ಗುರುವಾರ, ಸೆಪ್ಟೆಂಬರ್ 8, 2016

ಸಂಕೋಚ ಅಹಂಕಾರದ ಮತ್ತೊಂದು ರೂಪ
ಅದರಿಂದಲೇ ನಾನಡೆವ ದಾರಿ ದೂರವಲ್ಲ
ಅವತ್ತೂ ಕೈ ಹಿಡಿದು ಮಾತನಾಡುವಾಗ
ಮನಸೊಳಗೆ ಕಲಿತಿಟ್ಟ ಪಾಠಗಳಿರಲಿಲ್ಲ
ಆಗ ಕಟ್ಟಿಕೊಂಡ ಮೋಡಗಳಷ್ಟೇ ದಟ್ಟವಾಗಿ
ಆಗಾಗಲೇ ಸುರಿದು ಬಿಡುವ ಸೊಗಸೇ ನಾನು
ಮಾತಾಡುವ ಕಲೆ ಸಿಧ್ಧಿಸಬೇಕಿಲ್ಲ
ಕಲಿಕೆಯೇತಕೆ ಹೃದಯ ದನಿಯಾಗುವ ಪರಿಗೆ
ಶಬ್ದವಾಗುವ ನಿಶ್ಯಬ್ದ ದ ಗಟ್ಟಿತನಕ್ಕೊ0ದು
ಪೆಟ್ಟೇ ಕೊಟ್ಟಾದರೂ ಕಲರವಿಸುವ ಹಕ್ಕಿ ನಾನು
ಕಣ್ ಸನ್ನೆಯಲ್ಲಿ ಆಸರೆಗೊಗ್ಗುವ ಹಠವಿಲ್ಲ
ಕಣ್ಣಂಚಿನ ತುಂಟತನದಲ್ಲೇ ಅಪ್ಪಿ ಹಿಡಿವ ಒಲವು
ಸೂರೆಗೊಳ್ಳುತಾ ಪ್ರೀತಿ ಮಹಾಪೂರವೇ ಹರಿದಂತೆ
ತೆರೆದ ಮನದ ಸರಳ ಹೆಣ್ಣು ನಾನು...
ಸಂಕೋಚದ ಅಹಂನಲ್ಲಿ ಗೆಲ್ಲುವಾಟ ಬೇಕೇನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