ಗುರುವಾರ, ಸೆಪ್ಟೆಂಬರ್ 15, 2016

 ಹೇಳುವುದೇನೂ ಇರಲಿಲ್ಲ 


ಅವನ ಕೈ ಹಿಡಿದು ಹೇಳುವುದೇನೂ ಇರಲಿಲ್ಲ
ಬೇರೆ ಬೇರೆ ಕೋಣೆಯಲ್ಲಿ ಕೂತೂ ನಾವು ಬಲ್ಲೆವು
ನಾಡಿಬಡಿತದ ಹದವ...
ಅವನಿಗಿಷ್ಟೇ ಸಾರಿನಲಿ ಉಪ್ಪಿರಲಿ ಅನ್ನುವ ಹದವಲ್ಲ
ಮನ ಮಾಗಿ ಮಾತಿನ ಪೆಟ್ಟು ಚೂರೂ ತಾಗದ ಹಾಗೆ
ಮೌನದಲ್ಲೇ ಸಮ್ಮತಿಸುವ ನೂರು ಗಳಿಗೆ
ಭುಜದ ಮೇಲಿನ ಕೈ ಬಿಸಿಗಷ್ಟೇ ಗೊತ್ತು
ಅದರ ಸಂಬಾಷಣೆ ಅರ್ಥಗಳ ವ್ಯರ್ಥ ವಿವರಣೆ
ಅವನ ಇರುವಿಕೆಯಲ್ಲೂ ನಾನಿಲ್ಲದಿರುವ ಚಿನ್ಹೆ
ಇರುವಿಕೆ ಇಲ್ಲದಾಗುವಿಕೆಯಲ್ಲ ಒಳಚಿತ್ತದ ಗುಟ್ಟದು
ಕಂಪನಕ್ಕೂ ಅಲುಗಾಡದ ಹೃದಯವವನದು
ಕಂಬನಿ ಹನಿಯಿಳಿದು ಹೋಗು ನೀ ಅನ್ನುತಿದೆ
ಮಾತ್ತಿನ್ನೇನಿರಬಹುದು ಕೋಣೆಯಾಚೆಗೂ ಸದ್ದು
ತಲುಪದ ಹಿಮವಾದರೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