ಶುಕ್ರವಾರ, ಸೆಪ್ಟೆಂಬರ್ 16, 2016

ಮುಡಿ ಭಾರವಾಗುತಿದೆ
ನಿನ್ನ ಹೊತ್ತೊಯ್ಯಲಾರೆ
ಫ್ರಭೂ ನೀಲಮಣಿ
ಹೆಡೆಯಿಳಿದು ಬಂದೇ
ಸುತ್ತಿಕೋ
ನೆತ್ತಿಗೇ ಗುರಿಯಿಡುವ ಗೋಜಿಲ್ಲ
ಒಮ್ಮೆ ಇಳಿದಾಗ ಜ್ವಾಲೆ
ಹತ್ತುವಾಗ ಬೆಳಕ ಕಂಭ
ಪಾತಾಳಕ್ಕೂ ಲಂಭ
ಉಯ್ಯಾಲೆಯಿರದಿಲ್ಲಿ
ತೂಗಿಸಿಕೊಂಡು ನಡೆವ 
ಬಯಕೆಯು ವಿಷಮ
ಚೆಲ್ಲು ನೀಲಾಪ್ತತೆತೆಯ
ಉಳಿದುದಕೆ ಪಣವಿಡುವ

ಗುರುವಾರ, ಸೆಪ್ಟೆಂಬರ್ 15, 2016

ಮೆಲ್ಲನೆ ಭುಜದ ಮೇಲೂರಿದ ಕೈಯಲ್ಲಿ 
ಸ್ವಾ0ತನದ ಸೊಗಸಿತ್ತು....
ಅಲ್ಲಿ ಅವನಿರಲೇ ಇಲ್ಲವೇನೋ
ಅನ್ನುವಷ್ಟರ ಮಟ್ಟಿಗೆ ಮೌನ..
ನಡೆದು ಹೋಗುವಾಗ ಕಣ್ಣಿರದಷ್ಟು...
ನೀರು ಹರಿದದ್ದು ರಕ್ತದಷ್ಟು ಸ್ಪಷ್ಟ 
ಬಿಸಿಯಲ್ಲ ತಣ್ಣಗೆ....
ಮನಸು ಮಾರಲಾಗದಷ್ಟು ಗಟ್ಟಿ 
ಒರಟರೆಂದರೆ ಹೌದು
ಆದರೂ ಪ್ರೀತಿಸಿದ..
ಪ್ರೀತಿಸುತ್ತಲೇ ಇರುವ
ಹುಚ್ಚು ಅವನಿಗೆ ಮಾತೇ ನಿಂತಿದೆ 
ಬೆನ್ನಿಗೂ ನೋಯುವಷ್ಟು ಅವನೆದೆ ಭಾರ
ಒಳಗೋ ನನ್ನನಪ್ಪಿ ಹೊತ್ತಿದ್ದಾನೆ
ಅವನಿಗೆಲ್ಲೂ ಜಾಗವಿಲ್ಲ 
ಹೃದಯವಿದರ ಗುಡಿಯ ಹೊರತು..
ನನ್ನ ಶಿವ...
ಶಿವನೆಡೆಗೆ ಪಯಣವದು ಆತ್ಮೀಯ ಭಾವ
ಅವನೆಡೆಯ ಹೆಜ್ಜೆಗಳು ಭಾರ ತಪ್ಪಿದ ಅಮಲು
ಮುಚ್ಚಿಹುದು ರೆಪ್ಪೆಗಳು ತೆರೆಯಲಾರೆನೆನುತಾ
ಓ0 ನಮಃ ಶಿವಾಯ ಆತ್ಮ ಜಪದ ಮಂತ್ರ
ಕೋಟಿ ಸಲ ಪಠಿಸಿದರೂ ಧಾವಿಸದೇ ನಿಂತು
ಭುವಿ ಕೈಲಾಸಗಳ ದೂರ ಕ್ರಮಿಸಿದ ಹಿಗ್ಗು
ಶಿವೆಯೆನುತ ವಿಭೂತಿ ಸ್ನಾನದಲಿ ಮರೆವು
ಗಂಗೆಯವಳ ಪುಣ್ಯ ತೀರ್ಥದ ಅನುಭವವು
ಮಾನಸ ಸರೋವರವಿಲ್ಲಿ ಹೃದಯ ಕಮಲ
ಡಮರುಗದ ಸದ್ದಿನಲಿ ನರ್ತನದ ಝಳಕು
ಭೂತಗಳ ರುದ್ರತೆಯೂ ಪ್ರಿಯವಾಗುತಿಹುದು
ಧೂಪದೊಳು ಗಣ ಬಸವಗಳ ನಾಮ ಜಪ ತಂತು
ಓಡುತಿಹೆ ಚರ್ಮಧಾರಿ ನಿನ್ನೊಳಗೆ ಸತತ
ತಲುಪಲಾರೆನೇ ಆತ್ಮ ಲಿ0ಗವದು ಸುಕೃತ
ಈ ಬೆಸುಗೆಯ ಪರಿಯನೆ0ತು ಹೇಳಲಿ
ಅಡಿಗಡಿಗೆ ಬಿಗಿದಪ್ಪುವನು
ಬಿಡಲಾರದೇ ಚಡಪಡಿಸುವನು
ಪ್ರಿಯೆಯೆನುತ ಮುತ್ತ ಬೇಡುವನು
ಹೋಗಲಾರನು ಮನಸೊಳಗೆ ನಿಂತು
ಕಾಡುವನು ಹಗಲಿರುಳು ಪ್ರೀತಿಯಲಿ
ಮುನಿಸ ಬೆರಸಿ ಸೊಗಸುಗಾರನ ಕನಸು
ಕ್ಷಣ ಕ್ಷಣವೂ ನೆನಪಾಗುವಿಯಲ್ಲ
ನಾನೇಕೆ ನಿನಗೆ ನೆನಪಿಲ್ಲ?
ಹೃದಯ ಪೋಣಿಸಿದ ಹೂಮಾಲೆ
ನಿನ್ನಳತೆಯ ಹಾಗಿದೆ....
ಧರಿಸಿ ನಿಲ್ಲು ನನ್ನ ಚೆಲುವ,
ತೋಳ ಮಾಲೆ ಕಾದಿದೆ...
ನಿಧಾನವಾಗಿ ನಡೆದಷ್ಟೂ ಭಾರಕೆ
ತುಯ್ಯುವೆದೆ ಹೊತ್ತು
ಸಾಧಿಸಲೇನಿದೆ ಜಗದ ಜಂಜಡದಲಿ
ಪರಿತಾಪಗಳ ಪರಿತಪನೆ ಬಿಡುಗಡೆಯ
ನಿಟ್ಟುಸಿರ ಬಿಸಿಯ ಹಬೆ
ಸುಡುತಲೆದೆಯಲಿ ನಗೆಯ ನುಂಗಿ
ಹುಬ್ಬುಗಂಟಾಗುತಿದೆ
ಸೋಲುತಿಹುದೆನ್ನೆದೆ ವ್ಯರ್ಥ
ವಾದಗಳ ನೆನೆದು
ಬದುಕು ಏತಕೆ ನೋವ ಮರ್ಮದ
ಗೂಡು...ಬಿಡಿಸೆ
ಉಸಿರಾಟದಲಿ ಹದ ಕಾಣಬಹುದು
ಹೃದಯದ ಒಳಗಿನ ನೋಟ
ದೇಗುಲವಿದು ನಿನ್ನ ಹೃದಯ ಕಾಲ್ತೊಳೆದು ಒಳ ಬಂದೆ
ಗಂಟೆ ಜಾಗಟೆಗಳ ಸದ್ದು ನವಿರು ಧೂಪದ ಘಮ
ಹೂಗಳ ಸುವಾಸನೆ ... ಹೂ ಹಾರಗಳ ಬಣ್ಣದ ಅಲಂಕಾರ
ಕ್ಷಿತಿಜದಷ್ಟು ಎತ್ತರದ ಆಸೆಗಳು ಮತ್ತು ಭೂಮಿಯಷ್ಟು ಭಾರ.....
ಜಗುಲಿಯಿದು ಸೂರ್ಯನ ಬಿಸಿಲ ಹೀರಿ ಉಪ್ಪರಿಗೆಯ ನೆರಳ ಗಾದಿ
ಚೆಲ್ಲುವಲ್ಲಿ ಒಂದಷ್ಟು ಜಾಗೆ ಕೊಟ್ಟದ್ದೇ ನನ್ನ ಹಿರಿಮೆ ...
ಶಿಲ್ಪ ವಿನ್ಯಾಸಗಳ ಕೆತ್ತಿದ ಸುಂದರ ಕಂಭಗಳ ನಡುವೆ
ವಿರಮಿಸಲಿಲ್ಲಿ ರೇಸಿಮೆಯ ಹಾಸಿಗೆ ... ಅದ್ಭುತ ಚೆಲುವಿನ ಹೃದಯ
ಸಂಗೀತಗಳ ಸುಸ್ವರ ನಾಟ್ಯ ನವಿಲಿನ ಲಾಲಿತ್ಯ ತುಂಬಿ ಹರಿಯುವಿಲ್ಲಿ
ದಂಗಾದೆ ಮರುಳಾದೆ ಸೋತೆ ಅದೆಷ್ಟು ಚೆಲುವಿನ ಒಳಗು ನಿನ್ನೆದೆ
ಕರೆದುಕೊಂಡದ್ದಕ್ಕೆ ನಮನ ಪರಿಸರದ ಹಸಿರಿಗೆ ಸೋತಿದ್ದೇನೆ
ಕರುಣೆ ಪ್ರೀತಿ ಕಂಬನಿಗಷ್ಟು ಅಪ್ಪುಗೆ ಎಲ್ಲವೂ ಇಲ್ಲಿದೆ ....
ಮತ್ತು
ಗರ್ಭಗುಡಿಯಲ್ಲಿ ಕಂಡೆ ಕನ್ನಡಿಯನ್ನ
ಕಣ್ ನಂಬುತ್ತಿಲ್ಲ ಈ ಸತ್ಯವನ್ನ ....
 ಹೇಳುವುದೇನೂ ಇರಲಿಲ್ಲ 


