್ಲಿ ?. ಒಬಳಮ್ಮನ ಸಿಂಗಾರ ಸಾವಿನತ್ತ್ತ ಸಾಗುವಾಗಲೂ ಎದೆಬಡಿತ ಹೆಚ್ಚಿಸುವ ಬದುಕಿನಾಸಕ್ತಿ ,ರಾಧಮ್ಮನ ಸುoದರ ಸಾವಿನ ಹೆಣ್ತನದ ಬಯಕೆ,ಉಬ್ಬಿಸಿ ಮಗನನ್ನು ಕೋಳಿ ಕಾಳಗದಂತೆ ಹಣಕ್ಕಾಗಿ ಬಳಸುವ ಅಪ್ಪ ,ಅವನ ಶಬ್ಬಾಸುಗಿರಿಯ ಕೃತಿಮತೆ ತಿಳಿವಿಗೆ ಬಂದಾಗ ಅಮ್ಮನ ಬಗ್ಗೆ ಕಣ್ಣೀ ರು. ರವಿಜೀಯವರ ಬದುಕುವ ಪ್ರೇರಣೆ ಅಮ್ಮ ನ ನೆನಪು ಮರೆಯಲಾಗದ ಪುಸ್ತಕವನ್ನ ಕೊಟ್ಟಿದೆ,

ಸೋಮವಾರ, ಜೂನ್ 24, 2013

ದೇವನೇಕೆ ಮರೆತ ನಿನ್ನ ಗರ್ಭದಲ್ಲಿದ್ದ ಜೀವಕೆ ಹೃದಯ ಬಡಿತ ಇಡಲು ?
ಉಮ್ಮಳಿಸುವ ನಿನ್ನ ದುಃಖವ ಸಹಿಸಲಾರೆ ಗೆಳೆತಿ ,
ನಾಳೆ ಹುಟ್ಟಬಹುದಾಗಿದ್ದ ಆ ಪುಟ್ಟ ಜೀವದ ಕನಸು ಕಂಡ ನಿಮ್ಮಿಬ್ಬರನ್ನೂ ಅಪ್ಪಿ 
ಏನು ಹೇಳಲಿ ? ದೇವರೇ ಮತ್ತೊಮ್ಮೆ ಕರುಣೆ ಇಡು .
ನಾವು ಮಕ್ಕಳಾಗಿದ್ದಾಗ 
ಅಪ್ಪನನ್ನು ಮರೆಸುವಂತೆ ಪ್ರೀತಿಸುತ್ತಿದ್ದ ಚಿಕ್ಕಪ್ಪ ,
ಯೋಗ, ಸೂರ್ಯನಮಸ್ಕಾರಗಳ ,ಆದರ್ಶದ ಕತೆಗಳ 
ಕೆತ್ತನೆಯಲಿ ತಿದ್ದಿದ ವಿಗ್ರಹವಾಗಿಸಿ ಎದೆಗೆ ಕೆಚ್ಹು ತುಂಬಿ 
ಎಂದೋ ಒಂದು ದಿನದ ದರ್ಶನವನ್ನು ತಪ್ಪಿಸಿ 
ಸ್ವರ್ಗದಲಿ ಅಸ್ತಂಗತರಾಗಿ ನನ್ನ ಹೃದಯದಲ್ಲುಳಿದರು
ಇದ್ದಲ್ಲಿ ಇರಲಿ ಬಿಡು ಕಾಲಡಿಯ ಮರಳು 
ತಲೆ ತುಂಬಿದ ಮಣ್ಣಿನಲಿ ಹೊಗೆ ಇಟ್ಟಿಗೆ ಸುಡಲು 
ಕಸ ಗುಡಿಸಿ ಸೇರಿಸಿದೆ ಇಂದಿನವೆರೆಗಿನ ರಾಶಿ 
ಬಿಳಿ ಹಾಳೆ ತೆರೆದರೆ ಹೊಸ ನೆನಪುಗಳ ಬರೆಸಿ
ಮೆರೆತ ನಿನ್ನ ಕನ್ನಡಕದ ಪ್ರೇಮಿಗೆ ನನ್ನ ಕಣ್ಣು ಹೊಂದುತ್ತದೋ ನೋಡಬೇಕು 
ವರುಷಗಳಾಯಿತು ಕಣ್ಣು ಕಣ್ಣು ಸೇರಿ ಒಂದೇ ಭಾವ ಹಾಡಿ ,ಈಗಲೂ ಹಾಗೆಯೇ ?
ನಿನ್ನ ಚಪ್ಪಲಿ ಬಿಟ್ಟ ಮಣ್ಣಿನ ಗುರುತಿಗೆ ಅದೇ ಮಣ್ಣಿನ ವಾಸನೆ ,ಬಣ್ಣ ,ಚಿತ್ತಾರ 
ನನ್ನ ಕಾಲ ಹೊಗಿಸಿ ನೋಡೆ ,ಬೆರಗು ನಿನ್ನ ಅಚ್ಹಿನೊಳಗೆ ನನ್ನ ವಿಸ್ತಾರ .

ಭಾನುವಾರ, ಜೂನ್ 23, 2013

ಕೂದಲೆಳೆಯಲ್ಲಿ ಮೊಗವಿರಿಸಿದ ನಲ್ಲ ನಿದ್ರಿಸಿದ್ದು ನೂರು ರಾತ್ರಿ 
ದಿನಗಳೆಚ್ಚರ ತಪ್ಪಿ ದಿನ ತಪ್ಪಿದ್ದು ನನ್ನ ಧರಿತ್ರಿ ,
ಅವನಾಸೆ ಅತಿ ಮುದ್ದಿನಲ್ಲಿ ಪ್ರತಿದಿನದ ನಕ್ಷತ್ರಮಾಲೆ ಜಾರಿ ಕೊರಳೊಳಗೆ 
ಹುಣ್ಣಿಮೆ ಚಂದಿರ ಉದಯಿಸಿದ ಬಾನಂಗಳದೊಳಗೆ . 
……………………………………………………………………………….

ಬದುಕಿನ್ನೂ ಸಾಗಬೇಕಿದೆ ಅರವತ್ತರ ನಂತರ ,
ನಿತ್ಯದ ಬವಣೆಗೆ ಉತ್ತರ ಕೊಡುವ ಸಿಟ್ಟಿದು ನಿರಂತರ
ಸಾಗಲು ಬಾಳು ಯಾರು ಮಾಡಿದ್ದು ಮನೆಗೆ ಸೇರುವ ದಿನ ?
ಹಸಿದವರಿಗೆ ಆಯಸ್ಸು ಹೆಚ್ಚು ಬಲವಿರುವಷ್ಟು ದುಡಿವ ಮನ .
…………………………………………………………………………………………………………………………….
ಕೆನ್ನೆಯಲೇಕೆ ಕೆಂಪ ಬರೆದೆ ಪ್ರಿಯನೇ ನಿನ್ನ ತೋಳುಗಳಲ್ಲ್ಲಿಪಸರಿಸಬೇಕಿತ್ತು
ಕೊರಳನಪ್ಪಿ ನಿದ್ರಿಸುವ ಕೈಯುದ್ದಕ್ಕೂ ಇನ್ನಷ್ಟು ಒಲವ ತುಂಬಬೇಕಿತ್ತು
ಕಂಪಿಸುವ ಕಣ್ಣ ತೆರೆದು ನಿನ್ನ ನೋಡಿದಷ್ಟೂ ಹಿತ ಹೃದಯದೊಳಗೆ
ರಾತ್ರಿ ಯಾಗಲಿ ಯುಗದಷ್ಟು ದೀರ್ಘ ಎನ್ನುವಾಸೆ ಮನಸಿಗೆ .
…………………………………………………………………………………………………………………………………
ಎಚ್ಚರ ತಪ್ಪಿದ್ದೇನೆ ನಿನ್ನ ಹೂವರ್ಷದ ಸುಗಂಧದ ಮಳೆಗೆ
ಪ್ರಿಯನುಡಿಗೆ ,ಆಲಿಂಗನಕೆ ,ಬೆಳಕು ಕತ್ತಲೆಯಾಟ ಮನಕೆ
ಇರಲಿ ಬಿಡು ನನ್ನುಸಿರು ನೀ ಸೃಷ್ಟಿಸಿದ ಸ್ವರ್ಗದಲ್ಲಿ ,
ಬಯಸಿ ತೆರೆದ ನನ್ನೊಲವ ಕಡಲ ಉಕ್ಕುವಬ್ಬರದಲ್ಲಿ
ಹೆದರುವೆನು ನೆನಪುಗಳ ತೆರೆಯಲು 
ಮುಚ್ಚಿಟ್ಟ ಕಷ್ಟಗಳ ರಾಶಿ ರಾಶಿ 
ತೆಳು ಹೊದಿಕೆ ಹೊದಿಸಿರುವೆ 
ಅಳಿಸಿ ನಗು ರಂಗೋಲಿಯ ಬರೆವೆ . 
………………………………………………..
ಬೇಡದ ಮಾತುಗಳ ನಡುವೆ ಸಿಕ್ಕಿಕೊಂಡ ಮನಸ್ಸು
ಬಿಡಿಸಿಕೊಳ್ಳಲಾಗದೇ ಕೊರಗಿದ್ದು ನೂರು ಬಾರಿ ,
ಮೌನದ ಸಂಕೋಚದಲ್ಲಿ ಪ್ರೀತಿಯನ್ನ ಮಾತಾಗಿಸದೇ
ದೂರ ನಡೆವಾಗ ಆತಂಕ ಹಲವು ಪರಿ .
………………………………………………..

