ಬುಧವಾರ, ಜನವರಿ 3, 2018

ರೇಕಿ ಬೆಳಕಿನ ಮಧುರ ಪ್ರಭೆ ಆವರಿಸಿದಾಗ
ಧ್ಯಾನವೇ ಧ್ಯಾನ ಮನಸ್ಸು ತಪೋವನವಾದಾಗ 
ಆ ಕಣ್ಣುಗಳೇಕೋ ನನ್ನೊಡನೆ ಮಾತಾಡುತ್ತಿಲ್ಲ
ಎಷ್ಟೋ ಸಂದೇಶಗಳ ಉತ್ತರ ಕಾದು ಸೋತೆ
ನಮ್ಮಿಬ್ಬರ ನಡುವೆ  ಅಷ್ಟು ಮಧುರ ಸಂಭಾಷಣೆಯಿದ್ದರೂ
ನನಗೊಮ್ಮೆ ಕಣ್ಣ ಬಾಷೆ ಬೇಕು ,ಹತ್ತಿರ ಮತ್ತು ಇಲ್ಲಿ ...

ಆ ಹೃದಯವೇಕೋ ನನ್ನ ನೋಡಲು ಆರ್ದ್ರವಾಗಿಲ್ಲ
ಅಪ್ಪುಗೆಯ ಗಾಢತೆಗೆ ನೊಂದು ಪರಿತಪಿಸಲಿಲ್ಲ
ಅಂಗೈಯ ಬಿಸಿಗೆ ಧಾವಿಸಿ ಮುತ್ತಿಡಲಿಲ್ಲ
ನೋಡುವಾಸೆಗೆ ನೊಂದು ಕಣ್ಣು ಹನಿಯಲಿಲ್ಲ

ಆ ಮನಿಸ್ಸಿಗೇಕೋ ನಮ್ಮ ನಡುವಿನ ಪರದೆ ಸರಿಸುವಾಸೆಯಿಲ್ಲ
ಕಂಪಿಸುವ ಹೆಣ್ಣಿನ ಮನಸ್ಸಿನ ಮಾಧುರ್ಯ ಸವಿಯುವಾಸೆಯಿಲ್ಲ
ಎದೆಗೊಮ್ಮೆ ಅಪ್ಪಿ ಹೂವಾಗಿಸಿಕೊಳ್ಳುವ ತವಕವಿಲ್ಲ
ಜೀವ ಜೀವವಾಗಿರುವಾಗ ತನ್ನದಾಗಿಸಿಕೊಳ್ಳುವ ಮಿಡಿತವಿಲ್ಲ

ಆ ಹೃದಯವೇಕೋ ನನ್ನ ಬಡಿತವ ಕದ್ದು ಆಲಿಸುವುದಲ್ಲ
ಮಾತು ಮಾತಿಗೂ ನನ್ನೊಂದಿಗೇ ಇರುವ ಮಾತಿದೆಯಲ್ಲ
ಸದ್ದಿರದೇ ಆಗಾಗ ಕಣ್ಮುಚ್ಚಿ ಎದೆಗೊರಗಿಸಿ ಕೊಳ್ಳುವುದಿದೆಯಲ್ಲ
ಏಕೋ ಈ ಪರಿಯ ಪ್ರೀತಿ ಅರ್ಥವಾಗುತ್ತಿಲ್ಲ ..

ನನಗೇಕೋ ಕಣ್ಣ ಕಾತರ, ಮನಸಿನ ಭಾವ ,
ಸ್ಪರ್ಶವಾಗುವ ಆಸೆಯಷ್ಟೇ ಹೆಚ್ಚಿದೆಯಲ್ಲಾ  ?
ಸರಸದ ಮಯಕವಲ್ಲ ಇದು ದರ್ಶನದ ಮಧುರಾತೀತತೆಯ ಕೊರಗೋ
ಅಪ್ಪುಗೆಯೇ ಬೇಕೆಂಬ ಹಠವೋ ,ಅರ್ಥವಾಗದ ಮಾತಿದೆಲ್ಲಾ ... 