ಅವನ ಕೈ ಹಿಡಿದು ಹೇಳುವುದೇನೂ ಇರಲಿಲ್ಲ
ಬೇರೆ ಬೇರೆ ಕೋಣೆಯಲ್ಲಿ ಕೂತೂ ನಾವು ಬಲ್ಲೆವು
ನಾಡಿಬಡಿತದ ಹದವ...
ಅವನಿಗಿಷ್ಟೇ ಸಾರಿನಲಿ ಉಪ್ಪಿರಲಿ ಅನ್ನುವ ಹದವಲ್ಲ
ಮನ ಮಾಗಿ ಮಾತಿನ ಪೆಟ್ಟು ಚೂರೂ ತಾಗದ ಹಾಗೆ
ಮೌನದಲ್ಲೇ ಸಮ್ಮತಿಸುವ ನೂರು ಗಳಿಗೆ
ಭುಜದ ಮೇಲಿನ ಕೈ ಬಿಸಿಗಷ್ಟೇ ಗೊತ್ತು
ಅದರ ಸಂಬಾಷಣೆ ಅರ್ಥಗಳ ವ್ಯರ್ಥ ವಿವರಣೆ
ಅವನ ಇರುವಿಕೆಯಲ್ಲೂ ನಾನಿಲ್ಲದಿರುವ ಚಿನ್ಹೆ
ಇರುವಿಕೆ ಇಲ್ಲದಾಗುವಿಕೆಯಲ್ಲ ಒಳಚಿತ್ತದ ಗುಟ್ಟದು
ಕಂಪನಕ್ಕೂ ಅಲುಗಾಡದ ಹೃದಯವವನದು
ಕಂಬನಿ ಹನಿಯಿಳಿದು ಹೋಗು ನೀ ಅನ್ನುತಿದೆ
ಮಾತ್ತಿನ್ನೇನಿರಬಹುದು ಕೋಣೆಯಾಚೆಗೂ ಸದ್ದು
ತಲುಪದ ಹಿಮವಾದರೆ....
ಎದೆಯಲ್ಲಿ ಬಿಸಿ ಹುಟ್ಟಿದ್ದೇ ದಿಟವಾದರೆ
ಸುಟ್ಟರೂ ಕದಲಿಸಲಾಗದು ನನ್ನ ನೆನಪನ್ನ
ಮನಸಿನಲ್ಲಿ ಬೈದದ್ದು ಹೌದಾದರೂ 
ಮನಸೊಳಗೇ ಮುದ್ದಿಸಿಕೊಳ್ಳುವ ನಿನಗೆ 
ಹೊರಗೆ ಹೋಗಬೇಕೆನ್ನುವಷ್ಟು ನಾಚಿಕೆಯೂ ಕಾಣೆ ..
ಮೂರು ಮುತ್ತಿನ ತೇರು
ನೆತ್ತಿಯಲಿ ಹೊತ್ತು ಕೊಂಡು 
ಊರೂರ ತಿರುಗುತಲಿ
ಕೂಗಿ ಹೇಳಿದೆ ಕಾಣಾ
"ದೊರೆಯೇ ಕೊಡಲೇನು
ಬಡವಿ ಉಸಿರಿನ ಸಿರಿಯ?"
ಉಸಿರಪ್ಪಿ ಹಿಡಿಯಾಗಿ
ಮಾತಿರದೇ ತಬ್ಬಿದ ನೀ
ನೀರಾದೇ ಕಣ್ಣಲ್ಲಿ
ನನ್ನ ಮೇಲೆ ನಿನಗಷ್ಟು
ಪಿರೀತಿಯೇ ಹೌದಾ....
ಆತ್ಮ ಪಯಣ

ದೇಹ ಗುಡಿ ದಾಟಿ
ಮುಂದೋಡುವ ಆತುರ
ಏಕೋ?
ಆತ್ಮ ಪಯಣಕ್ಕೆ ಸಮಯವಿದೆ
ನೋಡ ......
ಕೊಟ್ಟ ಬಾಳು ನೋಡು
ನಾಳೆಗೆ ಪರಿತಪಿಸದೇ
ನನ್ನ ಸೋಲಿಸಿದೆನೆ0ಬ
ಹುಸಿ ಹೆಮ್ಮೆ ಬಿಂಕ 
ನಿನಗಿರಬಹುದು....
ಗಾಯಗಳ ನೋವಿನಲೂ
ಮನುಷ್ಯನ ಹಿಂಸಾ ತೃಪ್ತಿಯ
ಪರಮಾವಧಿ ನೋಡಿ
ಬದುಕು ಗೆದ್ದ ಸಂತಸ
ನನಗಿದೆ...
ಮುಗಿದ ದಾರಿಯ ತಿರುಗಿ
ನೋಡುವ ಗೊಡವೆಯಿಲ್ಲ
ಆತ್ಮ ಬಿಟ್ಟ ದೇಹಕ್ಕೇನು
ಉಸಿರ ಕಿರು ಆಸರೆ ತಪ್ಪಿ...
ನನ್ನೊಳಗಿರು

ಇಂಥಾ ಅಂತರದಲ್ಲೂ
ಉಳಿದ ಉಜ್ವಲ ಪ್ರೀತಿಗೆ
ಕೋಟಿ ಸಲಾಮು...
ಅದರ ತನ್ಮಯತೆಗೆ ಧನ್ಯೆ
ಒಲವಿಗೊಲವೇ ಪರೀಕ್ಷಿಸಿ
ತಿಳಿ ಮನವ ಬರೆವಾಗ
ತೀರ್ಮಾನವೇಕೆ ಬೇಕು
ನನ್ನೊಳಗಿರು ಸಾಕು...
ಕಟ್ಟಲಾರದ ಹಾಡು

ಉಸಿರಾಡದಿರಲೇ ಮತ್ತೆ.. ,
ಪ್ರೀತಿಯೊಳಗಿನ ನೋವ ಹೆಸರಾಗಿಸಿಕೊಂಡು
ಹುಸಿಯಾದ ಮಾತುಗಳ ನೆನೆದು 
ಮತ್ತೇಕೆ ನಲ್ಮೆ ಮನಸು..
ಸುತ್ತಿ ಬರುವೆಯೇಕೆ
ಅಂತರಂಗದಲಿ ಸುಡುವ ಜ್ವಾಲೆ
ಕೊಡುವೆಯಾದರೆ ಹೇಳು
ಎದೆಗೊರಗಿ ನಿಲ್ಲಲೊಮ್ಮೆ
ಮಾತೇಕೋ ನಮ್ಮ ನಡುವೆ
ಎಲ್ಲ ಮುಗಿದ ಮೇಲೆ ?
ವಿರಹದ ಸೇತುವೆ ಕಟ್ಟಿ
ಸೇರಲೊಲ್ಲೆ ದಡವ
ಹಟದ ಕಣ್ಣ ತುಂಬಾ
ಕಣ್ಣೀರ ಸುರಿವ ಕೆಚ್ಚು
ಇದು ಪ್ರೀತಿ ಹೌದು ನಿಜವೇ
ಉಸಿರಾಟ ತಡೆಯಬೇಡ ...
ಬದುಕಿರಲು ಒಮ್ಮೆ ಇಲ್ಲಿ
ನೀನಗೇನು ಅರಿವಿನಲ್ಲಿ ?
ಒಲವೇ