ಬರುವಿರಾ ಒಮ್ಮೆ ಉತ್ತರಖಂಡಕ್ಕೆ
ಉಸಿರು ಕೊನೆಯಾಗಿದೆ ಎಂದು ಬಿಟ್ಟು ಹೋದಿರೇಕೆ ಸೈನಿಕರೇ ,
ಹಿಂತಿರುಗಿ ನೋಡಿ ಅಲುಗಾಡದಿದ್ದರೂ ,ಉಸಿರಾಡುತ್ತಿದ್ದೇನೆ
ನೋವೂ ತಿಳಿಯದ ತ್ರಿಶಂಕುವಿನಲ್ಲಿ ಸಿಕ್ಕಿಕೊಂಡ ನನ್ನ ಪ್ರಾಣ
ನನ್ನವರ ಮಡಿಲಲ್ಲಿ ಕೊನೆಯಾಗಲಿ ಎಂದು ಹಂಬಲಿಸುತ್ತಿದೇನೆ .
……………………………………………………………………………….
ರುಚಿ ರುಚಿ ಅಡಿಗೆ ಮಾಡಿ ಹೆಮ್ಮೆಯಿಂದ ಬಡಿಸಲು
ಹೊರಟಾಗ ,ಕೆ ಎಫ್ ಸಿ ಗೆ ಓಡಿದವರು ತಿಂದದ್ದೇ ಬೇರೆ
ಉದ್ದಿನ ಬೋoಡ ಬಿಟ್ಟರೆ ,ಮತ್ತೊಂದನ್ನ ಮುಟ್ಟದವರು
ರಾತ್ರಿಗೆ ಈ ಚಪಾತಿ ,ತರಕಾರಿಗಳ ತಿನ್ನುವವರೇ ?
…………………………………………………
ಗೆಳೆಯ ಈ ತುಟಿಗಲ್ಲಕ್ಕೆ ಹೆಸರಿಡಲಾಸೆ ಏನೆoದಿಡಲಿ ?
ನೀ ಸ್ಪರ್ಶಿಸಿದ ವಸ್ತ್ರ ಒಗೆಯದೇ ವರುಷಗಳಾದರೂ
ಕೈ ಮೆದುವಿಗೆ ಮೃದು ಮಾತಾಡಿಲ್ಲ ,ಏನೆನ್ನಲಿ ?
ಮೌನದಾಚೆಯ ವಿಹಾರವ ಅಕ್ಷರವಾಗಿಸಲೇ ?
……………………………………………………………………………………
ಗೆಳತಿ ಉಪ್ಪಿಲ್ಲದೇ ಹೊರಟಿದ್ದೆ ನಿನ್ನ ಭಾಷೆ ಕೊಟ್ಟ ಮಾತಿನೂರಿಗೆ
ಸುಳ್ಳುಗಳ ಸಕ್ಕರೆಯಲಿ ಅದ್ದಿಬಿಡು ನನ್ನ ಮಾತು
ಪ್ರೀತಿ ಮಾತ್ರ ನಿಜ ,ಆತ್ಮಗೆಳೆಯನ ಸಾಕ್ಷಿ ,ಅವನ ಜೀವನದಿ ಹೊಕ್ಕು
ನನ್ನ ಚಿತ್ರ ಎಂದೂ ಅಳಿಸದಂತೆ ಕೋರಿಬಿಡು ..

ಶನಿವಾರ, ಜೂನ್ 22, 2013

ದೋಸೆಯಲ್ಲಿ ನೀನು ಕಂಡಾಗ ಕಾದ ಕಾವಲಿ ಮರೆತು 
ಮೈಮರೆತು ಮನೆಯೆಲ್ಲ ಹೊಗೆಯಾದದ್ದು ನಿಜ ,
ಚಟ್ನಿಯನ್ನು ಬೀರುವಿನಲ್ಲೂ ,ವಸ್ತ್ರವನ್ನು ತಂಪು ಪೆಟ್ಟಿಗೆಯಲ್ಲೂ ಇಟ್ಟದ್ದೂ ಸತ್ಯ 
ಮುಂದಿರದೆಯೂ ಮೈಮರೆಸುವ ನೀನು ,ತಪ್ಪುಗಳಾದಂತೆ ಬಳಸಿ ಇರಬಾರದೇ ಸದಾ ?
ಕಣ್ಣೀರಿಗೆ ಹೊತ್ತು ಗೊತ್ತಿಲ್ಲವೇ ? ಬೇಡಾದಾಗ ಬಂದು ಮನವ ಭಾರವಾಗಿಸಿ 
ಎನೂ ಬೇಕಾಗಿಲ್ಲ ಅನ್ನಿಸಿ ,ಜಗತ್ತೇ ಕೊನೆಯಾದಂತೆ ಶೂನ್ಯ ಭಾವ . 
ನಗುವ ಹೂ ಮನಸಿಗೆ ಈ ಜಗವೆಲ್ಲ ಸುಂದರ ಪ್ರೀತಿ ತುoಬಿದ ಧರಿತ್ರಿ 
ನೋಡಿದ್ದೆಲ್ಲಾ ಅಪೂರ್ವ ತನ್ನೊಳಗೆ ತುಂಬಿ ಕೊಳ್ಳುವ ತವಕ .
 ಉತ್ತರಾಖಂಡ ಮಳೆ
 ಉತ್ತರಾಖಂಡದಲಿ ಕೊಚ್ಚಿ ಹೋದ ಅಮೂಲ್ಯ ಪ್ರಾಣಗಳೇ 
ನಿಮಗೆನ್ನ ಕಂಬನಿಯ ಶೃದ್ದಾಂಜಲಿ 
ಬಂದೆವು ನಾಳೆ ಎಂದು ಹೊರಟು ಮಳೆ,ಪ್ರವಾಹದಲಿ ಸಿಲುಕಿ 
ಅತ್ಮವನ್ನಷ್ಟೇ ಮನೆ ಕಳುಹಿಸಿ ಹೊರಟಿರಾ ?

ಉಳಿದ ಗೆಳಯರೇ ಮನೆ ಮನೆಯಲ್ಲೂ ಬೇಡಿಕೆಯ ದೀಪ ದೇವರೆದುರು
ಕಾತರದ ಅಮ್ಮಂದಿರು ,ಮನೆಯವರು ಬೇಗ ಬನ್ನಿ ,
ಉತ್ತರಾಕಾಂಡದಲಿ ನಡೆದದ್ದು ದೂರದರ್ಶನ ಬಿತ್ತರಿಸುವಾಗ ,
ನಿಮ್ಮ ದನಿ ದೂರ ವಾಣಿಯಲ್ಲಿ ಕೇಳಿ ನಿಟ್ಟುಸಿರು .

