ಭಾನುವಾರ, ಸೆಪ್ಟೆಂಬರ್ 1, 2013

ಆಷಾಢ ಮಾಸ

ಆಷಾಢ ಮಾಸ

ಆಷಾಢ ಮಾಸದಲಿ ತೆರೆವ ಭಕ್ತಿ ಕಥೆಗಳ ಹಾಸು 
ಬಾಗಿಲಲಿ ದೀಪವಾಗಿ ಬೆಳಗಿ ದೀಪವಾಗಿ ದೇವೀ ತತ್ವವಾಗಿದೆ 

ಸಂಜೆಯಾದರೆ ಬಾಗಿಲೆರದೂ ಕಡೆ ಕಾಂತಿ ಸೂಸುವ
ತುಳಸಿಯೆದುರಿನ ರಂಗೋಲಿಗೆ ಬೆಳಕ ತರುವ ಆಷಾಢ ದೀಪ

ಚಳಿ ಗಾಳಿಯ ಹೊಯ್ದಾಟದಲಿ ಅಲುಗಾಡುತ್ತಾ ದೇದೇಪ್ಯಮಾನವಾಗಿ ವಿರಾಜಿಸಿ
ಮನೆಯೊಳಗಿನ ಜೀವಗಳಿಗೆ ಸಾದಾರೋಗ್ಯ ತುಂಬುವ ಶುಭ ಸಂಕೇತದ ದೀಪ

ಪ್ರಕೃತಿಯಲ್ಲಿ ಲೀನವಾದ ಆತ್ಮಗಳಿಗೆ ಸ್ವರ್ಗದೆಡೆಗೆ ದಾರಿ ತೋರುವ
ದೇವ ನಿರ್ಮಿತ ಕಾಂತಿಯ ಪ್ರಕಾಶಿಸುತ ಬೆಳಗುವುದು ಮನೆ, ಮನದ ಬಾಗಿಲ ದೀಪ

ಮನೆ ಮಕ್ಕಳ ಪುಟ್ಟ ಪಾದದ ಬಾಲಲಕ್ಷ್ಮಿಯ ಕಿರು ಗೆಜ್ಜೆ ದನಿಯಲಿ ಸೆರಗ ಹೊದ್ದು ನಡೆವಾಗ
ಮುಂಬರುವ ಶ್ರಾವಣದ ಕನಸ ದೈವಿಕತೆಯಲ್ಲಿ ಮೆರೆಸುವುದು ಆಷಾಡ ದೀಪ

ಸುಬ್ರಮಣ್ಯ ಹರೋಹರಗಳ ,ಲಕ್ಷ್ಮೀ ಪೂಜೆಗಳ ವೈಭವದಿ ಧೂಪವಾಗಿಸಿ ಅಲಂಕರಿಸಿಕೊಂಡು
ಸುಗಂಧದ ಆನಂದ ಸೂಸಿ ಭೀಮನಮಾವಾಸ್ಯೆಯವರೆಗೂ ದಿನ ಬೆಳಗಲಿ ಬಾಗಿಲಲಿ ದೀಪ

ಪ್ರಥಮ ಏಕಾದಶಿ ವ್ರತ ಆರಾಧನೆಯ ಆಷಾಢದ ಶುಕ್ರವಾರಗಳ ಲಕ್ಷ್ಮಿ ಪೂಜೆಯ
ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿ,ಅನುಸೂಯಾದೇವಿ ಶಿವ ವ್ರತ ಮಾಡಿ ಬೆಳಗಿಸಿದ ಭೂ ದೀಪ

ಅಮರನಾಥದ ಹಿಮಲಿಂಗ ಧರ್ಶನದ ಮಾಸ ಗಂಗೆ ಭೂಮಿಗೆ ಉತ್ತರಾಭಿಮುಖವಾದ ಆಷಾಢ ಮಾಸ
ಸ್ವರ್ಗವೇ ಭುವಿಗಿಳಿದಲ್ಲಿ ಹಚ್ಚಿರಿ ಮನೆ ಮನೆಯಲ್ಲಿ ಹೊಸಿಲ ಬದಿಗೆ, ಮುಗುಳ್ ನಗೆಯಲಿ ,ಆಷಾಢ ದೀಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