ಒಲವೇ ನಿನ್ನ ಕಣ್ಣ ಬಿಂಬವಾಗಿ ,ಉಸಿರ ಜೀವ ಕಣವಾಗಿ
ನನ್ನ ಚಿತ್ರ ಬರೆದಿರುವಾಗ ... ,ನೀನಿರದ ನೀನು ನನಗೇಕೆ ?
ಒಲವಿರದ ಒಣ ಮಾತಾದರೆ ವಿರಹಿಸುವ ಸುಡು ಮೌನವೇಕೆ
ನನ್ನವರೆಗೂ ಪ್ರಜ್ವಲಿಸುವ ದೃಷ್ಟಿಯೇಕೆ
ಕನ್ನಡಿಯ ಎದುರಿಸದ... ಹೇಗೆಂದರೆ ಹಾಗೆ ಹಾರುವ ಕೂದಲೇಕೆ
ನಿರ್ಲಕ್ಷ್ಯದ ನಡಿಗೆ ಹೃದಯ ಬೆರೆಸುವ ನುಡಿಗಳೇಕೆ
ಬಿಡಲಾರೆಯಾದರೆ ನನ್ನ... ಎದೆ ಹೊರಬಾಗಿಲಿಗೆ ಬೀಗವೇಕೆ
ದೂರವಾಗುವ ನನ್ನೆಡೆ ಧಾವಿಸುವ ನಿನ್ನoತರಂಗದ ಉದ್ವೇಗವೇಕೆ
ನಾನಿರದೇ ಇರಬಲ್ಲೆಯಾದರೆ ಸೇತುವೆ, ಕೊಂಡಿಗಳೇಕೆ
ಕ್ಷಣಕ್ಕೊಮ್ಮೆ ಗಳಿಗೆಗೊಮ್ಮೆ ಬಿಗಿದಪ್ಪುವ ನೋಟವೇಕೆ
ಒಲವ ಪತ್ರಗಳ ಕಂಡು ಕಣ್ಣ ತುದಿಗೆ ಆ ಹನಿಯೇಕೆ
ನನ್ನ ಕಾಣದೇ ವಿಲಪಿಸುವ ಹಂಬಲವೇಕೆ
ಬೇಡ ಬಿಡು ಬಿಟ್ಟು ಬಿಡು ನನ್ನ ,ನಿನ್ನ ಹೃದಯದ ಹೊರಗೆ...
ಒಮ್ಮೆ ಹಾಗಾದರೆ ಉಳಿವೋ ಸಾವೋ ನಿನಗಂತೂ ಸುಖದ ಉಸಿರಲ್ಲವೇ ?
ಹೃದಯದ ಮಾಯೆ

ತೋಟದಲ್ಲಿಂದು ಕಲ್ಲಿನ ಹೂಗಳು
ದಳಗಳಾರಿಸಲು ಕಣ್ಣ ಹನಿ ತೆರೆ
ಕಲ್ಲಿನಡಿಯ ತಂಪಿಗೆ ಅಂಗೈ ಸೋಕಿ 
ಹಾರವಾಗುತಲಿದೆ ಕಲ್ಲು ಸುಗಂಧಗಳು
ಮರಳು ಜಾತ್ರೆಯಲಿ ಉಳಿದ ಸಿದ್ಧಿ
ಹಸಿರ ಆಸೆಗೆ ತೆರೆದ ಮಡಿಲ ಹಾಸು
ನೀರ ಕಟ್ಟುವ ಕುತ್ತಿಗೆ ಧೂಪದಲಿ ತುಂಬಿ
ಕಂಗಳ ಕೊನೆಗೆ ಕಪ್ಪ ಎಳೆಯ ಗೆರೆ
ಆಶ್ಚರ್ಯವಿರಲಿಲ್ಲ ರಸ್ತೆ ತುದಿಗೊಂದು
ಕಲ್ಲು ಗಂಟಿನದೇ ಮರ ಅದರ ಹೂ ಹಣ್ಣು
ಬಿರಿದಾಗ ರಕ್ತ ಒಸರದು ಕಾಣೋ
ಮಾಯದ ಮಯಕ ಸಿದ್ದನ ಹಿಂದಿನ ಬೆನ್ನು
ಬೆರಳ ಹೆಣೆದು ಹೂವ ಕಟ್ಟಿದ್ದೇ ಮೂರು ಹಾರ
ಮೂವರ ಕಿವಿ ತುದಿಗೂ ಅರಳುವ ಬಣ್ಣದ ಕೋಲು
ಕಲ್ಲಿಗೇನಿದೆ ಮರುಹುಟ್ಟು ?ಕಟ್ಟುವುದಷ್ಟೇ ಸಾಕು
ಎದೆ ಬಿಡಿಸಿ ಇಟ್ಟಷ್ಟು ರಂಗು ರಂಗಿನ ಮಾಯೆ
ಒಲವ ಸುರಿ


ಕಾಲ್ನಡಿಗೆಯಲ್ಲೇ ಕನಸ ನಡೆದು
ಆಕಾಶವೇರಿ ಕುಳಿತ ಮೇಲೆ
ಇಳಿವ ಎಚ್ಚರ ಮರೆತಿದೆ
ಏಕೆ ಹೇಳಲಿ , ಉಳಿವಿಗೆ ಬಯಕೆಯ
ಹೃದಯ ತಪ್ಪಿ ಬಡಿದಿದೆ...
ಅವನ ಮಿಂಚಿನ ಕಣ್ಣ ಕೊನೆಯಲಿ
ಕರೆದ ಸನ್ನೆಗೆ ಬೆಚ್ಚಿದೆ
ಕಣ್ಣ ಮುಚ್ಚದೇ ನೋಡಲೆನ್ನಯ
ಹಗಲೂ ರಾತ್ರಿಗೆ. .ಕಾತರ
ಅವನ ತೋಳಿನ ಒಂದೇ ಹರವಿಗೆ
ಒಲವ ಸುರಿಯುವ ಆತುರ
ತಾಳ್ಮೆ ತಪ್ಪುವ ದಿನಗಳೆಣಿಸುತಾ
ಕಳೆದ ಕ್ಷಣಗಳು ಸಾವಿರ
ಅವನ ನೋಡುವ ಕನಸ ಕಣ್ಣಲಿ
ಬಿ0ಬ ತು0ಬುತಾ ಚಂದಿರ...

 ನಾಳೆ


ಕಣ್ಣು ತುಸುವೇ ಹನಿದರೂ
ಎದೆ ಬಿಸಿಯುಸಿರ ತಾಳದು
ತಣ್ಣಗಿರು ನಗುನಗುತ್ತಾ 
ಬದುಕ ಬೇಕಿದೆ ನಾವು
ಕಠಿಣ ನಾಳೆಗಳನ್ನ.....
ಅನಿಶ್ಚಯತೆ

ಮಾತು ಮೃದುವಾಗಿದೆ ಗೆಳೆಯಾ ನಿನ್ನ ಹಾಗೆ
ಒತ್ತಡಗಳಲಿ ಬಿಗಿಯಾಗುವ ನನ್ನ ಕಠಿಣ ಮಾತು
ನಾಚಿಕೆಯ ಮುಸುಕಿನಲಿ ನೋಯುತ್ತಿದೆ...
ಹತ್ತಿರ ಬಾ... ಒಮ್ಮೆ ಅಪ್ಪಿ ಕರಗುವ ಮನಸಾಗಿದೆ
ನಾಳೆಗಳ ಅನಿಶ್ಚಯತೆಗೆ ಕಾಯಲಾರೆ ನಾನು