ಮಂಗಳವಾರ, ಡಿಸೆಂಬರ್ 19, 2017

ಪ್ರೀತಿಸುವುದೂ ಬಿಟ್ಟು ಬಿಡುವುದು 
ನಿನ್ನಷ್ಟು ನಿರಾಳವಲ್ಲ ನನಗೆ..
ನನ್ನೆದೆ ಹೆಬ್ಬಾಗಿಲಿಗೆ ಬೀಗ ಹಾಕಿ
ಕೀ ಎಸೆದು ಬಿಟ್ಟಿದ್ದೇನೆ ದೇವರೆಡೆಗೆ
ಹೊಸ ವರ್ಷಕೆ ಸುಣ್ಣ ಬಣ್ಣ 
ಕಾಣಬೇಕಾದ ಹೃದಯದ ಗೋಡೆ
ಒ0ದಿನಿತೂ ಬದಲಾವಣೆ ಒಪ್ಪುತ್ತಿಲ್ಲ...

ಸೋಮವಾರ, ನವೆಂಬರ್ 6, 2017

ಅವನೆಂಬ ಮೋಹವೂ ಊಹಾತೀತವಾದ ನೋವಾಗಿದೆ
ಎದೆಯಲ್ಲಿ ಎಲ್ಲಿದೆಯೆಂದು ಹೇಳಲಾಗದ ಗುರುತಾಗಿದೆ 

ಶುಕ್ರವಾರ, ಸೆಪ್ಟೆಂಬರ್ 16, 2016

ಮುಡಿ ಭಾರವಾಗುತಿದೆ
ನಿನ್ನ ಹೊತ್ತೊಯ್ಯಲಾರೆ
ಫ್ರಭೂ ನೀಲಮಣಿ
ಹೆಡೆಯಿಳಿದು ಬಂದೇ
ಸುತ್ತಿಕೋ
ನೆತ್ತಿಗೇ ಗುರಿಯಿಡುವ ಗೋಜಿಲ್ಲ
ಒಮ್ಮೆ ಇಳಿದಾಗ ಜ್ವಾಲೆ
ಹತ್ತುವಾಗ ಬೆಳಕ ಕಂಭ
ಪಾತಾಳಕ್ಕೂ ಲಂಭ
ಉಯ್ಯಾಲೆಯಿರದಿಲ್ಲಿ
ತೂಗಿಸಿಕೊಂಡು ನಡೆವ 
ಬಯಕೆಯು ವಿಷಮ
ಚೆಲ್ಲು ನೀಲಾಪ್ತತೆತೆಯ
ಉಳಿದುದಕೆ ಪಣವಿಡುವ

ಗುರುವಾರ, ಸೆಪ್ಟೆಂಬರ್ 15, 2016

ಮೆಲ್ಲನೆ ಭುಜದ ಮೇಲೂರಿದ ಕೈಯಲ್ಲಿ 
ಸ್ವಾ0ತನದ ಸೊಗಸಿತ್ತು....
ಅಲ್ಲಿ ಅವನಿರಲೇ ಇಲ್ಲವೇನೋ
ಅನ್ನುವಷ್ಟರ ಮಟ್ಟಿಗೆ ಮೌನ..
ನಡೆದು ಹೋಗುವಾಗ ಕಣ್ಣಿರದಷ್ಟು...
ನೀರು ಹರಿದದ್ದು ರಕ್ತದಷ್ಟು ಸ್ಪಷ್ಟ 
ಬಿಸಿಯಲ್ಲ ತಣ್ಣಗೆ....
ಮನಸು ಮಾರಲಾಗದಷ್ಟು ಗಟ್ಟಿ 
ಒರಟರೆಂದರೆ ಹೌದು
ಆದರೂ ಪ್ರೀತಿಸಿದ..
ಪ್ರೀತಿಸುತ್ತಲೇ ಇರುವ
ಹುಚ್ಚು ಅವನಿಗೆ ಮಾತೇ ನಿಂತಿದೆ 
ಬೆನ್ನಿಗೂ ನೋಯುವಷ್ಟು ಅವನೆದೆ ಭಾರ
ಒಳಗೋ ನನ್ನನಪ್ಪಿ ಹೊತ್ತಿದ್ದಾನೆ
ಅವನಿಗೆಲ್ಲೂ ಜಾಗವಿಲ್ಲ 
ಹೃದಯವಿದರ ಗುಡಿಯ ಹೊರತು..