ಬದುಕು ಕಷ್ಟ ಪ್ರಕೃತಿ ತಿರುಗಿ ಬಿದ್ದಾಗ ,ಭೂಮಿಯೇ ಕೈ ಬಿಡೆ ಹೇಗೆ?
ಎದೆಯಲ್ಲಿ ಗಟ್ಟಿ ದೈರ್ಯದ ಉತ್ಸಾಹ ತುಂಬಿ ವಯಸ್ಸಾದವರ ಹೊತ್ತು ಬಂದು ಬಿಡಿ
ಕೋಟಿ ಹೃದಯಗಳ ಪ್ರಾರ್ಥನೆ ನಿಮ್ಮೊಂದಿಗಿದೆ ,ಬಲವಿದೆ
ಮಳೆ ಗಾಳಿ ಚಳಿ ಪ್ರವಾಹ ನಷ್ಟ ಕಷ್ಟ ಮೀರಿ ತಲುಪಿ ನಿಮ್ಮ ಮನೆಗೆ
ಮಳೆಗೊಂದು ಆಹ್ವಾನ 
ಶ್ರಾವಣಕೆ ಕಾಯಲಾರೆ ನನ್ನೆದೆ ಹಬ್ಬವಿಂದು ಬಂದು ಬಿಡು ರಂಗೋಲಿಯ ಸಪ್ತ ವರ್ಣದ ಮೇಲೆ ಹೆಜ್ಜೆಯಿರಿಸಿ ,ಪ್ರಿಯಹೃದಯವೇ ಆಷಾಡ ,ಅಮಾವಾಸ್ಯೆ ರಾಹುಕಾಲಗಳ ಮೀರಿ ನರ್ತಿಸುವ ಹೂ ಮನಕ್ಕೆ ಏನುತ್ತರಿಸಲಿ ?ನಿನ್ನ ಬರುವಿಗಾಗಿ ಸ್ತಭ್ದವಾದ ಸಂಜೆಗೆಂಪಿನ ಆಕಾಶ ,ರಾತ್ರಿಗೆ ಅಡ್ಡ ನಿಂತು ,ನಿದ್ದೆಗೆ ಹೊಡೆತ ಕೊಟ್ಟು ಕಾಲವಾಗಿದೆ ,ದುಂಬಿ ಕಂಗಳ ಮುತ್ತ ಹನಿ ತುಟಿಗಿಳಿದು ಉಪ್ಪಾಗಿಸುವುದು ಸಹ್ಯವೇ ? ಅಂದು ಧೂಳಿನ ತೆರೆಯಲಿ ನಿನ್ನ ಕೈ ಬೀಸುವಿಕೆ ನೋಡಿದಾಗ ,ಪುನಹ ಕರೆದರೋ ಎಂಬ ಬ್ರಮೆಗೆ ಮತ್ತೆ ಬಂದಿದ್ದೆ ,ದೇಹವಿರಿಸಿ ಉಸಿರ ಮಾತ್ರ ಹೊತ್ತು ದೇಹಾತೀತ ನೀಲದಲ್ಲಿ ,ಅಲ್ಲಿ ನೀನು ಆಗಸದಲ್ಲಿ ಮೋಡದ ಮರೆಯಲಿ ,ಮಹಾವಿಷ್ಣುವಿನoತೆ ಕಮಲದ ಹಾಸಿಗೆಯಲ್ಲಿ ಪವಡಿಸಿದ್ದನ್ನ ನೋಡಿದೆ ,ಕಾಲಿನತ್ತ ನೋಡಲಿಲ್ಲ ,ಲಕ್ಷ್ಮಿಯಿದ್ದಳೋ ಎಂಬ ಅಹಿತ , ಇರಲಿ ನನ್ನೂಹೆಗಳು ,ಧಾವಿಸು ನನ್ನರಮನೆಗೆ ,ಸದ್ಭಾವಗಳ ಪುಷ್ಪವ ಚೆಲ್ಲಿ ,ಹಾಲಿನ ಗಿಂಡಿಯಲ್ಲಿ ಸಕ್ಕರೆ ,ಪಚ್ಹ ಕರ್ಪೂರವ ಬೆರೆಸಿ ,ಧೂಪ ಹಚ್ಹಿ ,ಗಂಧ ಲೇಪವನಿತ್ತು ,ಹೂ ಹಾರದ ತೋಳಿನಲಂಕಾರ ಸಿದ್ದಪಡಿಸಿರುವೆ ಸ್ಪರ್ಶ ಹಿತಕೆ ,ನೀ ಬರುವವರೆಗೂ ಉಸಿರಾಡಲಾರೆ ,ಕೆನ್ನೆ ಮೇಲೊoದು ಹನಿ ,ನೆನೆಯುವಷ್ಟು ಸುಜಲ ಧಾರೆ ಇದ್ದರಾಯಿತು ನೋಡು ,ಸ್ವರ್ಗ ಸಮ ನಿನ್ನ ದರ್ಶನ
ದೋಸೆಯಲ್ಲಿ ನೀನು ಕಂಡಾಗ ಕಾದ ಕಾವಲಿ ಮರೆತು 
ಮೈಮರೆತು ಮನೆಯೆಲ್ಲ ಹೊಗೆಯಾದದ್ದು ನಿಜ ,
ಚಟ್ನಿಯನ್ನು ಬೀರುವಿನಲ್ಲೂ ,ವಸ್ತ್ರವನ್ನು ತಂಪು ಪೆಟ್ಟಿಗೆಯಲ್ಲೂ ಇಟ್ಟದ್ದೂ ಸತ್ಯ 
ಮುಂದಿರದೆಯೂ ಮೈಮರೆಸುವ ನೀನು ,ತಪ್ಪುಗಳಾದಂತೆ ಬಳಸಿ ಇರಬಾರದೇ ಸದಾ ?
ದೇಹ ದೇಗುಲ
ಮೂಲಾಧಾರ ಸ್ವಾದಿಷ್ಟಾನದ ನಡುವೆ ಮೂರೂವರೆ ಸುತ್ತು ಹಾಕಿದ ಸರ್ಪ ಶಕ್ತಿಯೇ, ಕುಂಡಲಿನಿಯೇ ,
ಸಹಸ್ರಾರ ಚಕ್ರದಲ್ಲಿ ಅರಳುವ ಮುನ್ನ ,ಮೂಲಾಧಾರದಿಂದ ಹೊರಟು ಹತ್ತಿ ನರ್ತಿಸು ಮಣಿಪೂರದೊಳಗೆ .
ಅನಾಹತ ,ವಿಶುದ್ದ ,ಅಜ್ಞಾಗಳ ಆವರಿಸಿ ,ಸೂರ್ಯನಾಡಿಯಲಿ ಏರಿ ,ಸಹಸ್ರಾರದ ಸುತ್ತು ಬಂದು ಚಂದ್ರ ನಾಡಿಯಲ್ಲಿಳಿದು 
ಸುಶುಮ್ನಾದಲ್ಲಿ ಮೂರು ದ್ವಾರಗಳ ಹತ್ತಿ ಪ್ರವಹಿಸಿ ನಾಡಿಗಳಿಗೇರಿ ಕುಂಡಲಿನೀ ನೀ ಸಂದ್ಯಾದೇವಿ,ಆದಿಶೇಷಶಕ್ತಿ
ಶಿವನೊಡನೆ ಸಂಯೋಗ ಪಡೆದು ಲೀನವಾಗು ಬ್ರಹ್ಮಾನಂದದಲಿ .
ಉಜ್ಜ್ವಲಿಸು ನೀಲ ಪ್ರಭೆಯಲಿ ,ನೀಲಮಣಿ ಜ್ಞಾನ ಹೊಂದಿ ,ಪ್ರಭಾವಳಿಯಲಿ ಆಧ್ಯಾತ್ಮದ ಬೆಳಕು ಚೆಲ್ಲಿ .
ಈ ದೇಹದೇಗುಲದ ಅಣುಅಣುವಿನಾ ಸರ್ವಶಕ್ತಿಯನೂ ಹರಿಸು ಸ್ವಜ್ಞಾನಕ್ಕೆ, ಲೋಕೋಧ್ಹಾರಕ್ಕೆ ,ಬೆಳಕಿಗೆ ಸದಾ ...........