ಗುರುವಾರ, ಸೆಪ್ಟೆಂಬರ್ 8, 2016

ದಾರಿ ದೂರವೇನಿಲ್ಲ
ನಡೆಯತೀರದ ಆಯಾಸವಷ್ಟೇ
ಏಕೋ ಯೋಚನೆಗಳೇ
ಉದಾಸೀನದ ಮೊಟ್ಟೆಯಾಗಿ
ಹೆಜ್ಜೆ ಭಾರವಾಗುತ್ತಲೇ...
ಮನಸ್ಸು ಬೇಡವೆನ್ನುವ, ಹಠದ ದಾಸ
ಏಕಿರಲಿ ಇಲ್ಲಿ?
ಊರಾಚೆಗಿನ ಬತ್ತಲ ಬಯಲಿನ
ನೆಲದಿ ಮಲಗಿರುವವರ
ಉಸಿರು ಸ್ತಬ್ಧವಾಗಿ ಯುಗವಾದರೂ
ದನಿ ಮುಟ್ಟುತ್ತಲೇ ಇದೆ
ಅಲ್ಲಿಗೇಕೆ ಎಲ್ಲೂ ನಡೆಯಲಾರದ
ಉದಾಸೀನದ ಭಾವ
ಕರೆಸಿಕೊಳ್ಳುವ ಆಸೆಯೊ0ದಿದೆ
ಹೃದಯಕ್ಕೆ ಹತ್ತಿರವಾದವರನ್ನ
ನಿನ್ನಿರವ ಸವಿ ಗಾಳಿ ಕೆನ್ನೆ ದಾಟುವಾಗ
ಕನಸಲ್ಲದ ನನಸಿಗೆ ಮುನಿಸು...
ಕಟ್ಟಲಾರದ ಹಾಡು
ಉಸಿರಾಡದಿರಲೇ ಮತ್ತೆ.. ,
ಪ್ರೀತಿಯೊಳಗಿನ ನೋವ ಹೆಸರಾಗಿಸಿಕೊಂಡು
ಹುಸಿಯಾದ ಮಾತುಗಳ ನೆನೆದು
ಮತ್ತೇಕೆ ನಲ್ಮೆ ಮನಸು..
ಸುತ್ತಿ ಬರುವೆಯೇಕೆ
ಅಂತರಂಗದಲಿ ಸುಡುವ ಜ್ವಾಲೆ
ಕೊಡುವೆಯಾದರೆ ಹೇಳು
ಎದೆಗೊರಗಿ ನಿಲ್ಲಲೊಮ್ಮೆ
ಮಾತೇಕೋ ನಮ್ಮ ನಡುವೆ
ಎಲ್ಲ ಮುಗಿದ ಮೇಲೆ ?
ವಿರಹದ ಸೇತುವೆ ಕಟ್ಟಿ
ಸೇರಲೊಲ್ಲೆ ದಡವ
ಹಟದ ಕಣ್ಣ ತುಂಬಾ
ಕಣ್ಣೀರ ಸುರಿವ ಕೆಚ್ಚು
ಇದು ಪ್ರೀತಿ ಹೌದು ನಿಜವೇ
ಉಸಿರಾಟ ತಡೆಯಬೇಡ ...
ಬದುಕಿರಲು ಒಮ್ಮೆ ಇಲ್ಲಿ
ನೀನಗೇನು ಅರಿವಿನಲ್ಲಿ ?
ಒಲವೇ ನಿನ್ನ ಕಣ್ಣ ಬಿಂಬವಾಗಿ ,ಉಸಿರ ಜೀವ ಕಣವಾಗಿ 
ನನ್ನ ಚಿತ್ರ ಬರೆದಿರುವಾಗ ... ,ನೀನಿರದ ನೀನು ನನಗೇಕೆ ?
ಒಲವಿರದ ಒಣ ಮಾತಾದರೆ ವಿರಹಿಸುವ ಸುಡು ಮೌನವೇಕೆ 
ನನ್ನವರೆಗೂ ಪ್ರಜ್ವಲಿಸುವ ದೃಷ್ಟಿಯೇಕೆ 
ಕನ್ನಡಿಯ ಎದುರಿಸದ... ಹೇಗೆಂದರೆ ಹಾಗೆ ಹಾರುವ ಕೂದಲೇಕೆ 
ನಿರ್ಲಕ್ಷ್ಯದ ನಡಿಗೆ ಹೃದಯ ಬೆರೆಸುವ ನುಡಿಗಳೇಕೆ
ಬಿಡಲಾರೆಯಾದರೆ ನನ್ನ... ಎದೆ ಹೊರಬಾಗಿಲಿಗೆ ಬೀಗವೇಕೆ
ದೂರವಾಗುವ ನನ್ನೆಡೆ ಧಾವಿಸುವ ನಿನ್ನoತರಂಗದ ಉದ್ವೇಗವೇಕೆ
ನಾನಿರದೇ ಇರಬಲ್ಲೆಯಾದರೆ ಸೇತುವೆ, ಕೊಂಡಿಗಳೇಕೆ
ಕ್ಷಣಕ್ಕೊಮ್ಮೆ ಗಳಿಗೆಗೊಮ್ಮೆ ಬಿಗಿದಪ್ಪುವ ನೋಟವೇಕೆ
ಒಲವ ಪತ್ರಗಳ ಕಂಡು ಕಣ್ಣ ತುದಿಗೆ ಆ ಹನಿಯೇಕೆ
ನನ್ನ ಕಾಣದೇ ವಿಲಪಿಸುವ ಹಂಬಲವೇಕೆ
ಬೇಡ ಬಿಡು ಬಿಟ್ಟು ಬಿಡು ನನ್ನ ,ನಿನ್ನ ಹೃದಯದ ಹೊರಗೆ...
ಒಮ್ಮೆ ಹಾಗಾದರೆ ಉಳಿವೋ ಸಾವೋ ನಿನಗಂತೂ ಸುಖದ ಉಸಿರಲ್ಲವೇ ?
ಹೃದಯದ ಮಾಯೆ
ತೋಟದಲ್ಲಿಂದು ಕಲ್ಲಿನ ಹೂಗಳು
ದಳಗಳಾರಿಸಲು ಕಣ್ಣ ಹನಿ ತೆರೆ
ಕಲ್ಲಿನಡಿಯ ತಂಪಿಗೆ ಅಂಗೈ ಸೋಕಿ 
ಹಾರವಾಗುತಲಿದೆ ಕಲ್ಲು ಸುಗಂಧಗಳು
ಮರಳು ಜಾತ್ರೆಯಲಿ ಉಳಿದ ಸಿದ್ಧಿ
ಹಸಿರ ಆಸೆಗೆ ತೆರೆದ ಮಡಿಲ ಹಾಸು
ನೀರ ಕಟ್ಟುವ ಕುತ್ತಿಗೆ ಧೂಪದಲಿ ತುಂಬಿ
ಕಂಗಳ ಕೊನೆಗೆ ಕಪ್ಪ ಎಳೆಯ ಗೆರೆ
ಆಶ್ಚರ್ಯವಿರಲಿಲ್ಲ ರಸ್ತೆ ತುದಿಗೊಂದು
ಕಲ್ಲು ಗಂಟಿನದೇ ಮರ ಅದರ ಹೂ ಹಣ್ಣು
ಬಿರಿದಾಗ ರಕ್ತ ಒಸರದು ಕಾಣೋ
ಮಾಯದ ಮಯಕ ಸಿದ್ದನ ಹಿಂದಿನ ಬೆನ್ನು
ಬೆರಳ ಹೆಣೆದು ಹೂವ ಕಟ್ಟಿದ್ದೇ ಮೂರು ಹಾರ
ಮೂವರ ಕಿವಿ ತುದಿಗೂ ಅರಳುವ ಬಣ್ಣದ ಕೋಲು
ಕಲ್ಲಿಗೇನಿದೆ ಮರುಹುಟ್ಟು ?ಕಟ್ಟುವುದಷ್ಟೇ ಸಾಕು
ಎದೆ ಬಿಡಿಸಿ ಇಟ್ಟಷ್ಟು ರಂಗು ರಂಗಿನ ಮಾಯೆ
ಕಾಲ್ನಡಿಗೆಯಲ್ಲೇ ಕನಸ ನಡೆದು
ಆಕಾಶವೇರಿ ಕುಳಿತ ಮೇಲೆ
ಇಳಿವ ಎಚ್ಚರ ಮರೆತಿದೆ
ಏಕೆ ಹೇಳಲಿ , ಉಳಿವಿಗೆ ಬಯಕೆಯ
ಹೃದಯ ತಪ್ಪಿ ಬಡಿದಿದೆ...
ಅವನ ಮಿಂಚಿನ ಕಣ್ಣ ಕೊನೆಯಲಿ
ಕರೆದ ಸನ್ನೆಗೆ ಬೆಚ್ಚಿದೆ
ಕಣ್ಣ ಮುಚ್ಚದೇ ನೋಡಲೆನ್ನಯ
ಹಗಲೂ ರಾತ್ರಿಗೆ. .ಕಾತರ
ಅವನ ತೋಳಿನ ಒಂದೇ ಹರವಿಗೆ
ಒಲವ ಸುರಿಯುವ ಆತುರ
ತಾಳ್ಮೆ ತಪ್ಪುವ ದಿನಗಳೆಣಿಸುತಾ
ಕಳೆದ ಕ್ಷಣಗಳು ಸಾವಿರ
ಅವನ ನೋಡುವ ಕನಸ ಕಣ್ಣಲಿ
ಬಿ0ಬ ತು0ಬುತಾ ಚಂದಿರ...
ಕಣ್ಣು ತುಸುವೇ ಹನಿದರೂ
ಎದೆ ಬಿಸಿಯುಸಿರ ತಾಳದು
ತಣ್ಣಗಿರು ನಗುನಗುತ್ತಾ 
