ಭಾನುವಾರ, ಜೂನ್ 23, 2013

ಹೆದರುವೆನು ನೆನಪುಗಳ ತೆರೆಯಲು 
ಮುಚ್ಚಿಟ್ಟ ಕಷ್ಟಗಳ ರಾಶಿ ರಾಶಿ 
ತೆಳು ಹೊದಿಕೆ ಹೊದಿಸಿರುವೆ 
ಅಳಿಸಿ ನಗು ರಂಗೋಲಿಯ ಬರೆವೆ . 
………………………………………………..
ಬೇಡದ ಮಾತುಗಳ ನಡುವೆ ಸಿಕ್ಕಿಕೊಂಡ ಮನಸ್ಸು
ಬಿಡಿಸಿಕೊಳ್ಳಲಾಗದೇ ಕೊರಗಿದ್ದು ನೂರು ಬಾರಿ ,
ಮೌನದ ಸಂಕೋಚದಲ್ಲಿ ಪ್ರೀತಿಯನ್ನ ಮಾತಾಗಿಸದೇ
ದೂರ ನಡೆವಾಗ ಆತಂಕ ಹಲವು ಪರಿ .
………………………………………………..

ಬರುವಿರಾ ಒಮ್ಮೆ ಉತ್ತರಖಂಡಕ್ಕೆ
ಉಸಿರು ಕೊನೆಯಾಗಿದೆ ಎಂದು ಬಿಟ್ಟು ಹೋದಿರೇಕೆ ಸೈನಿಕರೇ ,
ಹಿಂತಿರುಗಿ ನೋಡಿ ಅಲುಗಾಡದಿದ್ದರೂ ,ಉಸಿರಾಡುತ್ತಿದ್ದೇನೆ
ನೋವೂ ತಿಳಿಯದ ತ್ರಿಶಂಕುವಿನಲ್ಲಿ ಸಿಕ್ಕಿಕೊಂಡ ನನ್ನ ಪ್ರಾಣ
ನನ್ನವರ ಮಡಿಲಲ್ಲಿ ಕೊನೆಯಾಗಲಿ ಎಂದು ಹಂಬಲಿಸುತ್ತಿದೇನೆ .
……………………………………………………………………………….
ರುಚಿ ರುಚಿ ಅಡಿಗೆ ಮಾಡಿ ಹೆಮ್ಮೆಯಿಂದ ಬಡಿಸಲು
ಹೊರಟಾಗ ,ಕೆ ಎಫ್ ಸಿ ಗೆ ಓಡಿದವರು ತಿಂದದ್ದೇ ಬೇರೆ
ಉದ್ದಿನ ಬೋoಡ ಬಿಟ್ಟರೆ ,ಮತ್ತೊಂದನ್ನ ಮುಟ್ಟದವರು
ರಾತ್ರಿಗೆ ಈ ಚಪಾತಿ ,ತರಕಾರಿಗಳ ತಿನ್ನುವವರೇ ?
…………………………………………………
ಗೆಳೆಯ ಈ ತುಟಿಗಲ್ಲಕ್ಕೆ ಹೆಸರಿಡಲಾಸೆ ಏನೆoದಿಡಲಿ ?
ನೀ ಸ್ಪರ್ಶಿಸಿದ ವಸ್ತ್ರ ಒಗೆಯದೇ ವರುಷಗಳಾದರೂ
ಕೈ ಮೆದುವಿಗೆ ಮೃದು ಮಾತಾಡಿಲ್ಲ ,ಏನೆನ್ನಲಿ ?
ಮೌನದಾಚೆಯ ವಿಹಾರವ ಅಕ್ಷರವಾಗಿಸಲೇ ?
……………………………………………………………………………………
ಗೆಳತಿ ಉಪ್ಪಿಲ್ಲದೇ ಹೊರಟಿದ್ದೆ ನಿನ್ನ ಭಾಷೆ ಕೊಟ್ಟ ಮಾತಿನೂರಿಗೆ
ಸುಳ್ಳುಗಳ ಸಕ್ಕರೆಯಲಿ ಅದ್ದಿಬಿಡು ನನ್ನ ಮಾತು
ಪ್ರೀತಿ ಮಾತ್ರ ನಿಜ ,ಆತ್ಮಗೆಳೆಯನ ಸಾಕ್ಷಿ ,ಅವನ ಜೀವನದಿ ಹೊಕ್ಕು
ನನ್ನ ಚಿತ್ರ ಎಂದೂ ಅಳಿಸದಂತೆ ಕೋರಿಬಿಡು ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