ಬುಧವಾರ, ಜೂನ್ 19, 2013

ಕಟ್ಟಬಲ್ಲೆ ಬಂಡೆಗಳ ಗೋಡೆ ನನ್ನ ನಿನ್ನ ನಡುವೆ 
ಸಮ್ಮತವಾದರೆ ತರಿದು ಬಿಡು ಅಹಂಕಾರದ ತಲೆಯ ,
ನಿನ್ನೆ ಜೀರ್ಣವಾದ ಅವಶೇಷಗಳ ತಾಳೆ ನೋಡಬೇಡ . 

ಉಳಿಸಿಡದ ಹಿಂಬಾಲಿಸುವ ಕರ್ಮದ ನೆರಳ ಹಾಗೆ ತಿರುಗಿದಾಗೊಮ್ಮೆ 
ನಿoತಾಗಲೋಮ್ಮೆ ಅಣಕಿಸಲೇ ಹುಟ್ಟಿದ ಮನದನುಮಾನದ ಹಾಗೆ
ಒರೆಸಿ ನೀರಲ್ಲಿ ಬರೆದಿಡಬಲ್ಲೆ ,ಗಾಳಿಯಲಿ ಹಾರಬೇಡ .

ಸ್ನೇಹವೋ ತಿಳಿಯೆ ಒಮ್ಮೆಯೂ ನೆನಪಾಗದೇ ಹೋಗಿಬಿಡಬಲ್ಲೆ
ಸತ್ತಾಗಲೂ ನೇರ ಬಿಂದುವಾಗಿ ಉಳಿದು , ಕರಗಿ ,ಆವಿಯಾಗಿ
ಬೆರಳಿಡು ಪ್ರೀತಿ ಆಪೋಶನದಲ್ಲಿ ಸ್ವ್ವೀಕಾರದ ತನಕ .
ನೆನಪಾದಾಗಲ್ಲೆಲ್ಲ ಹೂ ಘಮದ ನಗುವ ಸಿಂಪಡಿಸಿ 
ತೋಳಿನುದ್ದಕ್ಕೂ ಪವಡಿಸಿ ಮುದ್ದುಗೆರೆವ ಬಾಳಗೆಳೆಯ 
ನಿರoತರ ಏಳುಬೀಳುಗಳಲ್ಲಿ ನೋಯುವ ಮನಕೆ 
ನಿನ್ನೊಲವ ಸಿಂಚನವೇ ಹೊಸ ಶಕ್ತಿಯ ಸಂಚಯ
ಉಕ್ಕಿನಂತವನು ಮೆದು ನಗುವಲಿ ಒಲಿಸಿದರೂ ಸಿಂಹದಂತವನು 
ಗಾಂಬೀರ್ಯದಲಿ ರಾಜಹಂಸ ,ಎದೆಗಾಡನಾಳುವನು ಚಕ್ರವರ್ತಿ 
ಕೈ ಹಿಡಿದ ಬಿಗುವಲಿ ಪ್ರೀತಿಯಾಜ್ಞೆ ಹೊರಡಿಸುವವನು ,ಎಲ್ಲಿಯೂ ನಿಲ್ಲದವನು 
ಹೃದಯದಲಿ ಸಾಮ್ರ್ರಾಜ್ಯವಾಳಲು ಮಿಲನ ನಕ್ಷತ್ರಗಳ ಆಗಸದಿ ಜೋಡಿಸಿರುವನು 
ಧಾವಿಸಲು ಬಿರುಗಾಳಿ ,ಸುರಿಯೆ ಜಲಪಾತ ,ಬಿಗಿಯೆ ಬೆಳದಿಂಗಳ ಪ್ರಣಯದವನು 
ಅವನಿರುವ ಅವನಿಯಲಿ ಯಾರಿಗೂ ಸ್ಥಳವಿದಡವನು ಆವರಿಸಿಹನು ಸಾರ್ವಬೌಮ
ನಿನ್ನ ಗರಡಿಯಲ್ಲಿ ಸಿದ್ದವಾದೀ ತೋಳುಗಳಲ್ಲಿ ಅಸಾದ್ಯ ಬಲ 
ಹೊಡೆದಾಟದ ಅಂತಿಮ ಉಸಿರಿಗೆ ಇದೆಯೇ ನಿನ್ನ ಬೆಂಬಲ 
ಪಲ್ಟಿಗಳ ಕಸರತ್ತಲಿ ದೃಷ್ಟಿ ,ದೇಹವೀ ಬಂಡೆಗಲ್ಲಿನ ಕೋಟೆ 
ಹತ್ತಲೇ ಹಿಮಾಲಯವ ತೊಳ್ಗತ್ತಿ ಝಳಪಿಸಿ,ವೀರತ್ವ ಮೆರೆಸಿ
ಮಳೆಗೊಂದು ಆಹ್ವಾನ 
ಶ್ರಾವಣಕೆ ಕಾಯಲಾರೆ ನನ್ನೆದೆ ಹಬ್ಬವಿಂದು ಬಂದು ಬಿಡು ರಂಗೋಲಿಯ ಸಪ್ತ ವರ್ಣದ ಮೇಲೆ ಹೆಜ್ಜೆಯಿರಿಸಿ ,ಪ್ರಿಯ ಹೃದಯವೇ ಆಷಾಡ ,ಅಮಾವಾಸ್ಯೆ ರಾಹುಕಾಲಗಳ ಮೀರಿ ನರ್ತಿಸುವ ಹೂ ಮನಕ್ಕೆ ಏನುತ್ತರಿಸಲಿ ?ನಿನ್ನ ಬರುವಿಗಾಗಿ ಸ್ತಭ್ದವಾದ ಸಂಜೆಗೆಂಪಿನ ಆಕಾಶ ,ರಾತ್ರಿಗೆ ಅಡ್ಡ ನಿಂತು ,ನಿದ್ದೆಗೆ ಹೊಡೆತ ಕೊಟ್ಟು ಕಾಲವಾಗಿದೆ ,ದುಂಬಿ ಕಂಗಳ ಮುತ್ತ ಹನಿ ತುಟಿಗಿಳಿದು ಉಪ್ಪಾಗಿಸುವುದು  ಸಹ್ಯವೇ ? ಅಂದು ಧೂಳಿನ ತೆರೆಯಲಿ ನಿನ್ನ ಕೈ ಬೀಸುವಿಕೆ ನೋಡಿದಾಗ ,ಪುನಹ ಕರೆದರೋ ಎಂಬ ಬ್ರಮೆಗೆ ಮತ್ತೆ ಬಂದಿದ್ದೆ ,ದೇಹವಿರಿಸಿ ಉಸಿರ ಮಾತ್ರ ಹೊತ್ತು ದೇಹಾತೀತ ನೀಲದಲ್ಲಿ ,ಅಲ್ಲಿ ನೀನು ಆಗಸದಲ್ಲಿ ಮೋಡದ ಮರೆಯಲಿ ,ಮಹಾವಿಷ್ಣುವಿನoತೆ ಕಮಲದ ಹಾಸಿಗೆಯಲ್ಲಿ ಪವಡಿಸಿದ್ದನ್ನ ನೋಡಿದೆ ,ಕಾಲಿನತ್ತ ನೋಡಲಿಲ್ಲ ,ಲಕ್ಷ್ಮಿಯಿದ್ದಳೋ ಎಂಬ ಅಹಿತ ,  ಇರಲಿ ನನ್ನೂಹೆಗಳು ,ಧಾವಿಸು ನನ್ನರಮನೆಗೆ ,ಸದ್ಭಾವಗಳ ಪುಷ್ಪವ ಚೆಲ್ಲಿ ,ಹಾಲಿನ ಗಿಂಡಿಯಲ್ಲಿ ಸಕ್ಕರೆ ,ಪಚ್ಹ ಕರ್ಪೂರವ ಬೆರೆಸಿ ,ಧೂಪ ಹಚ್ಹಿ ,ಗಂಧ ಲೇಪವನಿತ್ತು ,ಹೂ ಹಾರದ ತೋಳಿನಲಂಕಾರ ಸಿದ್ದಪಡಿಸಿರುವೆ ಸ್ಪರ್ಶ ಹಿತಕೆ ,ನೀ ಬರುವವರೆಗೂ ಉಸಿರಾಡಲಾರೆ ,ಕೆನ್ನೆ ಮೇಲೊoದು ಹನಿ ,ನೆನೆಯುವಷ್ಟು ಸುಜಲ ಧಾರೆ ಇದ್ದರಾಯಿತು ನೋಡು ,ಸ್ವರ್ಗ ಸಮ ನಿನ್ನ ದರ್ಶನ 


