ಬುಧವಾರ, ಜನವರಿ 3, 2018

ರೇಕಿ ಬೆಳಕಿನ ಮಧುರ ಪ್ರಭೆ ಆವರಿಸಿದಾಗ
ಧ್ಯಾನವೇ ಧ್ಯಾನ ಮನಸ್ಸು ತಪೋವನವಾದಾಗ 
ಆ ಕಣ್ಣುಗಳೇಕೋ ನನ್ನೊಡನೆ ಮಾತಾಡುತ್ತಿಲ್ಲ
ಎಷ್ಟೋ ಸಂದೇಶಗಳ ಉತ್ತರ ಕಾದು ಸೋತೆ
ನಮ್ಮಿಬ್ಬರ ನಡುವೆ  ಅಷ್ಟು ಮಧುರ ಸಂಭಾಷಣೆಯಿದ್ದರೂ
ನನಗೊಮ್ಮೆ ಕಣ್ಣ ಬಾಷೆ ಬೇಕು ,ಹತ್ತಿರ ಮತ್ತು ಇಲ್ಲಿ ...

ಆ ಹೃದಯವೇಕೋ ನನ್ನ ನೋಡಲು ಆರ್ದ್ರವಾಗಿಲ್ಲ
ಅಪ್ಪುಗೆಯ ಗಾಢತೆಗೆ ನೊಂದು ಪರಿತಪಿಸಲಿಲ್ಲ
ಅಂಗೈಯ ಬಿಸಿಗೆ ಧಾವಿಸಿ ಮುತ್ತಿಡಲಿಲ್ಲ
ನೋಡುವಾಸೆಗೆ ನೊಂದು ಕಣ್ಣು ಹನಿಯಲಿಲ್ಲ

ಆ ಮನಿಸ್ಸಿಗೇಕೋ ನಮ್ಮ ನಡುವಿನ ಪರದೆ ಸರಿಸುವಾಸೆಯಿಲ್ಲ
ಕಂಪಿಸುವ ಹೆಣ್ಣಿನ ಮನಸ್ಸಿನ ಮಾಧುರ್ಯ ಸವಿಯುವಾಸೆಯಿಲ್ಲ
ಎದೆಗೊಮ್ಮೆ ಅಪ್ಪಿ ಹೂವಾಗಿಸಿಕೊಳ್ಳುವ ತವಕವಿಲ್ಲ
ಜೀವ ಜೀವವಾಗಿರುವಾಗ ತನ್ನದಾಗಿಸಿಕೊಳ್ಳುವ ಮಿಡಿತವಿಲ್ಲ

ಆ ಹೃದಯವೇಕೋ ನನ್ನ ಬಡಿತವ ಕದ್ದು ಆಲಿಸುವುದಲ್ಲ
ಮಾತು ಮಾತಿಗೂ ನನ್ನೊಂದಿಗೇ ಇರುವ ಮಾತಿದೆಯಲ್ಲ
ಸದ್ದಿರದೇ ಆಗಾಗ ಕಣ್ಮುಚ್ಚಿ ಎದೆಗೊರಗಿಸಿ ಕೊಳ್ಳುವುದಿದೆಯಲ್ಲ
ಏಕೋ ಈ ಪರಿಯ ಪ್ರೀತಿ ಅರ್ಥವಾಗುತ್ತಿಲ್ಲ ..

ನನಗೇಕೋ ಕಣ್ಣ ಕಾತರ, ಮನಸಿನ ಭಾವ ,
ಸ್ಪರ್ಶವಾಗುವ ಆಸೆಯಷ್ಟೇ ಹೆಚ್ಚಿದೆಯಲ್ಲಾ  ?
ಸರಸದ ಮಯಕವಲ್ಲ ಇದು ದರ್ಶನದ ಮಧುರಾತೀತತೆಯ ಕೊರಗೋ
ಅಪ್ಪುಗೆಯೇ ಬೇಕೆಂಬ ಹಠವೋ ,ಅರ್ಥವಾಗದ ಮಾತಿದೆಲ್ಲಾ ...