ಭಾನುವಾರ, ಸೆಪ್ಟೆಂಬರ್ 1, 2013

''ಭಿಕ್ಷೆ ಅಷ್ಟೊಳ್ಳೆ ಆದಾಯದ ಕಾಯಕವೇ ?''

ಒಂದು ಅನುಭವ ''ಭಿಕ್ಷೆ ಅಷ್ಟೊಳ್ಳೆ ಆದಾಯದ ಕಾಯಕವೇ ?''
ನಾನು ಆಗಷ್ಟೇ ಇಂಗ್ಲೆಡ್ ನಿoದ ಕಾಲಿನ ವಿಶೇಷ ತಜ್ಞಳಾಗಿ ಬಂದ ಹೊಸದು ,ಭಾರತದಲ್ಲಿ ಕಾಲ್ಲಿಲ್ಲದವರಿಗೆ ಕಾಲು ಹಾಕಿಸುವ ಅತಿ ಹುಮ್ಮಸ್ಸು ,ಡಯಾಬಿಟಿಸ್ ನಿಂದ ಯಾರೂ ಕಾಲು ಕಳೆದು ಕೊಳ್ಳಬಾರದು ಎನ್ನುವ ತುಡಿತ ಗ಼ೆಳತಿಯೊಬ್ಬಳನ್ನು ಕಾಣಲು ಸಿಟಿಗೆ ಹೋದೆ ,ಎದ್ರೂ ಕಾಲಿಲ್ಲದ ತರುಣ ಭಿಕ್ಷುಕ ,ಮನ ಕರಗಿ ಅವನೆದುರು ಕೂತು ಪುಟ್ಟ ಭಾಷಣ ಮಾಡಿ ಮನವೊಲಿಸಿ ಆಟೋದಲ್ಲಿ ಜೈನ ಆಸ್ಪತ್ರೆಗೆ ಕರೆದುಕೊಂಡು ಹೋದೆ ,ನಮ್ಮ ಉಚಿತ ಕಾಲು ಹಾಕುವ ಕಡೆ ಕುಳ್ಳಿರಿಸಿ .ಊಟ ಕೊಟ್ಟು ,ಅಳತೆ ನಂತರ ,ವಾರ ಕಳೆದು ನಮ್ಮ ಕಾಲು ರಕ್ಷಕ ಪಡೆಯ ಸಹಾಯದಿಂದ ಪುನಹಾ ಕರೆಸಿ ,ಕಾಲು ಹಾಕಿಸಿ ,ನಡೆಯುವ ತರಬೇತಿ ಕೊಟ್ಟು ಕಳಿಸುವಾಗ ಧನ್ಯ ಭಾವ ... ಗುರುತಿನವರ ಅಂಗಡಿಯಲ್ಲಿ ಮೂಟೆಗಳಿಗೆ ಸೀಲ್ ಹಾಕುವ ಕೆಲಸ ಕೊಡಲೂ ಒಪ್ಪಿಸಿಯಾಯಿತು ... .ನನ್ನ ಬೇರೆ ಕೆಲಸ ,ಯೋಜನೆಗಳಲ್ಲಿ ಅವನ ಪರಿವೇ ಇರಲಿಲ್ಲ , ಒಂದೂವರೆ ವರ್ಷದ ನಂತರ ನಮ್ಮ ಉಚಿತ ಕಾಲಿನ ಘಟಕದವರು ಸಿಕ್ಕಿ ನಿಮ್ಮ ಕಡೆಯವನು ಪುನಹಾ ಭಿಕ್ಷೆಗೆ ಕೂತನಲ್ಲ ಅಂದಾಗ ,ಕೋಪದಿಂದ ,ಕಳವಳದಿಂದ ಅದೇ ಜಾಗ ಹುಡುಕಿ ಧಾವಿಸಿದೆ ,ಇನ್ನಷ್ಟು ಹುರುಪಿನಿಂದ ಭಿಕ್ಷೆ ಬೇಡುತ್ತಿದ್ದ ಅವನು ,ನನ್ನತ್ತ ನಿರ್ಲಕ್ಷ್ಯದಿಂದ ನೋಡಿದ ,ಗುರುತು ಮರೆತಿರಬಹುದೆಂದು ನೆನಪಿಸಿ ಕಾಲೆಲ್ಲಿ ಎಂದೆ ? ಹೋಗಮ್ಮ ಹೋಗು ,ನಿನ್ನ ಕಾಲೇನೂ ನಂಗೆ ಬೇಡ ,ಆ ಕೆಲಸದಲ್ಲಿ ನಂಗೆ ಇರೂಕಾಗಲ್ಲ ,ಭಿಕ್ಷೆ ಬೇಡಿದ್ರೆ ಎಲ್ಲಾರ್ ಜೀವ್ನ ನಡ್ಯುತ್ತೆ ಅಂದ ..ಎಷ್ಟು ಓಲಿಸಿದರೂ ಬರಲೊಲ್ಲ .. ಕೋಪದಲ್ಲಿ ವಾಪಸ್ಸು ಬಂದವಳಿಗೆ ಅಳು ,ನಿಸ್ಸಹಾಯಕತೆ .. ಮುoದೆಂದೂ ಭಿಕ್ಷುಕರ ಮನವೊಲಿಸಿಲ್ಲ .. ತಾನಾಗಿಯೇ ಬಂದವರಿಗೆ ಉಚಿತ ಕಾಲಿಲ್ಲದೇ ಹೋಗಲು ಬಿಟ್ಟಿಲ್ಲ . ''ಭಿಕ್ಷೆ ಅಷ್ಟೊಳ್ಳೆ ಆದಾಯದ ಕಾಯಕವೇ ?''

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