ಶುಕ್ರವಾರ, ಜೂನ್ 14, 2013

ದೂರದಲ್ಲಿ ಕುಳಿತೇಕೆ ನೋಯುವೆ ಗೆಳತಿ ಹೊಕ್ಕಿಬಿಡು ನನ್ನ ಧಮನಿಯೊಳಗೆ 
ಇಳಿಜಾರುಗಳ ಪ್ರಪಾತದ ಅಪಾಯದೆಡೆ ಹೊರಳದಿರು ,ನರಳದಿರು ನಾಳೆ 
ದೃಷ್ಟಿ ಬೆಳಕ ಮಂದವಾಗಿಸಿ ಕುಗ್ಗಿಸಿರುವ ಈ ದೇಹದ ಅಸ್ತಿಪಂಜರದ ಅಣೆ ಇಂದೂ 
ಒಳ ಹೊರಗೂ ಸತ್ಯ ನಾ ನುಡಿದದ್ದೆಲ್ಲ ,ವಿಧಿಯಷ್ಟೇ ನಡೆದದ್ದೆಲ್ಲ ,ಕರಗು ಎದೆಯೊಳಗೆ 

ಗುರುವಾರ, ಜೂನ್ 13, 2013

ಒಂದು ಕಡೆಯ ಮುಖ

ನಿರಂತರವಾಗಿ ದಿನದ ಚಟುವಟಿಕೆಗಳಲ್ಲಿ ತೊಡಗಿ ಬದಲಾವಣೆ ಬೇಕು ಎಂದು ತಿರುಗಾಡಲು ಹೋದಾಗೆಲ್ಲ ,ಮನೆಯೆಡೆಗೆ ತುಡಿವ ಮನಸ್ಸು ,ಈ ಸಹಸ್ರ ಬಣ್ಣಗಳ ಜಗತ್ತು ,ಹಸಿರಿನ ನಲಿವ ಕಾಡು ,ಬಗೆ ಬಗೆ ಸೇವೆಗಳು ರದ್ದಾಗಿ ,ಅದೇ ಮನೆಯಲ್ಲಿ ಓಡಿ ಕೆಲಸಗಳ ಗುಂಗಿನಲ್ಲಿ ಮರೆತ ವಿಷಯಗಳ ಪಟ್ಟಿಮಾಡುತ್ತ ,ಅಡುಗೆ ನಡುವೆ ಸುಳಿವ ಮಗುವ ಮುದ್ದು ಮಾಡುತ್ತಾ ,ಆಗಾಗ ಇಣುಕಿ ಟಿ .ವಿ ಮುಂದೆ ಕುಳಿತು ಮಿಂಚಿನ ಕಣ್ಣ ಪ್ರಶ್ನೆ ಕೇಳುವವರ ಮುಂದೆ ಸುಳಿದಾಡುವ ಹಂಬಲ ,ಮನೆಯಷ್ಟು ಸುಂದರವಾದ ಸ್ಥಳ ಯಾವುದಿದೆ ?ಧಾವಿಸಿ ಬರುವ ಜೀವಗಳಿಗೆ ಕಿರುನಗೆಯಲಿ ಬಿಸಿ ಚಹಾ ಕೊಟ್ಟು ,ಮತ್ತೇನು ತಿಂಡಿ ಬೇಕು ಎಂದು ಸುತ್ತಲೇ ತಿರುಗಾಡುವಾಗ ,ಹಿತದ ಪ್ರಶ್ನೆ ಉತ್ತರಗಳ ಜಲಪಾತ . 

ಎರಡನೇ ಮುಖ 

ಹೆಜ್ಜೆಗಳ ವೇಗ ಪಡಿಸಿ ಕಣ್ಣೀರ ಸುರಿಸುವ ಜೀವಗಳೆಡೆ ದಿನದ ತುಡಿತ ,ಒಂದು ಸಮಾದಾನದ ಮಾತಿಗೆ ಕಾದಿರುವ ಕಾಲು ಕಳೆದು ಕೊಂಡಿರುವ
ಹಲವು ಬೇಗುದಿಯ ಹೃದಯಗಳು ,ನೋವಿನಿಂದ ಕಂಗೆಟ್ಟ ಕಣ್ಣುಗಳು, ಊಟವಿರದೆ ಬಡಕಲಾಗಿ ಹಣದ ಮುಗ್ಗಟ್ಟಿನಿoದ ತತ್ತರಿಸಿ ,ನನ್ನ ಹಿರಿಯ ವೈದ್ಯರ ಬಡವರ ಧನದ ಭರವಸೆ ಸಿಗುವವರೆಗೆ ನಡುಗಿ ಜೀವಭಯದಿಂದ ನನ್ನ ಕೈ ಹಿಡಿದು ಸಾಂತ್ವನಕ್ಕೆ ಕಾದವರು , ಇವರನ್ನೆಲ್ಲ ಬಿಟ್ಟು ಅಗತ್ಯ ಇರುವಲ್ಲಿ ಸಲ್ಲದೇ ಹೇಗಿರಲಿ ,ಒಂದು ಪದದ ಆಸರೆ ಸಿಕ್ಕ ಕೂಡಲೇ ಕಂಬನಿಯಲ್ಲಿ ಕಿರುನಗು ತಂದು ,ಏನೂ ಆಗಲಾರದು ತಾನೇ ದೇವರಿದ್ದಾನೆ ಅನ್ನುವವರ ಬೆನ್ನ ಮೇಲೆ ಕೈಯಿರಿಸಿ ಸೇವೆಗೆ ಹೊಸ ಮುಖ ತೆರೆದು ,ಚೂಪು ಉಪಕರಣಗಳ ರಕ್ತದ ರಾಶಿಯಲ್ಲಿ ಮುಳುಗಿ ,ಮತ್ತದೇ ಜೀವನ ಎಂದು ಬೇಸರಗೊಳ್ಳದೇ ,ಇನ್ನೊoದು ಕೆನ್ನೆಯ ಹನಿಯನೊರೆಸಿ ,ಅಭಯದ ,ಭದ್ರತೆಯ ನಾಳೆಯ ಶುಭಾರೋಗ್ಯ ಕೋರುವ ಭಾಗ್ಯ .

ಈ ಬದುಕಿನ ಎರಡೂ ಮುಖಗಳು ಸಹ್ಯ ,ಸುಂದರ -ಇದರಾಚೆಗೂ ತುಡಿತ ,ಮಗಳಾಗಬೇಕು ಸೊಸೆಯಾಗಬೇಕು ,ಅತ್ತಿಗೆಯಾಗಬೇಕು ,ಸ್ನೇಹಿತೆಯಾಗಬೇಕು ,ಸಹೃದಯ ನೆರೆಯವಳಾಗಬೇಕು ,ಮೊರೆವ ದೂರವಾಣಿಗಳಿಗೆ ಸಹನೆಯ ಉತ್ತರವಾಗಬೇಕು .
ಬರಹದ ಅಸೆ ,ಓದುವ ಅಸೆ ,ಹಾಡಿನ ಅಸೆ,ಕಟ್ಟುವ ಕೋಟಿ ಕನಸುಗಳಿಗೆ ಜಗ ಮಾಡಿ ನಿಜವಾಗಿಸುವ ಹಂಬಲ . ಇದಕ್ಕೆಲ್ಲ ಶಕ್ತಿ ಸಮಯ ತುಂಬುವ
ಆತ್ಮವಲೋಕನ .
ಇದು ಸರಿಯೇ, ನಾನು ಇನ್ನೂ ಶಕ್ತಿವಂತಳಾಗಬಾರದಿತ್ತೇ , ಇನ್ನಷ್ಟು ಕೊಡಲು ..... ಮತ್ತಷ್ಟು ಪಡೆಯಲು

