ಮಂಗಳವಾರ, ಸೆಪ್ಟೆಂಬರ್ 24, 2013

ಹೂವಾಡಗಿತ್ತಿ

ಹೂವಾಡಗಿತ್ತಿ 

ಕಣ್ಣರಳಿಸಿದ ಪ್ರಿಯನ ಹೆಜ್ಜೆ ಹಿಂಬಾಲಿಸಿದೆ 
ನಸುನಕ್ಕ ಮಗುವಿನ ಕೈಯಲ್ಲಿ ಗುಲಾಬಿಯಿತ್ತು 
ಅವಳ ಗೆಜ್ಜೆಗೆ ಸೋಲದವರಾರು 
ಬರದ ದಿನವಿಲ್ಲ ಕಣ್ಣ ತoಪಾಗಿಸಲಿಕ್ಕೆ....

ಕೂಗುವಳು ಹೂವ ಕಟ್ಟಿ ತಂದು
ನೆನೆದಂತೆ ಬಣ್ಣಗಳ ಪೋಣಿಸಿಟ್ಟು...
ಅವಳ ಕೈರಸಿಕತೆಯ ಸಿದ್ಧ್ಹಿ ,
ಹೂಮಾಲೆಯ ಚೆಲುವಿಕೆಯೆ ಸಾಕ್ಷಿ

ತಲೆಯ ಮೇಲಿನ ಬುಟ್ಟಿ ,ಬಳಕುವ ಸೊಂಟ
ಅವಳು ಹಿಂದೆಸೆವ ಹಾವಿನ ಜಡೆ ಮಾರುದ್ದ ...
ನಕ್ಕರವಳು ಬೀದಿಗೇ ಹಬ್ಬ.. ದಿನಾ ಬರುವವಳು
ಮತ್ತೆ ಮುತ್ತಿನ ಹಲ್ಲು ತೆರೆದು ಕರೆವಳು ...

ದೇವ ಕಾಯುವ ಅವಳ ಸೃಷ್ಟಿ ಮಾಲೆಯ ಸೊಬಗಿಗೆ
ಬೆರೆಸಿ ತರುವಳು ಒಲವ ಅದರೊಳಗೆ , ನಾ ನೋಡುವಲ್ಲಿ
ಇರಲಿಲ್ಲ ಹೂವೊಳಗೆ ಹೃದಯ ,ಬೆರೆತುಕೊಂಡೆ ಘಮದೊಳಗೆ
ಹೂವ ಪ್ರತಿದಳದಲ್ಲೂ ಹೂವಾಡಗಿತ್ತಿಯ ಪ್ರೀತಿ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