ಬದುಕ ಬೇಕಿದೆ ನಾವು
ಕಠಿಣ ನಾಳೆಗಳನ್ನ..
ಮಾತು ಮೃದುವಾಗಿದೆ ಗೆಳೆಯಾ ನಿನ್ನ ಹಾಗೆ
ಒತ್ತಡಗಳಲಿ ಬಿಗಿಯಾಗುವ ನನ್ನ ಕಠಿಣ ಮಾತು
ನಾಚಿಕೆಯ ಮುಸುಕಿನಲಿ ನೋಯುತ್ತಿದೆ...
ಹತ್ತಿರ ಬಾ... ಒಮ್ಮೆ ಅಪ್ಪಿ ಕರಗುವ ಮನಸಾಗಿದೆ
ನಾಳೆಗಳ ಅನಿಶ್ಚಯತೆಗೆ ಕಾಯಲಾರೆ ನಾನು
ದಾರಿ ದೂರವೇನಿಲ್ಲ
ನಡೆಯತೀರದ ಆಯಾಸವಷ್ಟೇ
ಏಕೋ ಯೋಚನೆಗಳೇ
ಉದಾಸೀನದ ಮೊಟ್ಟೆಯಾಗಿ
ಹೆಜ್ಜೆ ಭಾರವಾಗುತ್ತಲೇ...
ಮನಸ್ಸು ಬೇಡವೆನ್ನುವ, ಹಠದ ದಾಸ
ಏಕಿರಲಿ ಇಲ್ಲಿ?
ಊರಾಚೆಗಿನ ಬತ್ತಲ ಬಯಲಿನ
ನೆಲದಿ ಮಲಗಿರುವವರ
ಉಸಿರು ಸ್ತಬ್ಧವಾಗಿ ಯುಗವಾದರೂ
ದನಿ ಮುಟ್ಟುತ್ತಲೇ ಇದೆ
ಅಲ್ಲಿಗೇಕೆ ಎಲ್ಲೂ ನಡೆಯಲಾರದ
ಉದಾಸೀನದ ಭಾವ
ಕರೆಸಿಕೊಳ್ಳುವ ಆಸೆಯೊ0ದಿದೆ
ಹೃದಯಕ್ಕೆ ಹತ್ತಿರವಾದವರನ್ನ
ನಿನ್ನಿರವ ಸವಿ ಗಾಳಿ ಕೆನ್ನೆ ದಾಟುವಾಗ
ಕನಸಲ್ಲದ ನನಸಿಗೆ ಮುನಿಸು...
ಪಾದ ಸ್ಪರ್ಶಕೆ ಕದಲದಿರುವ ಭೂಮಿಯಡಿ
ಅಲುಗದು ಐಶ್ವರ್ಯ, ಸಿಧ್ಧಿಯದು ನೆಲದ ಪಾಲು
ತೆರೆಯನೆಳೆ ಹರುಪ ತೇರಿಗೆ...ಬರದೇ ದಾರಿಯಲ್ಲಿ
ಸಾಕಷ್ಟು ಧೂಳಿನ ರಾಶಿಯೊಳು ಬೆರೆತ ಕಲ್ಲು...
ಏನಾಗಬಹುದು ನಾನಿರಲು ವಿಸ್ಮಯದೊಲು
ನೆತ್ತರಿನ ತೇರಿದೆ ಎದೆಯೊಳಗೆ....
ಹೊರಟ ಹೊತ್ತಿಗೆ ಗಳಿಗೆ ಎಣಿಸಲು ಸಾವಿರ ಸಾಲು
ಬರೆದಿಡದ ಅಮೃತವನೇ ಸವಿದೆರೆಯೆ ಮನದೊಳಗೇ
ಧರೆಯ ಕರುಣೆಯಿಂದ ಸಿರಿ ಸಿಂಹ ಪಾಲು....
ನಯನಗಳು ಮನದ ಕನಸನ್ನ ಬರೆದಂತೆಯೇ
ಹೇಳುತಿದೆಯೇನೋ ಮಡುಗಟ್ಟಿದ ಒಲವ..?
ಗುಟ್ಟುಗಳು ರಟ್ಟಾದ ನಾಚಿಕೆಗೆ ...
ಕಣ್ಣ ತುದಿಯ
ಲಜ್ಜೆಯೇ ಸಾಕ್ಷಿ...
ಮುತ್ತಿಡದಿರು ನೋಟದಲಿ,
ಭೂಮಿಯೆರಡಾಗಿ ಹೂತು ಹೋದೇನು..
ಶಬ್ದವಿರದೇ ಹುಟ್ಟಿದ ತುಮುಲಗಳು
ಅರ್ಥವಿರದೆಯೂ ಎದೆಬಡಿತ ಹೆಚ್ಚಿಸಿರುವುದೇಕೆ?
ಬಯಕೆಗಳ ಒತ್ತಡ ಮನ ಮೀರಿ 
ನೆತ್ತಿಯ ನೆತ್ತರನ್ನೇ ಬಿಸಿಯಾಗಿಸಿದಾಗ
ದೃಶ್ಯಾವಳಿಗಳ ಹಗಲುಗನಸ ಮೆರವಣಿಗೆ...
ಇದು ಹೀಗಿರಬೇಕೆ ?
ಹಿತವೆನಿಸುವ ನೆನಪುಗಳಲಿ
ಸುಡುವಿರಹವೂ ಸಿಹಿಯೇ....
ಓಮ್ಮೆ ಹಿಂತಿರುಗಿ ಬಾ
ಕಣ್ಣ ಹನಿ ನೀರಭಿಷೇಕ
ಸಾಗರದೋಪಾದಿ ಮಡುಗಟ್ಟಿ
ನಿನ್ನ ಬೆನ್ನೇರುತಿದೆ ಭಾರವಾಗಿ
ನಾ ಬಲ್ಲೆ ನೀ ನನ್ನ ನೆನೆಯದ ದಿನವಿಲ್ಲ
ಬಳ್ಳಿಯೊಲು ಬಳಸಿರುವ ಸಂಸಾರ ಹಂದರವ
ನಗಿಸುತಲಿ ಪ್ರೀತಿಸುವುದೇ ಬದುಕ ಗುಟ್ಟು
ಎಲ್ಲರೆದೆಯೊಳಗೊ0ದು ವಾತ್ಸಲ್ಯ ಬೇರೂರಿ
ಮನೆಯೆಡೆಗೆ ಧಾವಿಸುವ ಜೀವಗಳ ಸೆಳೆತ...
ಏಕೆ ಬದುಕಿರಬೇಕು ಹೀಗೂ ಏನು?
ಪ್ರೀತಿ ಮಾತುಗಳಿಗೆ ಹೃದಯ ಸ್ಪಂದಿಸದೇ ನರಳಿ
ಬ್ರಹ್ಮಾ0ಡದಷ್ಟು ಪ್ರೀತಿ ಸುರಿದೆ
ಉಸಿರುಗಟ್ಟಿಸುವ ಹಾಗಾಗಿ
ಪಾತಾಳಕ್ಕೆ ಓಡಿ ಕೂತನೇನೋ
ಹೇಗಿರಬೇಕು ಹೇಳು ನಾನು? 
ಆ ನಿನ್ನ ಕನಸಿನ ಹಾಗೆ
ಏಳು ಸುತ್ತಿನ ಮೂಗುತಿಯೂ
ಕೆನ್ನೆಗೆ ಅರಸಿನದ ಪಸೆಯೂ
ಹಣೆಯಲೂ ಬೈತಲೆಯಲೂ
ಕುಂಕುಮವ ಧರಿಸಿದವಳೇ ನಾನು
ಕಾಲು0ಗುರದ ದನಿಗೆ ಅಲುಗಿ
ಸೆರಗು ಗಾಳಿಗೆ ಮತ್ತನಾಗಿ
ಕಣ್ ತೆರದಂತೆಯೇ ನನಗೆ ಸೋತವನೇ
ಮತ್ತೇನು ಬಯಸುವಿ ಹೇಳು
ಹೆಜ್ಜೆ ಎಂದೂ ಸೋತಿಲ್ಲ
ನಿನ್ನ ಸುಖದ ತೂಕ ಹೆಚ್ಚಿಸುವುದರಲ್ಲಿ..
ಹೀಗಿರಲಿ ಒಲವೇ ಹೀಗೆಯೇ...ನು....
ಅಪರಿಚಿತ ಛಾಯೆಯದು
ಕಗ್ಗತ್ತಲ ಸೀಳಿ ಹುಡುಕಾಡುತಿದೆ
ಒಂದಷ್ಟು ನೆರಳ ಕಂಡರೂ
ಹಿಡಿದು ತು0ಡರಿಸುವ ಬಿರುಸಲಿ
ನಿಂತು ಸವಿ ಮಾತಾಡಲಿದು
ಸ್ವರ್ಗವಲ್ಲ..ರಣರಂಗದಂತೆ
ಕಣ್ಣ ಭಾವ ಮರೆಯಲಾರೆ
ಒಲವೆ0ದರೆ ಮಧುರವೇ...
ಹೃದಯ ದನಿ ಕೊಟ್ಟ ಕ್ಷಣ ನೀನಿಲ್ಲಿ
ಇದ್ದೆಯೆ0ದು ತಿಳಿದಾಗ, 
ಆಶ್ಚರ್ಯ ಗೆಳೆಯಾ 
ಹೀಗಾದದ್ದು ಮೊದಲ ಸಲವಲ್ಲ
ಆದರೂ...
ಛೇ ವಿಷಾದದ ನಿಟ್ಟುಸಿರ
ಹೊರತು ಏನೂ ಇರಲಿಲ್ಲ
ಹೃದಯಕ್ಕೆ ಬುಧ್ಧಿಯಿಲ್ಲ

