ಭಾನುವಾರ, ಸೆಪ್ಟೆಂಬರ್ 1, 2013

ಹನಿ

ನಿ
ನಾನೊಂದು ಸಲ ತುಂಬಾ ಹುಷಾರಿಲ್ಲದೇ ಮಲಗಿದ್ದೆ ,ಅದರ ಮುನ್ನ ಧೀರ್ಘ ಪ್ರಯಾಣ ಮುಗಿಸಿ ವಾಪಾಸಾಗಿದ್ದೆ ,ನನ್ನ ಮಗುವಿಗಾಗ ೪ ವರ್ಷ ,ಅವಳು ಶಾಲೆಯಿಂದ ಬರುವಾಗ ಇನ್ನೂ ನಿದ್ರಿಸುತ್ತಿದ್ದೆ ,ಹುಷಾರಿಲ್ಲದ ಮಂಪರಿಗೆ ಅವಳು ಕೋಣೆಯೊಳಗೆ ಬಂದದ್ದು ಗೊತ್ತಾದರೂ ಕಣ್ತೆರೆಯಲಾಗಲಿಲ್ಲ ಹತ್ತಿರ ಬಂದು ನಿಂತ ಮಗು ಹೆದರಿತ್ತೆಂದು ಕಾಣುತ್ತದೆ ,ಅಥವಾ ಅದೇನು ಭಾವವೂ ತಿಳಿಯೆ .... ಮೆಲ್ಲನೆ ಮೂಗಿನ ಮುಂದೆ ಬೆರಳಿಟ್ಟು ಉಸಿರಾಡುತ್ತಿದ್ದೇನಾ ನೋಡಿದಳು ,ನಂತರ ಎದೆ ಹತ್ತಿರ ಕಿವಿ ತಂದು ಕ್ಷಣ ಮಾತ್ರ ನಿಂತು ಹೊರಗೆ ಹೊರಟು ಹೋದಳು ..... ದಿಗ್ಬ್ರಮೆಗೊಂಡ ಮನಸ್ಸು ಕೇಳಿತು ..ನನ್ನ ಕಾಯಿಲೆ ಮಗುವಿಗೆ ಸಾವಿನ ಭಯ ತಂದಿರಬಹುದೇ ? ಅವಳ ಭಯ ,ಕೊರಗಿಗೆ ನಾನೇ ಕಾರಣಳೇ ?...... ಕಣ್ಣಲ್ಲಿ ಹನಿ ಹನಿ ನೀರುರುಳಿತು ಎದೆ ತುಂಬಿ ಭಾರವಾಗಿ ,ಮನದಲ್ಲೇ ಕ್ಷಮೆ ಕೇಳಿದೆ ,ಮನಸಲ್ಲೇ ನಾನೆಂದೂ ನಿನ್ನೆದುರು ಹೀಗೆ ಕಾಣಿಸಿಕೊಳ್ಳಲಾರೆ ಎಂದು ,ತರತರದ ಆಲೋಚನೆಗಳು ಹಾದು ಹೋದವು ... ಅದೇ ಕೊನೆ .... ನಾನೆಂದೂ ನಗುವ ,ಶಕ್ತಿ ಪೂರ್ಣ ಅಮ್ಮ ,ಏನೇ ಬರಲಿ ನೋಡೋಣ ಸರಿ ಹೋಗುತ್ತೆ ಬಿಡು ಎಂದು ಕೈ ಹಿಡಿದು ಗಟ್ಟಿ ನಾನು ಎನ್ನುವ ಭಾವನೆ ಬೆಳಸಿದೆ ಅವಳಲ್ಲಿ ... ಈವರೆಗೆ ನನ್ನ ಕಣ್ಣಲ್ಲೊಂದು ಹನಿಯನ್ನೂ ಅವಳು ನೋಡಲಿಲ್ಲ .......... ನಾನು ಹುಷಾರಿಲ್ಲದಾಗ ನೋವು ... ಸಹಿಸೆ ಎಂದಿಲ್ಲ .........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