ಮಂಗಳವಾರ, ಜೂನ್ 11, 2013

ಬದುಕು ಹೀಗೇ ಇರಬೇಕೆಂದರೆ ನಿನ್ನೊಳಗೆ ಬರೆದುಬಿಡು ಸ್ತಂಭನ 
 ಕ್ಷಣ ಕ್ಷಣದ ಹಿಂಸೆಯಲಿ ಜೀವನವೇಕೆ ತತ್ತರಿಸುವ ಕಂಪನ 
ತಡೆಗಳಿಲ್ಲದ ಇಂದಿಗೆ ನಾಳೆ ಗರ್ಜಿಸುವ ತಂತ್ರದ ಮಾಂತ್ರಿಕ ದಂಡ 
ಬಿಸುಟು ಬಾ ತೆರೆದ ಬಯಲಿಗೆ ಮಾತಾಗಲಿ ಮುಖಾಮುಖಿ 

ಸೋಮವಾರ, ಜೂನ್ 10, 2013

ಎದೆ ಬಡಿತ ತಪ್ಪಿದಾಗಲೊಮ್ಮೆ ತಳಮಳ 
ನೀನೆಲ್ಲಿ ಹೋದೆ ಉಸಿರೇ ,
ನರನರದ ಸಶಬ್ದ ರಕ್ತ ಹರಿವ ಮೂಲವೇ 
ನೀನಾಗಿರುವಾಗ ನಿಶ್ಯಬ್ದ ಬೇಡ ಪ್ರಾಣವೇ ,

ಸ್ಪರ್ಶದ ಹೂ ಮೆಲ್ಲೊತ್ತಿಗೆ ಅಂದಿನಿಂದ ಹೊಸದೇ 
ರೋಮಾಂಚನದ ನವಿರಿನ್ನೂ ಕೆನ್ನೆಯಲ್ಲಿ 
ಮೌನದ ನಡುವೆ ಪ್ರೀತಿ ಮಹಾಪೂರ 
ಸತತ ಬೋರ್ಗೆರೆ ದೂರಗಳ ದಾಟಿ ಒಲವೇ 
ಎದೆ ಬಡಿತ ತಪ್ಪಿದಾಗಲೊಮ್ಮೆ ತಳಮಳ 
ನೀನೆಲ್ಲಿ ಹೋದೆ ಉಸಿರೇ ,
ನರನರದ ಸಶಬ್ದ ರಕ್ತ ಹರಿವ ಮೂಲವೇ 
ನೀನಾಗಿರುವಾಗ ನಿಶ್ಯಬ್ದ ಬೇಡ ಪ್ರಾಣವೇ ,

ಸ್ಪರ್ಶದ ಹೂ ಮೆಲ್ಲೊತ್ತಿಗೆ ಅಂದಿನಿಂದ ಹೊಸದೇ 
ರೋಮಾಂಚನದ ನವಿರಿನ್ನೂ ಕೆನ್ನೆಯಲ್ಲಿ 
ಮೌನದ ನಡುವೆ ಪ್ರೀತಿ ಮಹಾಪೂರ 
ಸತತ ಬೋರ್ಗೆರೆ ದೂರಗಳ ದಾಟಿ ಒಲವೇ 
http://www.google.com/intl/kn/inputtools/cloud/try

ಭಾನುವಾರ, ಜೂನ್ 9, 2013

ಮನದಲ್ಲಿ ಮಾಯಾಚಿತ್ರ, ಬ್ರಮೆಯೋ ಚಿತ್ತ ವಿಕಲ್ಪವೋ ಅರಿಯಲಾರೆ 
ಸಂತಸದಾಳದಲ್ಲೂ ಎಂದೋ ಪುಟಿದಿದ್ದ ಗಟ್ಟಿ ನೋವುಗಳ ಸಚಿತ್ರ ಮಾಲೆ 
ಸುಖದ ಕಂಬನಿ ನಡುವೆ ನಾನಿದ್ದೇನೆ ಎನ್ನುವ ಮೆದುಳೆಲೆಯ ಕಹಿ ಹಾಗಲೂಟ 
ಬೆರಳಿಡದೇ ಛಾಪು ಬಿಡದೇ ಸರಿಯದೀ ನೆರಳು ಜನ್ಮಸರಿಯದೇ ಮುಂದಿನ ಮನೆಗೆ
ಹೆಣ್ಣು ನೋಡಲು ಹೋದವನು 
ಒಪ್ಪಿದ ಮೇಲೆ ,
ಹೊಸಿಲೆಡವಿ ರಕ್ತ ಸುರಿದಾಗ 
ಹತ್ತಿ ತರಲು ನಾಚಿದವಳ 
ಮತ್ತೊಮ್ಮೆ ನೋಡಿಲ್ಲ
ತಿರುಪತಿ 
ಅಂದು ಕರೆದೆ ಗೋವಿoದ 
ಬಂದು ನೆಲಸಿದೆ ನಮ್ಮನೆಯೊಳಗೆ 
ನಿನ್ನ ಕರುಣೆಯಿoದ ಬದುಕು ಸಾಗಿದೆ 
ಮತ್ತೊಮ್ಮೆ ದರುಶನ ಕೊಡು ತಂದೆ 
ಹೊರಟೆ ಏಳು ಮಲೆಗೆ .
ನಿನ್ನೆದೆಯಲ್ಲಿರುವ ಲಕ್ಷ್ಮಿ ಕಟಾಕ್ಷವ
ದೇವರೆದುರು ಸಲ್ಲಿಸಿ ಅರೋಗ್ಯ ಭಾಗ್ಯ ಬೇಡಿ
ನಿನ್ನೊಳು ನನ್ನ ಕರುಣಾಭಾವಗಳ
ಅರ್ಪಿಸಿದೆ ಬಾಲಾಜಿ ,ಈ ಕೈಗಳಲಿ
ಸೇವೆ ,ದಾನ ,ಅನ್ನಪೂರ್ಣ ಫಲ
ಕರುಣಿಸಿ -ನೆನ್ನೆಡೆ ಕ್ಷಣ ಒಂದುಸಲ ನೋಡು
ಈ ವರವ ಪ್ರತಿಫಲಿಸುವೆ .

ಗೋವಿಂದಾ .........
ನಾನೆoತು ವಿರಮಿಸಲಿ ನಿನ್ನ ನೋವುಗಳಲ್ಲಿ 
ಸರಿಸಿದಷ್ಟೂ ಚುಚ್ಚುವ ನಿನ್ನ ಕಂಬನಿಯಲ್ಲಿ 
ನೆನಪುಗಳ ಹಚ್ಚೆ ಜನ್ಮಕೂ ಇಳಿದು ಬಸವಳಿಸುವಂತೆ 
ನಿತ್ಯಸಾವಿನಲ್ಲೂ ಎದೆಗೆಡದೆ ಹೊಸನಗೆ ತರಲಿ ?