ನನ್ನೊಳಗೇ ನಾ ನಕ್ಕಿರಬಹುದು
ಹಲವು ಭಾವ ನನ್ನ ಒಳಗೆ...,
ಹಠದಲ್ಲಿ ಪ್ರೀತಿ ರಾಶಿಯನೊದ್ದು
ಮುಸುಕಿಟ್ಟ ಮುನಿಸು
ಪುನಃ ಕರಗಿ ಒಲುಮೆ ಸಾಗರವಾದಾಗ
ನಿಲ್ಲಲೇ ಹಿ0ತಿರುಗದೆಯೂ
ಹೃದಯವುಕ್ಕಿ ಕಣ್ ತುಂಬಿದ್ದಿದೆ
ನಿರ್ಲಕ್ಷ್ಯತೆಯಲೂ ಭುಜಕ್ಕೆ
ನೇತು ಬಿದ್ದ ಸವಿನೆನಪುಗಳು
ಕಾಡುತ್ತವೆ ನಸುನಗುವಿನೊಳಗೆ
ಅಂತರಂಗದಲಿ ಅಂತಹ ಹವಣಿಕೆಯೇನೂ ಇರಲಿಲ್ಲ 
ಶುದ್ಧ ಪ್ರೀತಿಯ ಹೊರತು .... 
ಅಂದಿಗೂ ಇಂದಿಗೂ...
ನಿನಗೇಕೋ ಭ್ರಮೆ 
ನನ್ನ ತಪ್ಪಿಲ್ಲ
ಬಿಡುವಿರದ ಕೆಲಸದ ನಡುವೆಯೂ 
ನೆನಪಾಗುತ್ತೀ ಎಂದರೆ 
ನನಗೂ ನಿನಗೂ ಯಾವ ಜನ್ಮದ ಋಣವೋ ,
ಹಗೆಲೆಲ್ಲಾ ನೆರಳಿನ ಹಾಗಾದರೆ 
ರಾತ್ರಿ ಕನಸಿನ ನೆಪವಾಗುತ್ತೀ 
ನನ್ನ ಹೊರತೂ ನಿನಗೀನಿರಬಹುದೋ
ಏನಿದ್ದರೂ ನನ್ನoತಿರಲಿಕ್ಕಿಲ್ಲ
ಹೊಟ್ಟೆ ತುಂಬಿದ ಮೇಲೂ
ಮುಚ್ಚಿದ ರೆಪ್ಪೆಯೊಳಗೆ
ನನ್ನ ಚಿತ್ರವೇ ನಲಿದರೆ
ನಿನ್ನ ಹೃದಯದ ಅದಾವುದೋ
ಕವಾಟದ ಮೇಲೆ ಕೂತು
ಕಾಲಾಡಿಸುತ್ತಿರುವ ನನ್ನನ್ನ
ನೀನೆಂದೂ ಮನಸಾರೆ ನೂಕಿಲ್ಲ
ಆಗಾಗ ನೂರು ತಪ್ಪುವ ಎದೆ ಬಡಿತಕ್ಕೆ
ನನ್ನೆದೆಯ ಚಂಡ ಮದ್ದಳೆ ಸದ್ದು
ಮೇಳೈಸಿ ಪರಿಸ್ಥಿತಿ ಕೈತಪ್ಪಿದೆ
ತಪ್ಪಿದ್ದಲ್ಲ ನಮ್ಮ ನಾಳೆ
ಸೆರಗಿನ ಚಿತ್ರದಲ್ಲಿ ಹೂವನಿಟ್ಟವರಾರು
ಮೆದು ಮೆತ್ತನೆ ತುದಿಗೆ ಮುಳ್ಳಿದೆಯೋ 
ಅನ್ನುವ ಕಸಿವಿಸಿ....
ಎದೆಯೊಳಗೆ ಭಾರವೇಕೋ ಹೀಗೆ
ಸೆರಗು ಬರೆವ ಮುನ್ನ ಆಸೆಯ ಬಣ್ಣ 
ಕಪ್ಪುಗತ್ತಲೆ ಎಂಬ ತಿಳಿವಿರಲಿಲ್ಲ....
ಕೂಸಿನ ಕಣ್ಣ ತುದಿಗೆ ನನ್ನೆಡೆಗೆ ಬೇಡಿಕೆಯ ರಾಶಿ,
ತೊಡೆಯಂಚನೇರಿ ಕೂತು ಮುದ್ದಿಸಿಕೊಳ್ಳುವ ಸಿಹಿ ರೀತಿ..
ಎದೆಬಡಿತವಾಗಿ ಹೃದಯ ರಂಗೇರುತಿರುವ ಸಾನಿಧ್ಯ
ಮಗುವೇ ಸದಾ ನನ್ನೊಡನಾಡು ತುಟಿಯಂಚಲಿ ನಗು ಲಾಸ್ಯ
ಆಸೆಗಳೆಲ್ಲಾ ಪಟ್ಟಿಯಾಗಲಿ ಮಗುವೇ
ಒಂದೇ ಕ್ಷಣದಲಿ ತುಂಬಿ ಕೊಡುವೆ
ಅದರ ಮೊದಲೇ ಒಂದು ಮುತ್ತಿಡಬೇಕಾಗಿದೆ
ಶಕ್ತಿ ತುಂಬಲು ನೀ ಬೇಕಲ್ಲ
ನಡೆದಾಡಲು ನಿನ್ನಿರವ ಶಕ್ತಿ ಸಾಕು
ನೀನಿರುವಲ್ಲಿ ಹಾಗಿರದೇ ಹರ್ಷ ನರ್ತನ ನಡೆದಿದೆ
ಕೂಸೇ ನಮ್ಮ ನಡುವೆ ಒಪ್ಪಂದವಿರದೆಯೂ ಬಾ0ಧವ್ಯ
ಬಹಳ ಕಾದ ನಂತರ ಹುಗಿದಿಡುವ 
ಕ್ರೂರ ನಿರ್ಧಾರ...
ನನ್ನದಷ್ಟೇ ಆಗಲಿಲ್ಲ
ನಿನ್ನದೂ ಹೌದು
ಸಾವಾಗಿ ಕಾಲ ಕಾಲ ಕಳೆದರೂ
ಉಸಿರಾಟದ ತುದಿಗೆ ಬೆರಳಿಟ್ಟುಕೊಂಡು
ಶವದೆದುರು ಯಾತನೆಯ ಕೊರಗು
ಆತ್ಮ ಬಂದೊಪ್ಪಿಸಿ ರಾತ್ರಿಗಳ ಕೊಂದು
ಉಳಿವಿಗೆ ಬೇಡಿಕೆ ಬೇಡ
ಪ್ರೇತಾತ್ಮಕ್ಕೆ ಸ್ಥಳವಿಲ್ಲ ನಡೆಯುತಿರು ಕತ್ತಲಿಗೆ
ಇನಿತೂ ಕರುಣೆಯಿರದು
ಜೀವವಿಹ ದೇಹಗಳಲಿ ನೀ ಕೊಲೆಗೈದ ಹೃದಯ ಹೊತ್ತು
ಅಪರಿಚಿತ ಛಾಯೆಯದು
ಕಗ್ಗತ್ತಲ ಸೀಳಿ ಹುಡುಕಾಡುತಿದೆ
ಒಂದಷ್ಟು ನೆರಳ ಕಂಡರೂ
ಹಿಡಿದು ತು0ಡರಿಸುವ ಬಿರುಸಲಿ
ನಿಂತು ಸವಿ ಮಾತಾಡಲಿದು
ಸ್ವರ್ಗವಲ್ಲ..ರಣರಂಗದಂತೆ
ಕಣ್ಣ ಭಾವ ಮರೆಯಲಾರೆ
