ಗುರುವಾರ, ಸೆಪ್ಟೆಂಬರ್ 15, 2016

ಹೃದಯದ ಮಾಯೆ

ತೋಟದಲ್ಲಿಂದು ಕಲ್ಲಿನ ಹೂಗಳು
ದಳಗಳಾರಿಸಲು ಕಣ್ಣ ಹನಿ ತೆರೆ
ಕಲ್ಲಿನಡಿಯ ತಂಪಿಗೆ ಅಂಗೈ ಸೋಕಿ 
ಹಾರವಾಗುತಲಿದೆ ಕಲ್ಲು ಸುಗಂಧಗಳು
ಮರಳು ಜಾತ್ರೆಯಲಿ ಉಳಿದ ಸಿದ್ಧಿ
ಹಸಿರ ಆಸೆಗೆ ತೆರೆದ ಮಡಿಲ ಹಾಸು
ನೀರ ಕಟ್ಟುವ ಕುತ್ತಿಗೆ ಧೂಪದಲಿ ತುಂಬಿ
ಕಂಗಳ ಕೊನೆಗೆ ಕಪ್ಪ ಎಳೆಯ ಗೆರೆ
ಆಶ್ಚರ್ಯವಿರಲಿಲ್ಲ ರಸ್ತೆ ತುದಿಗೊಂದು
ಕಲ್ಲು ಗಂಟಿನದೇ ಮರ ಅದರ ಹೂ ಹಣ್ಣು
ಬಿರಿದಾಗ ರಕ್ತ ಒಸರದು ಕಾಣೋ
ಮಾಯದ ಮಯಕ ಸಿದ್ದನ ಹಿಂದಿನ ಬೆನ್ನು
ಬೆರಳ ಹೆಣೆದು ಹೂವ ಕಟ್ಟಿದ್ದೇ ಮೂರು ಹಾರ
ಮೂವರ ಕಿವಿ ತುದಿಗೂ ಅರಳುವ ಬಣ್ಣದ ಕೋಲು
ಕಲ್ಲಿಗೇನಿದೆ ಮರುಹುಟ್ಟು ?ಕಟ್ಟುವುದಷ್ಟೇ ಸಾಕು
ಎದೆ ಬಿಡಿಸಿ ಇಟ್ಟಷ್ಟು ರಂಗು ರಂಗಿನ ಮಾಯೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