ಉಪ್ಪಿರದ ಕಣ್ಣೀರ ಭುಜದ ಬೆಲ್ಲದಚ್ಚಿಗೆ ಒರೆಸಿ
ನೀ ಉಸಿರಾಡುವ ಕರ್ಪೂರದ ಘಮದ ಹಿತವ
ಮೆಲ್ಲನೆ ಅಪ್ಪಿ ನಾನೇಕೆ ಸುಮ್ಮನಿರಲಿ ಎದೆ ಕುಸುಮದಲ್ಲಿ
ಕರಗಿ ,ಉಳಿದ ನೋವ್ಗಳ ಸರಿಸಿ ,ತುಂಬು ಅರ್ಪಣೆಯ ಹೂ ತೋಳಿನಲ್ಲಿ
ಸಮುದ್ರ ನಡೆದಷ್ಟೂ ಮುಗಿಯದು ಗೆಳತೀ ಅವನಾಳ ವಿಭಿನ್ನ 
ಕೆರೆ ಕೋಡಿ ಮಳೆ ತುಂಬಿ ದಿನವೊoದು ಅಬ್ಬರಿಸಿದರೆ ನಂಬದಿರು 
ಮುಗಿಲ್ಲೆತ್ತರದ ಅಲೆಗಳಲ್ಲಿ ಆಲಾಪಿಸಿದ್ದನ್ನ ಏಳು ಸಮುದ್ರಮೊರೆದಂತೆ 
ಆವರಿಸಿ ವಿಸ್ತಾರಗೊಂಡಿದ್ದನ್ನ ಕಣ್ಣ ಕಾಮನಬಿಲ್ಲಿನಲ್ಲಿ ಸೆರೆಗೊಳಿಸಿದ್ದೇನೆ
ನಿದ್ರೆಗಳ ರಂಗಾಗಿಸುವ ಕನಸು ನಿನ್ನ ತುಟಿಯಷ್ಟೇ ಮೃದು ಗೆಳೆಯ 
ಬಣ್ಣನಾತೀತ ,ವರ್ಣಮಯ ,ಚಿತ್ತಾರಗಳ ವಿಸ್ಮಯ ಲೋಕದ ಸನಿಹ 
ಸಾನಿಧ್ಯವ ಬಯಸಿ ಚಡಪದಡಿಸುವಂತೆಯೇ ,ಊಹೆಗಳಲೂ ತನ್ಮಯ 
ಕನಸುಗಳ ಆಸೆಗೆ ನಿದ್ರೆಯೇ ಬೇಕೆಂದಿಲ್ಲ ಗೆಳೆಯಾ -ನೀನಿದ್ದಲ್ಲಿ ಧಾವಿಸಿ 
ರೆಪ್ಪೆಗಳಡಿ ಕನಸ ತುಂಬಿ ,ನಿನ್ನ ತುಟಿಯಂಚಿನ ನಗೆ ಹೀರಿ ,ಮತ್ತಷ್ಟು 
ಹೊಸ ಪ್ರಪಂಚವ ತೆರೆಮರೆಯಲ್ಲಿ ಸೃಷ್ಟಿಸಬಲ್ಲೆ ,ನಿದ್ರಿಸಲೇ ಕಟ್ಟಿ ಬಣ್ಣದ ಮನೆಯ
ಹೋರಾಡು ಉಸಿರಾಡುವ ತನಕ ನಿನ್ನಾದರ್ಶಗಳ ಗಟ್ಟಿ ಮೇಳವ ಮೊರೆದು 
ದಿಟ್ಟ ಪದಗಳ ಚೂಪು ಮೊನೆ ತಾಗಿ ರಕ್ತಪಾತವಾದರು ಸರಿಯೇ 
ಹಿಂದಡಿಯಿಡದೆ ಗರ್ಜಿಸು ನಿನ್ನ ಹಕ್ಕುಗಳಿಗಾಗಿ ,ತಿಳಿಸು ಮುಗ್ಧಜನರಿಗೆ 
ಯಾವ ಹಕ್ಕಿನ ಉಕ್ಕಿನ ಮನುಷ್ಯರವರೆಂದು ,ಮುನ್ನುಗ್ಗು ಚಾವಟಿ ಧರಿಸಿ 
ಪೆಟ್ಟು ಕಾರ್ಯನಿಮಿತ್ತವಾಗಿರಲಿ ,ಛಲ ತುಂಬು ಎದೆಗಳಲಿ ವೀರರಾಗಲಿ ಅವರೂ 
ನಿನ್ನ ಮೀರಿಸುವಂತೆ -ನೀ ಅಮರವಾದಾಗ
ಬೃಂದಾವನದಲ್ಲಿದ್ದ ಕೃಷ್ಣ ಕಂಗಳಲ್ಲಿ ಚಂಚಲತೆ ಸೂಸಿ 
ರಾಧೆ ಅತ್ತಿತ್ತ ಸರಿದಾಗ ಗೋಪಿಕೆಯರ ನಡುವೆ ಗೌಜಿಯಲ್ಲಿದ್ದಾನೆ 
ನರ್ತಿಸಿರೊಮ್ಮೆ ಓಡಿ ಬರಲಿ ಮುದ್ದು ಯಶೋದಾ ಕುವರ 
ರಾಧೆಯೊಲವಲಿ, ಸುರಿವ ಸುಗಂಧಗಳಲಿ ,ಪವಡಿಸಲವನು ಬೃoದಾವನದಲಿ
ಒಂದು ಹೊತ್ತು ಹಸಿದಿಲ್ಲದವರು ಹಸಿವಿನ ಬಗ್ಗೆ ಬಾಷಣ ಮಾಡುವಾಗ 
ನನ್ನೊಳಗಿನ ಅಗ್ನಿ ಸುಡು ಹೊಗೆಯಾಗಿ ಕುಳಿತಲ್ಲಿ ಹೋಮ 
ತಿನ್ನುವನ್ನವನೆ ಎರಡು ಪಾಲಾಗಿಸದವರ ದಟ್ಟ ದರಿದ್ರ ಮನಸಿಗೆ 
ಏಕೀ ದನ ಧರ್ಮದ ಶೋಕಿಯ ಕರ್ಮ
ನೀ ನನ್ನೆದುರಿಸಿ ಹೃದಯ ಹಿಂದೆ ನಿಂತದ್ದು ನನಗಿಷ್ಟವಿಲ್ಲ 
ಕಣ್ಣೀರು ನಿಟ್ಟುಸಿರು ಚಿತ್ರಗಳ ಕ್ಷಮೆಯುತ್ತರ ನನ್ನದಲ್ಲ 
ನೆಲೆ ನಿಂತ ನೀರಲ್ಲಿ ,ಹಾರಿಬಿಡು ನಿನ್ನೆತ್ತರವಲ್ಲದ ಎತ್ತರ 
ಹಿಮದ ಚೂಪಿಗೆ ಪ್ರೀತಿಯ ಬಿಸಿಯೊಂದೇ ಉತ್ತರವೆಂದು ಗೊತ್ತಿರಬೇಕಿತ್ತು ,
ಪಾದಶಾಖದಲಿ ಕರಗುತ್ತಿತ್ತಲ್ಲ ನಿನ್ನುಧ್ಭವ ಊಹಾ ಪೋಹಗಳು 
ಬರುವೆಯಾ ಹೇಳು ನನ್ನೊಳಗೆ ನಿನ್ನೆ ಬಿಗುವ ಬಿಟ್ಟು 
ಮತ್ತೆ ಹಾಗಿರುತ್ತೆನೆಂಬ ನೀ ನನ್ನೆದುರಿಸುವ ಹಟವ ಇಟ್ಟು
ಹಲಸಿನ ದೋಸೆಯ ಘಮದಲ್ಲಿ ಅರಳಿದ ಹೃದಯ ಮೆತ್ತಗಾದದ್ದು 
ಮಕ್ಕಳು ಇದು ಬೇಡ ಎಂದಾಗಲೇ , ಬೇಳೆ ಖಾರದ ದೋಸೆಗೆ ಓಡಿ ಬಂದ 
ಕೈ ಕೈ ಗೆ ಸಿಗುವ ಚಿನಕುರುಳಿಗಳು ಮನಸಲ್ಲಿ ತುಪ್ಪದ ಸುವಾಸನೆಯೆಬ್ಬಿಸಿ 
ಮುದ್ದಿಸಿ, ನಾಳೆ ಮಾಡುವ ವಿಶೇಷದ ತಿನಿಸಿಗೆ ಹೂ೦ ಎನ್ನಿಸುವ ತವಕ
ನಿನ್ನೊಲವಲ್ಲಿ ಕೊಚ್ಚಿಹೋದಾಗಲ್ಲಲ್ಲ ಒಂದೇ ಪ್ರಶ್ನೆ 
ನನ್ನದೆಯಲ್ಲೂ ಉಕ್ಕುವ ಸಮುದ್ರ ನಿನ್ನಷ್ಟೇ ಸಿಹಿಯೇ 
ಬೋರ್ಗೆರೆವ ಭಾವದ ಬಿಸಿ ,ಹಿಮಪಾತದ ನಿಶ್ಯಬ್ದಗಳು 
ಗುಡುಗು ಸಿಡಿಲು ಪ್ರವಾಹಗಳು ನಿನ್ನ ನಿರಂತರಕ್ಕೆ ಸಮವೇ 

