ಭಾನುವಾರ, ಸೆಪ್ಟೆಂಬರ್ 1, 2013

ಬಾಳಗೆಳೆಯನೊಡನೆ ಸಂವಾದ


ನಿನ್ನ ಕಣ್ಣೊಳಗೆ ನಡೆದು ಮೂವತ್ತು ವರ್ಷಗಳ ಸಹಚರ್ಯ 
ತಲೆಯೆತ್ತಿ ನಿಲ್ಲುವವರೆಗೂ ಏರಿಳಿತಗಳಲ್ಲಿ ಹೊದ್ದಿಸಿಕೊಂಡಿದ್ದೇನೆ 
ಹದಿನಾಲ್ಕರ ಮುಗ್ಧತೆಯಲ್ಲಿ ನಗುವ ಗೆಳೆಯ ಗೆಳತಿಯರಾಗಿ ,
ಬಾಳದಾರಿ ಹಸೆ ಬರೆದಾಗ ಸಂಗಾತಿಗಳಾಗಿ ಇಪ್ಪತ್ತು ವಸoತ

ಬೇಕಾದಾಗಲೆಲ್ಲಾ ರಚ್ಚೆ ಹಿಡಿದು ಸಾಧನೆಗಳ ಓದಿನಿಂದ
ಏರುವಷ್ಟು ಏರಿಸಿ ಬೇಕಾದನ್ನೆಲ್ಲ ಕೈ ಹಿಡಿಸಿ ದೇಶ ದೇಶ ಸುತ್ತಿಸಿ
ಮೆಲ್ಲನೆ ನಗೆಯಲ್ಲಿ ನೀನು ವಿರಮಿಸುವಾಗ ನನಗೊಂದು ಪ್ರಶ್ನೆ
ನನಗೆ ಬೇಕೆಸಿದ್ದು ನಿನಗೆ ಎಂದಾದರೂ ನೋವು ಕೊಟ್ಟಿತ್ತೇ ?

ಒಮ್ಮೆ ಎದೆಗೆಟ್ಟಾಗ ಅಧ್ಯಾತ್ಮದ ದಾರಿಯಲಿ ಜೊತೆಗೆ ನಡೆದೆ
ಸ್ವರ್ಗವದು ಬದುಕ ಮೀರಿದ ಸತ್ಯ ,''ರೇಕಿ ''ಯ ಒಟ್ಟಿಗೆ ಕಲಿಯುವಾಗ,
ನಿದ್ರಿಸದೆ ಮಗುವ ತೊಡೆಯಲಿ ರಾತ್ರಿಯಿಡೀ ನನಗೆಚ್ಹರವಾಗದಂತೆ ಕಾದದ್ದಿತ್ತು
ಕಣ್ಣಲಿ ಬಂದ ಹನಿ ಕೆನ್ನೆಗೆoದೂ ಇಳಿಯಗೊಡಲ್ಲಿಲ್ಲ ನೀನು,ಅಪೂರ್ವ ನೀನಲ್ಲವೇನು ?

ಆಗಾಗ ನಿಂತು ತಿರುಗಿ ನೋಡಿದ್ದೇನೆ ತಂದೆಯಿರದೇ ನೀ ತಂದೆಯಾಗಿ
ಅಣ್ಣನಿರದೇ ನೀ ಅಣ್ಣನಾಗಿ ,ಗೆಳತಿಯರಿರದೇ ನೀ ಗೆಳತಿಯಾಗಿ
ಧಾವಿಸಿದ್ದೀಯ ಸದಾ ವಾತ್ಸಲ್ಯ ದ ಮಹಾಪೂರವಾಗಿ ಎಲ್ಲವ ಸ್ವೀಕರಿಸಿ
ಏನು ಹೇಳು ?ನಾನು ನಿನ್ನ ಬಾಳಗೆಳತಿಯಾಗಿ ಸಂಪೂರ್ಣಳೇ

ತಿದ್ದಿ ಬಿಡು , ಮನ ನೋಯಿಸಿದ್ದರೆ ಕ್ಷಮಿಸಿಬಿಡು ,ನೋಯದಿರು ನಿನ್ನೊಳಗೆ
ಮಾತು ಹೆಚ್ಚ್ಹಾಗಿ ಹುಡುಗಾಟ ಇನ್ನೂ ಹೋಗಿಲ್ಲ ನಲವತ್ತು ಕಳೆದರೂ ,
ಅಡಿಗೆ ಮನೆಯ ಅಕ್ಕಿ ಡಬ್ಬಿಯಲ್ಲೂ ನಿನ್ನನ್ನೇ ನೆನೆದು ನಗುವ ಪ್ರೇಮ ಉಕ್ಕಿ
ಬಳಸಿ ಹೇಳುವೆ ,ಇರುವ ಹೇಗೆ ಬದುಕಿರುವವರೆಗೂ ,ನಿನ್ನಿಚ್ಚೆಯ ನನಸಿನೊಳಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