ಒಲವೆ0ದರೆ ಮಧುರವೇ...
ಹೃದಯ ದನಿ ಕೊಟ್ಟ ಕ್ಷಣ ನೀನಿಲ್ಲಿ
ಇದ್ದೆಯೆ0ದು ತಿಳಿದಾಗ, 
ಆಶ್ಚರ್ಯ ಗೆಳೆಯಾ 
ಹೀಗಾದದ್ದು ಮೊದಲ ಸಲವಲ್ಲ
ಆದರೂ...
ಛೇ ವಿಷಾದದ ನಿಟ್ಟುಸಿರ
ಹೊರತು ಏನೂ ಇರಲಿಲ್ಲ
ಹೃದಯಕ್ಕೆ ಬುಧ್ಧಿಯಿಲ್ಲ
ನನ್ನೊಳಗೇ ನಾ ನಕ್ಕಿರಬಹುದು
ಹಲವು ಭಾವ ನನ್ನ ಒಳಗೆ...,
ಹಠದಲ್ಲಿ ಪ್ರೀತಿ ರಾಶಿಯನೊದ್ದು
ಮುಸುಕಿಟ್ಟ ಮುನಿಸು
ಪುನಃ ಕರಗಿ ಒಲುಮೆ ಸಾಗರವಾದಾಗ
ನಿಲ್ಲಲೇ ಹಿ0ತಿರುಗದೆಯೂ
ಹೃದಯವುಕ್ಕಿ ಕಣ್ ತುಂಬಿದ್ದಿದೆ
ನಿರ್ಲಕ್ಷ್ಯತೆಯಲೂ ಭುಜಕ್ಕೆ
ನೇತು ಬಿದ್ದ ಸವಿನೆನಪುಗಳು
ಕಾಡುತ್ತವೆ ನಸುನಗುವಿನೊಳಗೆ
ಸವಿಗನ್ನಡದಲೊಮ್ಮೆ ಮಾತನಾಡುವ...
ಹಿತವೆನಿಸುವ ತಂಗಾಳಿಯಲಿ
ಮುದ್ದು ಮಾತಿನ ಸಮೃಧ್ಧಿ ಬೇಕಾಗಿದೆ
ನನ್ನ ನಿನ್ನ ನಡುವೆ ಅದೆಷ್ಟು ಮಧುರ
ಈ ಒಪ್ಪುಗೆಯ ಸಂವಾದ
ಚಿತ್ರವಾಗುಳಿದ ನಿನ್ನ ಆಕಾರವ
ವಿಚಿತ್ರವಾಗಿ ಕಾಣಲು ಅಸಹನೆ....
ಮನಸು... ಕೊನೆ ನೋಟವೊ0ದನೂ
ಇಡಬಯಸದೇ ಸುಟ್ಟರೂ ಸೈ ಎನಿಸಿದಾಗ..
..
ಬೇಡದ ನೆನಪು
ಕರ್ಮದ ಕಪಾಟುಗಳನ್ನು ತೆರೆದು
ಎಣಿಸಲು ಸಮಯ ಸಾಲದ ಹೊತ್ತು
ಭೋಗಾದಿಗಳ ಕನಸ ನವೆದು ನೋಯದೇ
ಹೊತ್ತು ತಿರುಗದ ಶೇಷಾವಶೇಷಗಳ
ಹರಿದು ಹೊರ ಬೀಳುವರು ತಾಳು
ವೇಳೆಯಿರದ ಕಾಲಚಕ್ರದ ವೇಗದಲ್ಲಿ
ಮುರಿವ ಸಂಚೇನಿರದು
ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಅಹುದೆನಿತಿರಲು... ಆತ್ಮ ಶಕ್ತಿಯ ಹೊತ್ತು
ಸೂರ್ಯ ಮುಳುಗುವುದೇ ಇಲ್ಲ ಕಣೋ
ಇಲ್ಲಿ ಕತ್ತಲು ಮಾಡಿ ಅಮೆರಿಕಾದ ಹಗಲಾಗುತ್ತಾನೆ
ಬೆಳಗಾಗುವುದೇ ತಡ ಕಣ್ ಚುಚ್ಚಿ ಎಬ್ಬಿಸುತ್ತಾನೆ
ನಾನು ಹುಟ್ಟಿದಾಗಲಿ0ದ ಅಲ್ಲ...,
ಅವನು ಹುಟ್ಟಿದಾಗಲಿ0ದಲೂ ಅಸ್ತಮಿಸಲೇ ಇಲ್ಲ
ಸುಮ್ಮಸುಮ್ಮನೇ ಅವನೂ ಚಂದ್ರನೂ ಆಡಿಸುವುದೇ ಹೀಗೆ
ಕಣ್ಣಾಮುಚ್ಚಾಲೆಗೂ ಸರಸವಿರುವುದೇ ಹಾಗೆ...
.
.
.
ಯುಗಯುಗವಾಗಿದೆ ನಿದ್ರಿಸಿ ಸೂರ್ಯ
ಅರೆ ಹಾಗೆ ಕತ್ತಲು ಕವಿದರೆ ಆಗುವುದು ಪ್ರಳ
ಕಣ್ ಹನಿವಾಗಲೆಲ್ಲಾ
ದೂರುವುದು ನಿನ್ನನ್ನೇ
ಸಂಕೋಚ ಅಹಂಕಾರದ ಮತ್ತೊಂದು ರೂಪ
ಅದರಿಂದಲೇ ನಾನಡೆವ ದಾರಿ ದೂರವಲ್ಲ
ಅವತ್ತೂ ಕೈ ಹಿಡಿದು ಮಾತನಾಡುವಾಗ
ಮನಸೊಳಗೆ ಕಲಿತಿಟ್ಟ ಪಾಠಗಳಿರಲಿಲ್ಲ
ಆಗ ಕಟ್ಟಿಕೊಂಡ ಮೋಡಗಳಷ್ಟೇ ದಟ್ಟವಾಗಿ
ಆಗಾಗಲೇ ಸುರಿದು ಬಿಡುವ ಸೊಗಸೇ ನಾನು
ಮಾತಾಡುವ ಕಲೆ ಸಿಧ್ಧಿಸಬೇಕಿಲ್ಲ
ಕಲಿಕೆಯೇತಕೆ ಹೃದಯ ದನಿಯಾಗುವ ಪರಿಗೆ
ಶಬ್ದವಾಗುವ ನಿಶ್ಯಬ್ದ ದ ಗಟ್ಟಿತನಕ್ಕೊ0ದು
ಪೆಟ್ಟೇ ಕೊಟ್ಟಾದರೂ ಕಲರವಿಸುವ ಹಕ್ಕಿ ನಾನು
ಕಣ್ ಸನ್ನೆಯಲ್ಲಿ ಆಸರೆಗೊಗ್ಗುವ ಹಠವಿಲ್ಲ
ಕಣ್ಣಂಚಿನ ತುಂಟತನದಲ್ಲೇ ಅಪ್ಪಿ ಹಿಡಿವ ಒಲವು
ಸೂರೆಗೊಳ್ಳುತಾ ಪ್ರೀತಿ ಮಹಾಪೂರವೇ ಹರಿದಂತೆ
ತೆರೆದ ಮನದ ಸರಳ ಹೆಣ್ಣು ನಾನು...
ಸಂಕೋಚದ ಅಹಂನಲ್ಲಿ ಗೆಲ್ಲುವಾಟ ಬೇಕೇನು?
ತಿರುಗಿ ನೋಡದೇ ನಡೆದು ಹೋದವನ
