ಭಾನುವಾರ, ಸೆಪ್ಟೆಂಬರ್ 1, 2013

ನಿನ್ನಾತ್ಮ ನನ್ನ ದೇಹದಲಿ .. ನಿನ್ನ ದೇಹದೊಳಗೆನ್ನ ಆತ್ಮ

ಪರಕಾಯ ಪ್ರವೇಶದಲಿ ಈ ದೇಹಗಳೆರಡರ ಬಿಟ್ಟು
ಕಾಯೋ ಎಂದೊಪ್ಪಿಸಿ,ಅತ್ಮಾವಲೋಕನ ಮಾಡು ಆಗುತ್ತದೆಯೇ? 
ಸಿದ್ದ ಆತ್ಮಗಳೆರಡು ದೇಹವೊಂದರಲ್ಲಿ ಮಾತಿಗಿಳಿಯಬಹುದಾದರೆ,
ಇರೋಣ ಬಿಡು ಜಾಗೆ ಮಾಡಿಕೊಂಡು 
ಪ್ರೀತಿಸಿದ್ದೇನು ಯಾವ ನನ್ನನ್ನು ? ನಾನ್ಯಾರು ?
ದೇಹವೇ ?ಮನಸೇ? ಆತ್ಮವೇ ?ಉಸಿರೇ? ಬಡಿತವೇ ?
ನಿನ್ನೊಳಗೆ ಜಾಗ ಕೊಟ್ಟರೆ ,ಈ ದೇಹದ ಕೊಳೆಯುವಿಕೆ ಮುನ್ನ
ಧಾವಿಸಬೇಕಾದ್ದು ಎಷ್ಟು ದಿನ ಮುನ್ನ ?ಒಹ್ .. ದೇಹ ನನ್ನ ..
ಅತ್ಮವಿರದೇ ನೀನಿರಲಾರೆಯಾದರೆ "ನಾನು ಆತ್ಮ ",ನೀನೂ
ಪೂರ್ವ ಜನ್ಮ ಕರ್ಮ ಫಲಗಳ ಆತ್ಮ ಭೋಗವೆನ್ನುತ್ತಾರೆ
ನಿನ್ನ ದೇಹವನುಭವಿಸಿತೇ ಆ ಸುಖ ಕಷ್ಟಗಳನ್ನ ,ಅಥವಾ ಅತ್ಮವೋ
ಮುಕ್ತಿಗೋಡಿದೆಯೆಂದರೆ ಮಾತಾಡಿದಾಗ ಬರುವಾತ್ಮ ಪಾಪಿಯೇ
ದೇಹದಲಿ ಮರುಜನ್ಮವೆತ್ತಿದವರೆಲ್ಲಾ ಪಾಪಾತ್ಹ್ಮಗಳೇ ?
ಎನೋ ತಿಳಿಯೇ .. ಪರಕಾಯ ಪ್ರವೇಶ ..ಸರ್ಪಗಳ ದೇಹದಲಿ
ಋಷಿಗಳಿಗಂತೆ .. ನಮಗಲ್ಲ ಬಿಡು .. ,ಈ ಅದ್ಬುತ ಕ್ರಿಯೆಯಲ್ಲಿ
ಬಾನಲ್ಲೊoದಷ್ಟು ತಿರುಗಾಡಿ ಬರೋಣವಂತೆ
ಅಲ್ಲಿವರೆಗೆ ಬಿಸಿ ಕಾಪಾಡುವ ಈ ದೇಹದ್ದೇ ಸದಾ ಚಿಂತೆ .
ಕೆಲವೊಮ್ಮೆ ದೇಹಗಳ ಬದಲಾಯಿಸ ಬಹುದೇ ?
ನಿನ್ನಾತ್ಮ ನನ್ನ ದೇಹದಲಿ .. ನಿನ್ನ ದೇಹದೊಳಗೆನ್ನ ಆತ್ಮ
ಹುಂ .. ಎನ್ನುವನೇ ಕಾಣದ ಕರ್ತನು ?ನಿಲ್ಲಿಸಿಬಿಟ್ಟರೆ ಉಸಿರನು ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