ತುಟಿಯಂಚಿನ ಮುಗಿಲ ನಗೆ ,ಗಲ್ಲದ ಹೂಮಿಂಚು
ತವಕಿಸುವೆದೆ ಧಾವಿಸುವ ವೇಗ ,ಪಟ್ಟಾoಗ ಗಳು
ನನ್ನ ನಿಧಾನದ ಪ್ರೀತಿ ಮುತ್ತಿನ ಮೆಲ್ಲನೊತ್ತಿಗೆ
ಸ್ವರ್ಗ ಭಾರದ ಭೂಮಿ ತೂಕದ ಬಾನೆತ್ತರದ ಸಮವೇ
ಮನದ ಮಾಯಾ ನಗರದಲ್ಲಿ ಎಲ್ಲಡಗಿದ್ದೆ ಕೊರಗೇ 
ಇಲ್ಲವೆನುವ ಇಣಕು ಅಣಕ ಹುಟ್ಟಿಸಿ ಪ್ರಜ್ವಲಿಸುವೆ 
ಹುಟ್ಟಿರದ ಬ್ರಮೆಗಳಡಿ ತುಳಿದ ಕನಸುಗಳೆಷ್ಟೂ 
ಇದ್ದಿದ್ದರೆ ಏನಾಗುತಿತ್ತೋ ಉಹಾ ನೋವ ತ್ರಿಶಂಕು ಸೃಷ್ಟಿಸಿ
ನಿರ್ದಯೀ ಬೆರಗಾಗದಿರು ಕಂಬನಿಯ ಹನಿಗೆ 
ನಿನ್ನ ಸತತ ಮೌನದ ಪೆಟ್ಟ ಭರಿಸಬಹುದೇನು 
ದುಃಖ ಸಮುದ್ರದಾಚೆ ತರುವ ನಿನ್ನ ವಾಣಿ 
ಪರಿಧಿಯಾಚೆಗೆ ಸರಿದು ಏಕೆ ಮೌನಿ
ನಿಟ್ಟುಸಿರಿಲ್ಲ ವೆಂದು ವ್ಯಂಗ್ಯದ ನಗೆ ಬೇಡ ಗೆಳೆಯ 
ನನ್ನ ನೋವ ತೆರೆದರೆ ನಿನ್ನ ಕಣ್ಣಲ್ಲಿ ರಕ್ತವಿರಲಿಕ್ಕಿಲ್ಲ 
ಮುಳ್ಳ ಹಾದಿಯ ರಕ್ತದ ಜಿನುಗ ನೀ ಮೆಟ್ಟಿಲ್ಲ ,ಹಾ ನಾ ಬಿಟ್ಟಿಲ್ಲ 
ದುಃಖ ಕೊರಗುಗಳ ರಾಶಿ ಬಿಡು -ನನ್ನ ಪ್ರೀತಿಯ ಕಾವ್ಯದಲಿ ಕರಗು
ನಾನು ನಿನ್ನೊಳಗೆ ಧಾವಿಸುವಾಗಉಕ್ಕಿದ ಪ್ರೀತಿ ಮಹಾಪೂರದಲ್ಲಿ 
ಕೊಚ್ಚಿ ಇಲ್ಲಿ ಬಿದ್ದಿದ್ದೇನೆ ನೋಡು ನಿನ್ನ ನಾಡಿ ಬಡಿತದಲ್ಲಿ 
ತುಸು ಹೊರಳುವಿಕೆಯೂ ಸಹಿಸದ ನಿನ್ನ ಹಿಡಿತದ ಹಿತ ಬಿಗಿತ 
ಉಸಿರಾಡಲ್ಲೊಲ್ಲೆ ಸ್ಮೃತಿ ತಪ್ಪುವ ನಿರಂತರ ಪ್ರೇಮಧಾರೆಯಲ್ಲಿ
ನೀನನ್ನರಸುತಿರುವೆ ಎಂದು ದೇಹವನ್ನಲ್ಲೇ ಬಿಟ್ಟು ನಿನ್ನೊಳಗೆ ಇಳಿದಿದ್ದೇನೆ 
ಕೊಡುವುದೇನಿದೆಯೋ ಕೊಟ್ಟುಬಿಡು ಧಾವಿಸುವೆ ನೀನಿರದ ಆ ನನ್ನತ್ತ ,
ಮತ್ತೆ ತುಟಿಗೆ ಜೇನ ತುಂಬಿ ನಿನ್ನ ಹೆಸರ ಉಸಿರಾಡಿ ಬಿಸಿಯ ಜೀವ ನಿರ್ಮಿಸಲಿದೆ 
ಮತ್ತಷ್ಟು ಮತ್ತು ಹತ್ತುವಷ್ಟು ಪ್ರೀತಿ ತುಂಬಿ ,ನೀ ಬಯಸುವಂತಹ ನನ್ನ ಸುಪ್ರಭೆಯನ್ನ
ಉಸಿರೇ ಉಸಿರಾಗಿರು 

ಕಾಲಗರ್ಭದಲ್ಲಿ ನೀನು ಕಳೆದು ಹೋಗಿಲ್ಲ ನೆನಪೇ 
ನೀಲ ನಭದಲಿ ಎಂದೋ ಕಾಣಿಸುವ ಗೆರೆಯಂತೆ 
ನನ್ನಾಳದಲಿ ಹೂತು ಹೋಗಿದ್ದಿ 

ಸರ್ವಾಂಗ ವ್ಯಾಪಿಸಿ ನೀನಿಲ್ಲದಿರೆ ನಾನಿಲ್ಲ ಎನ್ನುತ್ತಾ
ಅಂತರಂಗದ ಸುಪ್ತ ಕದ ತೆರೆದು ಇದ್ದೇನೆ ಎಂದು ಬಡಿದು
ನೋವಾಗಿಸಿ ಸತತ ನರಳಿಸಿದ್ದಿ

ನಿನಗರಿವಿರದೆ ನನ್ನೊಲವಲ್ಲಿ ಪ್ರಭೆಯಾಗಿ ಹಿತವಾಗಿದ್ದಿ
ನರಗಳ ಕದಲುವಿಕೆಯಲ್ಲು ಹಿತದ ಮಿಂಚನ್ನು ಹರಿಸಿ
ಉಸಿರಾಡದಂತೆ ಕ್ಷಣ ಕ್ಷಣ ಮುದ್ದಿಸಿದ್ದಿ

ಬಾರದಿರು ಎಂದೆಂದೂ ಹೇಳದಂತೆ ಬಯಕೆ ಹುಟ್ಟಿಸುವ
ಕಾಳ್ಗಿಚ್ಹಾಗಿದ್ದಿ ತೆರೆಯ ಅಂತಪುರದಲ್ಲಿ ,ನನ್ನ ಪ್ರಾಣದಲ್ಲಿ
ನೆನಪಾಗದೇ ನಿಜವಾಗುವ ಅಸೆಯಾಗಿದ್ದಿ
ಕರುಳುಗಳ ಅರಿಸಬೇಡ ಅನ್ನವಿದು ಅನ್ನಪೂರ್ಣ
ಉರಿಯ ಬೇಗೆಗೆ ಶಾಸ್ತ್ರಗಳ ಪರಿವಿಲ್ಲ, ಕಂಗಳಲ್ಲಿ ನೀರಿಗೂ 
ಹಸಿವ ಕುರುಡಿನಲ್ಲಿ ಕಾಣದು ಜನಿವಾರ ,ನೆಲವೋ ತಟ್ಟೆಯೋ 
ಕುದಿವಕ್ಕಿ ಹಾಗೇ ಈ ಎದೆ, ಬಡಿಸು ಸತತ ನೆನೆದು ಹೊಟ್ಟೆ ತಂಪನ್ನ
ನೋವಿಗೆ ಕಾಲವೇ ಮದ್ದು ಗೆಳೆಯಾ 
ಜೀವನದ ವಾಸ್ತವದ ನೋವು ಜವಾಬ್ಧಾರಿ 
ಒಂಟಿತನದ ಹೆದರಿಕೆ,ಬೆದರಿಕೆಗಳಿಗೆ 
ಹೃದಯದಾಸರೆಯ ಮುಲಾಮು ಸಹ್ಯ ತಾನೇ 

ಬೇಸರಿಸದಿರು 
ಇದೊಂದು ಕರುಣಾ ಭಾವ