ಬೆನ್ನಲ್ಲಿ ಆಸೆಯ ಗರಿ ಚುಚ್ಚಿದ್ದು
ಸೌ0ದರ್ಯವೋ ಕಾಮದ ಕಿಚ್ಚೋ ಅಲ್ಲ
ತನ್ನ ಮರೆಯುವಷ್ಟು ಹತ್ತಿರ ಬಂದಿದ್ದ
ಆ ಸಂಜೆಗೆ ಮತ್ತಿನ ಮದ್ದು ಬೆರಸದೇ
ಬೆರಳ ಹೆಣೆದು ಮನಸ ಮಾರಿಕೊಂಡ,
ತನ್ನದಲ್ಲದ ಹೃದಯವನ್ನ ಕೊಸರಿಕೊಂಡು
ಮನದಾಸೆಗೆ ಬೇಲಿಯಿರದ ಕನಸ ಬೆಳಸಿದ್ದಾನೆ
ಆಣೆಗಳ ಭರವಸೆ ತಪ್ಪಿ ಭುಜಕ್ಕೊರಗಿಸಿಕೊಂಡು
ಯಾರ ಕಣ್ಣಿಗೂ ದೃಷ್ಟಿ ಹತ್ತದ ಹಾಗೆ ಒಪ್ಪಿದ ಕ್ಷಣ
ಆತ್ಮಸಾಂಗತ್ಯದ ಸರಸಕ್ಕೆ ಬರಸೆಳೆದವನು
ಬೆನ್ನ ಕಣ್ಣಲ್ಲಿ ಸುಂದರಾ0ಗನ ಬಲೆಗೆ ಮೆಟ್ಟಿ ಎಳೆದವನು
ನೋಡುವ ಕಡೆ ಬೆನ್ನು ತಿರುಗಿಸಿದವನ ಸಾಕ್ಷಿ
ನಂಬಬೇಡಿ..ಯಾವತ್ತೂ
ಅವನಾಸೆಯ ಕೊಳದಲ್ಲಿ ಈಜಿದಷ್ಟೂ ತಣಿಯದಾಸೆ
ಅಂದಿನಪ್ಪುಗೆಯ ಕೊರಗೇ ಅವನ ವಿರಹ ಮಂತ್ರ
ಚಿತ್ತ ಮೇಳದ ಉಸಿರಾಡಲಾಗದ ಗದ್ದಲದಲೂ
ಬಿದುರುಮಳೆಯಂತಹಾ ಕಾನನದ ಮನದೊಳಗೆ
ಕತ್ತಲಲಿ ನೂಕಿ ನೆನಪ ಮಿಂಚಿನ ಹಾವಳಿ
ಕಡಿವಾಣವಿರದ ಸಡಿಲ ದಾಳಿಯ ಬಿಟ್ಟು 
ಸರಿದಾರಿಯಲಿ ಹರಿಯಲಾರೆನೆನುವ
ಅಂತರಂಗದ ಯುಧ್ಧದಲಿ ಪ್ರಾಣವದು ಕದಲಿ
ಸ್ವಲ್ಪ ಗಂಡಸೋ ಹೇಗೋ ಪೂರ್ಣನೋ
ಅರ್ಥವಾಗುವ ಹೊತ್ತಿಗೆ....
ಮಣಿದು ತಿರುಗಿದವನಿಗೆ ಬಲಾಬಲದ ತೂಕದ
ಅಳತೆಗೋಲು ನಿಲುಕಲೇ ಇಲ್ಲ 
ಇನ್ನೊಂದಷ್ಟು ಹೆಣ್ಣಾಗುವ ಹೊಡೆದಾಟ ಗೆದ್ದು
ಸ್ರೀ ತನ ಭೋರ್ಗೆರೆದು ಸಂಭ್ರಮಿಸಿದಾಗ
ಆದಾವುದೋ ನಿತ್ಯ ಕಾರ್ಯದಂತೆ ದಿನಚರಿಯ
ಬಾಗಿಲಿಗೆ ಹಳಬನಾದ ಪರಿ ಸಿಟ್ಟಿಗೆಬ್ಬಿಸಿ
ಹೊಸ ಹೆಣ್ಣಾದ ದಿನವೆಲ್ಲಾ ಮೊದಲ ದಿನದ ಸೊಗಸೇ
ಮೈಯಡಿಯ ಹೊದಿಕೆಯಲಿ ದಾರದೊತ್ತೂ ಕೆ0ಪಾಗಿ
ಕೆನ್ನೆಯಾನಿಸಿ ಕೂತಾಗ ಹಗಲೂ ನಡುಹಗಲೂ ಸಂಜೆಗೂ
ಸಜೆ ಸಿಗದ ಮಣಿಸಲಾರದ ಬೆನ್ನುಗಂಟಿನ ರಗಳೆ
ರಾತ್ರಿಗಳಷ್ಟೇ ಹಗಲಾಗದ ಬಹಳ ಗಂಡಾಗುವ ಯತ್ನ
ನಡೆದಿತ್ತೋ ಅರಿಯೆ....ಪ್ರಶ್ನೆ ಕೇಳಬಾರದೇನೋ
ಮು0ಗುರುಳಿಗೆ ಸೋಲುವೆದೆ ಮೇಲೆ ಕೈ ಇರಿಸಿ
ಕೆನ್ನೆ ಮುಟ್ಟಿದ ಕೂದಲ ರಾಶಿಯ ಒ0ದಿಷ್ಟೇ
ಸರಿಸಿದ್ದು ರೇಸಿಮೆ ಗಲ್ಲದ ಹಿತಕ್ಕಾಗಿ ನಲ್ಲ
ಸುರುಳಿಗೂದಲ ನಡುವೆ ಕಳೆದ ಹೃದಯ ಇನ್ನೂ ಸಿಕ್ಕಿಲ್ಲ
ಹಸಿವಾದಾಗಲೆಲ್ಲಾ ನೆನಪಾಗುತ್ತೀ
ನೀ ನನ್ನ ಗ್ಲೂಕೋಸಾ....
ಹೃದಯ ಪೋಣಿಸಿದ ಹೂಮಾಲೆ
ನಿನ್ನಳತೆಯ ಹಾಗಿದೆ....
ಧರಿಸಿ ನಿಲ್ಲು ನನ್ನ ಚೆಲುವ,
ತೋಳ ಮಾಲೆ ಕಾದಿದೆ...
ಸಾವು ಅನುಮತಿ ಬೇಡುವುದಿಲ್ಲ
ಆದರೂ ನೋವಿನ ಸಮುದ್ರದ ಬಲೆಗೆ ಹಾಕಿ
ಅಪ್ಪಳಿಸುವುದೇ ಬದುಕ ಕುಹುಕ...
ನೋವಿರದ ಸಾವೇಕೆ ಕರುಣಿಯಾಗಿರಬಾರದು?
ತಟ್ಟನೆ ಕ್ಷಣದಲಿ ನಿಲ್ಲಲೂ ಸಾವಿನಪ್ಪಣೆಯಿಲ್ಲ
ಗುರುತೇ ಸಿಗದ ಪ್ರತಿಬಿಂಬವ
ನೋಡುತ್ತಲೇ ಕತ್ತಲಾಗುವ
ಮನಸ್ಸಿಗೆ ನಿನ್ನ ಗುರುತಿಲ್ಲ
ಏಕೋ ನಾನ್ಯಾರೆ0ಬುದೇ ಮರೆತು
ಉಳಿವಿಗೆ ಭರವಸೆ ತಪ್ಪಿತಲ್ಲ...
ಕಣ್ಣ ಹನಿ ಕಾಣಬಾರದೆ0ದೇ
ನೂರಾರು ಖಾಲಿ ಮಾತು
ಹೀಗೇಕೆ ಕಾಡುವೆ ನನ್ನ 
ಸುಸ್ತಾಗಿದೆ ಸೋತು...